
ಕೋಲಾರ,ಡಿ.೨೭- ಪಂಚಾಯತಿಗಳಲ್ಲಿ ಸಿಬ್ಬಂದಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸಬೇಕೆಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ್ ಹೇಳಿದರು.
ಗ್ರಾಮ ಪಂಚಾಯತಿ ಕ್ಲಾರ್ಕ್ ಕಮ್ ಡೇಟಾ ಎಂಟ್ರಿ ಆಪರೇಟರ್ ಕ್ಷೇಮಾಭಿವೃದ್ಧಿ ಸಂಘ ಕೋಲಾರ ವತಿಯಿಂದ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಂಪ್ಯೂಟರ್ ಆಪರೇಟರ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಗ್ರಾಮ ಪಂಚಾಯತಿಗಳಲ್ಲಿ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸೌಜನ್ಯದಿಂದ ವರ್ತಿಸಬೇಕು. ಅಂತಹವರಿಗೆ ನಮ್ಮ ಬೆಂಬಲ ಸದಾ ಸಿಗಲಿದೆ ಎಂದ ಅವರು ಉತ್ತಮ ಸೇವೆ ಸಲ್ಲಿಸುತ್ತಿರುವವರನ್ನು ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಸಂಪರಾಜ, ತಾಲೂಕು ಅಧ್ಯಕ್ಷ ಸತೀಶ್ ಕುಮಾರ್ ಜಿ.ಎಸ್, ಮಂಜುನಾಥ್ ಪ್ರಸಾದ್, ಅಶೋಕ್ ಕುಮಾರ್ (ಎಡಿ), ಮಧುಮತಿ ಹೆಚ್.ಸಿ, ಮುನಿರಾಜು, ಕರಿಬಸಪ್ಪ, ಭಾಸ್ಕರ್ ಸಿ, ಹರೀಶ್ ಟಿ.ಸಿ, ಗ್ರಾಮ ಪಂಚಾಯಿತಿಯ ಡಾಟಾ ಎಂಟ್ರಿ ಆಪರೇಟರ್‌ಗಳ ಕ್ಷೇಮಾಭಿವೃದ್ಧಿ ಸಂಘ ಕೋಲಾರದ ಪದಾಧಿಕಾರಿಗಳಾದ ಅಧ್ಯಕ್ಷ ರವಿಕುಮಾರ್ ಉಪಾಧ್ಯಕ್ಷೆ ಪದ್ಮಾವತಮ್ಮ, ಕಾರ್ಯದರ್ಶಿ ಗಣೇಶ್ ಕೆ.ಎಮ್, ಖಜಾಂಚಿ ವರದರಾಜ ಕೆ.ಎನ್, ಗಾಯಿತ್ರಿ ಜಿ, ಅನಂತ್, ಎಲ್ಲಾ ಗ್ರಾಮ ಪಂಚಾಯಿತಿಗಳ ಕಂಪ್ಯೂಟರ್ ಆಪರೇಟರ್‌ಗಳು ಉಸ್ಥಿತರಿದ್ದರು.


























