ಜೇವರ್ಗಿ: ಡಿ.೩:ಸಂವಿಧಾನ ಸಮರ್ಪಣಾ ದಿನದಂದು ದಲಿತ ಮುಖಂಡ ಮೇಲೆ ದೈಹಿಕ ಹಲ್ಲೆ ನಡೆಸಿದ ಶಾಸಕನ ಹಿಂಬಾಲಕ ಮಾರ್ತಂಡಪ್ಪ ನಾಯಕರವರನ್ನು ಗಡಿಪಾರು ಪಿ ಎಸ್ ಐ ಅಮಾನ ತ್ತು ಮಾಡಬೇಕು ಎಂದು ಜೇವರ್ಗಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಆಗ್ರಹಿಸಿದೆ. ಪಟ್ಟಣದ ಮಿನಿ ವಿಧಾನಸೌಧಕ್ಕೆ ಮೆರವಣಿಗೆ ಮೂಲಕ ಆಗಮಿಸಿ ಮಾತನಾಡಿದ ದಲಿತ ಸಂಘಟನೆಗಳ ಸಮನ್ವಯ ಸಮಿತಿ ಸದಸ್ಯರು ಮಾತನಾಡಿ, ಈ ಕೂಡಲೇ ಹಾಗೂ ಮಾರ್ತಂಡಪ್ಪ ನಾಯಕನನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದರು.
ಸುರಪುರ ಪಟ್ಟಣದ ಸರ್ವೆ ನಂ ೭/೩ರಲ್ಲಿ ಕಳೆದ ೪೩ವರ್ಷಗಳಿಂದ ಅಂಬೇಡ್ಕರ್ ವೃತ್ತದಲ್ಲಿ ಗ್ರಂಥಾಲಯ ಹಾಗೂ ಸಾಂಸ್ಕೃತಿಕ ಭವನ,ಉದ್ಯಾನವನ ಉಳಿದ ೩೭ ಗುಂಟೆ ಜಮೀನು ಮಂಜೂರಾತಿ ಮಾಡಬೇಕು.
ದಲಿತರ ಮೇಲೆ ನಿರಂತರ ಹಲ್ಲೆ ತರವಲ್ಲಚಂದ್ರಶೇಖರ ಹರನಾಳಅನಾವಶ್ಯಕ ಶ್ರೀಶೈಲ ದುರ್ಗಪ್ಪ ಚಿಂಚೋಡಿ ಬೀರನೂರ ಮಾನಪ್ಪ ಕಟ್ಟಿಮನಿ ಸೋಮು ಕಟ್ಟಿಮನಿ ಸೇರಿದಂತೆ ೯ಜನರ ಮೇಲೆ ದೂರು ದಾಖಲಿಸಿದ್ದು ಅಕ್ಷಮ್ಯ ಅಪರಾಧ ಎಂದು ಕಟುವಾಗಿ ಟೀಕಿಸಿದರು. ಭೂ ಮಂಜೂರಾತಿ ಮಾಡುವಲ್ಲಿ ವಿಳಂಭ ಧೋರಣೆ ಮಾಡುತ್ತಿರುವ ತಹಸೀಲ್ದಾರರವರನ್ನು ಕೂಡಲೇ ವರ್ಗಾವಣೆ
ಮಾಡಬೇಕು ಹಾಗೂ ಜೇವರ್ಗಿ ತಾಲ್ಲೂಕಿನ ಹಾಲಗಾ ಗ್ರಾಮದ ದಲಿತ ಯುವಕ ಮಾಳಪ್ಪ ಪೂಜಾರಿ ಮೇಲೆ ಹಲ್ಲೆ ಮಾಡಿದ ವ್ಯಕ್ತಿಗಳನ್ನು ಕೂಡಾ ಬಂಧಿಸಬೇಕೆAದು ಆಗ್ರಹಿಸಿದರು.
ದಲಿತರ ಮೇಲೆ ಹಲ್ಲೆಗಳು ನಿತ್ಯ ನಿರಂತರವಾಗುತ್ತಿದೆ ಅದು ಸರಿಯಾದ ಬೆಳವಣಿಗೆ ಅಲ್ಲ.ಇಲ್ಲದಿದ್ದರೆ ನಾವು ಬಿ ಶ್ಯಾಮಸುಂದರ ರವರ ಭೀನು ಆರ್ಮಿ ಆಗಬೇಕಾದಿತು ಎಚ್ಚರ.
ಈ ಪ್ರತಿಭಟನೆಯಲ್ಲಿ ಮಾಜಿ ಜಿಪಂ ಸದಸ್ಯ ಚಂದ್ರಶೇಖರ ಹರನಾಳಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ,ಶ್ರೀಹರಿ ಕರಕಿಹಳ್ಳಿ,ಸಿದ್ರಾಮ ಕಟ್ಟಿದೇವಿಂದ್ರ ಗಂವ್ಹಾರ ಮಾಪಣ್ಣ ವರ್ಮಾ, ಮರೆ ಪ್ಪ ಬೇಗಾರ, ಯಶವಂತ ಬಡಿಗೇರ, ಸಿದ್ದಮ್ಮು ಶರ್ಮಾ, ಶ್ರೀಮಂತ ಕಿಲ್ಲೆದಾರಬಾಜು ಹಾಲಗಾ ಗುಂಡಪ ಜಡಗಿ, ಸಂಗಣ್ಣ ಗುಡೂರ ಆನೇಕರು ಇದ್ದರು.























