
ಕಲಬುರಗಿ:ಜ.18:ರಾಜ್ಯ ಸರಕಾರದ ವೈಫಲ್ಯ ಹಾಗೂ ಎಸ್ ಸಿ ಪಿ ಟಿ ಎಸ್ ಪಿ ಹಣ ಗ್ಯಾರಂಟಿ ಯೋಜನೆಗಳಿಗೆ ದುರ್ಬಳಕೆ ಮಾಡಿಕೊಳ್ಳುತ್ತಿರುವ ರಾಜ್ಯ ಸರಕಾರದ ವಿರುದ್ಧ ಜ.19 ಸೋಮವಾರದಂದು ನಾಳೆ ಬಿಜೆಪಿ ಎಸ್ ಸಿ ಮೋರ್ಚಾದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯನ್ನು ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಮಾಡಲಾಗುವುದು ಎಂದು ಎಸ್ ಸಿ ಮೋರ್ಚಾದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ್ ಜೀನಕೇರಿ ಅವರು ತಿಳಿಸಿದ್ದಾರೆ.
ನಗರದಲ್ಲಿ ಐವಾನ್ ಶಾಹಿ ಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾಳೆ ರಾಜ್ಯ ಕಾಂಗ್ರೇಸ್ ಸರಕಾರದ ವಿರುದ್ಧ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿದೆ, ಎಸ್ ಸಿ ಪಿ ಟಿ ಎಸ್ ಪಿ ಹಣವನ್ನ ಕಾಂಗ್ರೇಸ್ ಸರಕಾರ ಬಳಸಿಕೊಂಡಿದೆ, ದಲಿತ ಸಚಿವನಾಗಿ ಎಚ್ ಸಿ ಮಹಾದೇವಪ್ಪ ಅವರು ದಲಿತರಿಗೆ ಅನ್ಯಾಯ ಮಾಡುತ್ತಿದ್ದಾರೆ, ಈ ರೀತಿ ಅನ್ಯಾಯ ಮಾಡುತ್ತಿರುವ ಹಿನ್ನಲೆಯಲ್ಲಿ ಸಚಿವರ ವಿರುದ್ಧವು ಕೂಡ ಪ್ರತಿಭಟನೆ ಮಾಡಲಾಗುತ್ತಿದೆ, ಸಿಎಂ ಅವರು ಅಹಿಂದ ಪರ ಇದ್ದೇನೆ ಎಂದು ಬೊಗಳೆ ಬಿಡುತ್ತಾರೆ ಹೊರತು ಯಾವುದೇ ಒಂದು ಒಳ್ಳೆ ಯೋಜನೆ ನೀಡಿಲ್ಲ, ಇರೋ ಯೋಜನೆಗಳನ್ನ ಹಾಳು ಮಾಡುತ್ತಿದ್ದಾರೆ, ಈ ಕಾಂಗ್ರೇಸ್ ಸರಕಾರ ದಲಿತಪರ ಇಲ್ಲ, ಕೇವಲ ದಲಿತಪರ ಎಂದು ವೋಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಈ ಸಂದರ್ಭದಲ್ಲಿ ರಾಜು ವಾಡೇಕರ್ ಅವರು ಮಾತನಾಡಿ ನಾಳೆ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದಲ್ಲಿ ಬೆಳಗ್ಗೆ 11 ಗಂಟೆಗೆ ಈ ಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದರು.
ಈ ಸಮಯದಲ್ಲಿ ರಮೇಶ್ ವಾಡೇಕರ್ ಸೇರಿದಂತೆ ಅನೇಕರು ಮಾತನಾಡಿದರು.
ಈ ಸುದ್ದಿಗೋಷ್ಠಿಯಲ್ಲಿ ರಾಜು ಕಟ್ಟಿಮನಿ, ಮಲ್ಲಿಕಾರ್ಜುನ್ ಸರಡಗಿ, ದತ್ತು ಹಯ್ಯಾಳಕರ್, ಸಚಿನ ಕಟ್ಟಿಮನಿ, ಪ್ರದೀಪ ಬಾಚನಾಳ, ಶ್ರೀಮಂತ ಭಂಡಾರಿ, ಭಂಡೇಶ್ ಆರ್, ರಾಜೇಶ್ ಶಿವನೂರ್, ಪ್ರದ್ಥೀರಾಜ್ ರಾಂಪೂರ್, ಮರಲಿಂಗ ಸೇರಿದಂತೆ ಅನೇಕರು ಹಾಜರಿದ್ದರು.























