Home ಜಿಲ್ಲೆ ಕಲಬುರಗಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ರಾಘವಚಾರ್ಯ ಜೋಷಿ ಮುಖ್ಯ ಧ್ಯೇಯ; ಸಾವಿತ್ರಿ ಎಂ....

ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದೇ ರಾಘವಚಾರ್ಯ ಜೋಷಿ ಮುಖ್ಯ ಧ್ಯೇಯ; ಸಾವಿತ್ರಿ ಎಂ. ಹಿರೇಮಠ

ಅಫಜಲಪುರ ; ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವುದು ರಾಘವಚಾರ್ಯ ಜೋಷಿ ಅವರ ಮುಖ್ಯ ಉದ್ದೇಶವಾಗಿದೆ ಎಂದು ಅತಿಥಿ ಶಿಕ್ಷಕಿ ಸಾವಿತ್ರಿ ಎಂ. ಹಿರೇಮಠ ಹೇಳಿದರು.

ತಾಲೂಕಿನ ಬಿದನೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ರಾಘವಾಚಾರ್ಯ ಜೋಷಿ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ಸನ್ಮಾನ ಸಮಾರಂಭನ್ನುದ್ದೇಶಿಸಿ ಮಾತನಾಡಿದ ಅವರು, ನಮ್ಮ ಶಾಲೆಯ ಮುಖ್ಯಗುರುಗಳಾಗಿ ಶಾಲೆಯಲ್ಲಿರುವ ಎಲ್ಲ ಶಿಕ್ಷಕರು ಹಾಗೂ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಬಯಸುವ ದೊಡ್ಡ ಮನಸ್ಸಿನವರು ಎಂದು ಜೋಷಿ ಅವರ ಕಾರ್ಯವನ್ನು ಸಾವಿತ್ರಿ ಹಿರೇಮಠ ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ ಮಾಣಿಕರಾವ್ ಕುಲಕರ್ಣಿ, ಅಕ್ಕಮಹಾದೇವಿ ಪಾಟೀಲ್, ಸತೀಶ, ರಾಜಶ್ರೀ ಪಾಟೀಲ್, ಲಕ್ಷ್ಮೀ ಬಾಣೆಕರ್, ಜ್ಯೋತಿಲಕ್ಷ್ಮಿ, ಅಶ್ವಿನಿ ಹೂಗಾರ, ಚಂದ್ರಕಲಾ ಕುಲಕರ್ಣಿ, ನಗೀನಾ, ಅತಿಥಿ ಶಿಕ್ಷಕರಾದ ಮಲ್ಲಯ್ಯ ಗುತ್ತೇದಾರ, ಪ್ರಭಾವತಿ ಸೇರಿದಂತೆ ಶಾಲೆಯ ಶಿಕ್ಷಕರು, ಮಕ್ಕಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ಜೋಷಿ ಅವರ ಸೇವೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಶಾಲೆ ಹಾಗೂ ಗ್ರಾಮಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಮುಂದಿನ ದಿನಗಳಲ್ಲಿ ಅವರಿಗೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿ, ಪುರಸ್ಕಾರಗಳು ಲಭಿಸಲಿ ಎಂದು ಹಾರೈಸಿದರು.

-ಸಾವಿತ್ರಿ ಎಂ.ಹಿರೇಮಠ
ಅತಿಥಿ ಶಿಕ್ಷಕಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಿದನೂರ