Home ಜಿಲ್ಲೆ ಕಲಬುರಗಿ ಕಳಪೆ ಹತ್ತಿಬೀಜ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಎತ್ತಿನಬಂಡಿಯೊಂದಿಗೆ ಪ್ರತಿಭಟನೆ

ಕಳಪೆ ಹತ್ತಿಬೀಜ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಎತ್ತಿನಬಂಡಿಯೊಂದಿಗೆ ಪ್ರತಿಭಟನೆ

ಜೇವರಗಿ.ಮೇ 10: ಕಳಪೆ ಮಟ್ಟದ ಹತ್ತಿ ಬೀಜ ಮಾರಾಟ ಎಫ್‍ಐಡಿ ರದ್ದು ಮಾಡಲು ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನ ತಾಲೂಕು ಸಮಿತಿಯಿಂದ ಎತ್ತಿನ ಬಂಡಿ ಮುಖಾಂತರ ಪ್ರತಿಭಟನೆ ಮಾಡಲಾಯಿತು.
ರಾಜ್ಯ ಕಾರ್ಯದರ್ಶಿ ಮಹೇಶ್ ಸುಬೇದಾರ ರಾಜ್ಯ ಸಹ ಕಾರ್ಯದರ್ಶಿ ಅಲ್ಲಾ ಪಟೇಲ್ ಇಜೇರಿ ಮಾತನಾಡಿ ಯಾವುದೇ ಕಾರಣಕ್ಕೂ ಕಳಪೆ ಮಟ್ಟದ ಬೀಜ ವಿತರಣೆ ಮಾಡಬಾರದು ಒಂದು ವೇಳೆ ವಿತರಣೆ ಮಾಡಿದರೆ ಅವರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು ನಂತರ ತಾಲೂಕ ಅಧ್ಯಕ್ಷರಾದ ಮಲ್ಲನಗೌಡ ಪಾಟೀಲ ಗೌನಳ್ಳಿ ಮಾತನಾಡಿ,ಎಫ್ ಐ ಡಿ ಮೂಲಕ ರೈತರಿಗೆ ರಸಗೊಬ್ಬರ ವಿತರಣೆ ಮಾಡುವುದನ್ನು ರದ್ದುಗೊಳಿಸಿ ಮೊದಲಿನಂತೆ ಸರಳವಾಗಿ ವಿತರಣೆ ಮಾಡಬೇಕು.
ಕಳಪೆ ಮಟ್ಟದ ಹತ್ತಿ ಬೀಜ ಮಾರಾಟ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು ನಂತರ ತಹಸೀಲ್ದಾರ್ ಮಲ್ಲಣ್ಣ ಯಲಗೋಡರಿಗೆ ಮನವಿ ಪತ್ರ ಸಲ್ಲಿಸಿದರು ಈ ಸಂದರ್ಭದಲ್ಲಿ ಮುಖಂಡರಾದ ಸಂಗೀತ ಕಲ್ಲೂರ ಶೇಖಮ್ಮ್ ನೆಲೋಗಿ ಪ್ರಭಾವತಿ ನೆಲೋಗಿ ಬಸಮ್ಮ ಜೇವರ್ಗಿ ಶಾರದಾ ಜೇವರ್ಗಿ ಶಾಂತಮ್ಮ ಜೇವರ್ಗಿ ಭೀಮು ಖಾದ್ಯಪುರ ಜಯ ಕರ್ನಾಟಕ ತಾಲೂಕ ಅಧ್ಯಕ್ಷ ಭೀಮಶಂಕರ್ ಜನಿವಾರ ಭಾಗಪ್ಪ ಗೌನಳ್ಳಿ ನಮ್ಮ ಕರ್ನಾಟಕ ಸೇನೆ ತಾಲೂಕು ಅಧ್ಯಕ್ಷ ರವಿಪಾಟೀಲ್ ಅನೇಕರಿದ್ದರು