ಇಟಗಾ (ಕೆ) ಮತ್ತು ತಾಂಡಾದಲ್ಲಿ ಮೂಲಭೂತ ಸೌಕರ್ಯ ಒದಗಿಸಿ : ಗುಂಡು ಚವ್ಹಾಣ

ಕಲಬುರಗಿ:ಮೇ.27: ಅಫಜಲಪೂರ ಶಾಸಕರಾದ ಎಮ್.ವಾಯ್. ಪಾಟೀಲ ಅವರು ಇಟಗಾ (ಕೆ) ತಾಂಡಾ ಹಾಗೂ ಗ್ರಾಮವನ್ನು ಕಡೆಗಣನೆ ಮಾಡುತ್ತಿದ್ದಾರೆ ಎಂದು ಇಟಗಾ (ಕೆ) ಮತ್ತು ತಾಂಡಾ ಗ್ರಾಮ ಪಂಚಾಯತ ಸದಸ್ಯ ಗುಂಡು ಚವ್ಹಾಣ ಅವರು ತಿಳಿಸಿದ್ದಾರೆ.
ಶಾಸಕರು 2 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಸುಮಾರು 8 ವರ್ಷವಾಯಿತು ಆದರು ಶಾಸಕರು ಇವತ್ತಿನ ವರೆಗೆ ಇಟಗಾ (ಕೆ) ತಾಂಡಾ ಕಡೆ ಗಮನ ಹರಿಸಿಲ್ಲ ಮತ್ತು ಇಲ್ಲಿರುವ ಕುಂದು ಕೋರತೆಗಳು ಯಾರು ಕೇಳುವವರಿಲ್ಲದಂತಾಗಿದೆ.
ಇಟಗಾ (ಕೆ) ಗ್ರಾಮದಿಂದ ತಾಂಡಾಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ವಾಹನ ಸವಾರರು ಹಾಗೂ ನಡೆದುಕೊಂಡು ಹೋಗುವ ಜನರು ಕೂಡಾ ಪರದಾಡುತ್ತಿದ್ದಾರೆ. ತಮ್ಮ ಅವಧಿಯಲ್ಲಿ ಶಾಸಕರು ತಾಂಡಾಕ್ಕೆ ಒಂದು ಬುಚ್ಚಿ ಮಣ್ಣುಕೂಡಾ ಹಾಕಿರುವುದಿಲ್ಲ,
ಶಾಸಕರೇ ತಾವೂ ಕೂಡಾ ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದೀರಾ ಅದು ತಮಗೆ ಗೊತ್ತಿರಬಹುದು ಒಂದು ಶಾಲೆ ಅಂದರೆ ಹೇಗಿರಬೇಕು ಅನ್ನುವ ಪರಿಕಲ್ಪನೆ ಕೂಡ ಶಾಸಕರಿಗಿಲ್ಲ ನಮ್ಮ ತಾಂಡಾದಲ್ಲಿ ಅನುದಾನಿತ ಶಾಲೆ ಇದೆ ಈ ಶಾಲೆಗೆ ಯಾವುದೇ ತರಹದ ಮೂಲಭೂತ ಸೌಕರ್ಯಗಳಿಲ್ಲ ಕುಡಿಯುವ ನೀರು ಸರಿಯಾಗಿ ಕೋಣೆಗಳಿಲ್ಲ ಶೌಚಾಲಯವಿಲ್ಲ ಕಂಪೌಡ ಹಾಗೂ ಆಟದ ಮೈದಾನ ಯಾವುದೇ ಒಂದು ಸೌಕರ್ಯಕೂಡ ಇಲ್ಲ ಬಡವರ ಮಕ್ಕಳು ಶಾಲೆ ಕಲಿಯಲು ಹೇಗೆ ಸಾಧ್ಯ ಈ ಶಾಲೆಯ ಬಗ್ಗೆ ಅಧಿಕಾರಿಗಳಿಗೂ ಸಂಪೂರ್ಣ ಆರಿವಿದ್ದರೂ ಕೂಡ ಅರಿವಿಲ್ಲದಂತೆ ಕುಳಿತ್ತಿದ್ದಾರೆ. ಅಧಿಕಾರಿಗಳಿಗೆ ಸೂಮಾರು ನಾಲ್ಕು ವರ್ಷದಿಂದ ಅರ್ಜಿಗಳು ಕೊಟ್ಟು ಕೊಟ್ಟು ಸಾಕಾಗಿ ಹೋಗಿದೆ. ಅಧಿಕಾರಿಗಳಾಗಲಿ ಶಾಸಕರಾಗಲಿ ಯಾರು ಕೂಡ ತಲೆಕಡಿಸಿಕೊಳ್ಳುತ್ತಿಲ್ಲ ಹಾಗಾದರೆ ಶಿಕ್ಷಣದಲ್ಲಿ ನಮ್ಮ ಜಿಲ್ಲೆ ಕೋನೆ ಸ್ಥಾನ ಬರಲಿಲ್ಲ ಅಂದ್ರೇನು ಮೋದಲನೇ ಸ್ಥಾನ ಲಭಿಸಬೇಕಾಗಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.