ಬಸ್ ನಿಲ್ದಾಣ-ಕಾಲೇಜಿಗಾಗಿ ಪ್ರತಿಭಟನಾ ಧರಣಿ 30 ರಂದು

ವಾಡಿ:ಡಿ.28: ಪಟ್ಟಣದಲ್ಲಿ ಕೇಂದ್ರ ಬಸ್ ನಿಲ್ದಾಣ, ಸರ್ಕಾರಿ ಪದವಿಪೂರ್ವ, ಪದವಿ ಮಹಾವಿದ್ಯಾಲಯ, ಸಾರ್ವಜನಿಕ ಗ್ರಂಥಾಲಯ ಸ್ಥಾಪನೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಜನಧ್ವನಿ ಜಾಗೃತ ಸಮಿತಿ ವತಿಯಿಂದ ಡಿ.30 ರಂದು ಬೆಳಿಗ್ಗೆ 10:30ಕ್ಕೆ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಧರಣಿ ನಡೆಸುವ ಮೂಲಕ ಹತ್ತು ಸಾವಿರ ಜನರ ಸಹಿಗಳನ್ನು ತಾಲೂಕು ಆಡಳಿತಕ್ಕೆ ಸಲ್ಲಿಸಲಾಗುತ್ತಿದೆ ಎಂದು ಸಮಿತಿ ಅಧ್ಯಕ್ಷ ವೀರಭದ್ರಪ್ಪ ಆರ್.ಕೆ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಚಿತ್ತಾಪುರ ತಾಲ್ಲೂಕಿನ ಪ್ರಮುಖ ಪಟ್ಟಣವಾಗಿರುವ ವಾಡಿ, ಸರ್ಕಾರಿ ಸೌಲಭ್ಯಗಳಿಂದ ವಂಚಿತಗೊಂಡಿದೆ. ಹದಿಮೂರು ಪ್ರೌಢ ಶಾಲೆಗಳಿದ್ದರೂ ಸರ್ಕಾರ ಕಾಲೇಜು ಮಂಜೂರು ಮಾಡಿಲ್ಲ. ಇದರಿಂದ ಬಡ ವಿದ್ಯಾರ್ಥಿಗಳ ಕಾಲೇಜು ಶಿಕ್ಷಣದ ಕನಸು ಕಮರುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದರೂ ಕೇಂದ್ರ ಬಸ್ ನಿಲ್ದಾಣ ಸ್ಥಾಪನೆ ಮಾಡಿಲ್ಲ. ಪ್ರಯಾಣಿಕರು ಮೂಲಭೂತ ಸೌಕರ್ಯಗಳಿಗಾಗಿ ಪರದಾಡುತ್ತಲೇ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ. ಸಾರ್ವಜನಿಕ ಗ್ರಂಥಾಲಯ ಸೌಲಭ್ಯ ಕಸಿದುಕೊಂಡು ಪುಸ್ತಕ ಪ್ರಿಯರಿಗೆ ಅನ್ಯಾಯ ಮಾಡಲಾಗಿದೆ. ಹೊರಗಿನಿಂದ ಪಟ್ಟಣಕ್ಕೆ ಬರುವವರಿಗೆ ಶುಲಭ ಶೌಚಾಲಯ ವ್ಯವಸ್ಥೆ ಇಲ್ಲ. ಮಹಿಳೆಯರ ನೈಸರ್ಗಿಕ ಕ್ರಿಯೆಯ ಪರಿಸ್ಥಿತಿ ಗಂಭೀರವಾಗಿದೆ. ಪುರಸಭೆ ಆಡಳಿತ ಕೇಂದ್ರ ಸ್ಥಾನದಲ್ಲಿ ಒಂದೂ ಸಾರ್ವಜನಿಕ ಅದಲದೆ ಬಲರಾಮ ಚೌಕ ನಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದೆ ಮತ್ತು ಪ್ರಮುಖ ವೃತ ಇದೆ ಅಲ್ಲಿ ಜನ ಓಡಾಡುವ ಸ್ಥಳ್ಳ ಇಲ್ಲಿ ದಿನಾಲು ಬೇರೆ ಬೇರೆ ಕಡೆಯಿಂದ ಬಸ್ ಪ್ರಯಾಣಿಕರು ಬರುತ್ತಾರೆ ಆದರೆ ಸೌಚಾಲಯ ಇಲದೆ ಟಿನ ಶೆಡ್ ಕಡೆ ಪುರುಷರು ಹೋಗುತ್ತಾರೆ ಆದರೆ ಮಹಿಳ್ಳೆಯರು ಹಿಡಿ ಶಾಪ್ ಹಾಕುತ್ತಾರೆ ಇಂತಹ ಪ್ರಸ್ಥಿತಿ ವಾಡಿ ಜನರದು ಮೂತ್ರಾಲಯಗಳಿಲ್ಲ. ಇದು ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ದೂರಿದ್ದಾರೆ.

ಆದ್ದರಿಂದ ಜನರ ಗಂಭೀರ ಸಮಸ್ಯೆಗಳನ್ನು ಇಟ್ಟುಕೊಂಡು ಜನಧ್ವನಿ ಜಾಗೃತ ಸಮಿತಿಯು ಕಳೆದ ಹತ್ತು ದಿನಗಳಿಂದ ಸಹಿ ಸಂಗ್ರಹ ಅಭಿಯಾನ ನಡೆಸಿದೆ. ಪಟ್ಟಣದ ಪುರಸಭೆ ವ್ಯಾಪ್ತಿಯ ವಿವಿಧ ಬಡಾವಣೆಗಳ ಜನರಿಂದ ಹಾಗೂ ವ್ಯಾಪಾರಿಗಳಿಂದ, ಪ್ರೌಢ ಶಾಲೆಗಳ ಸಾವಿರಾರು ವಿದ್ಯಾರ್ಥಿಗಳಿಂದ ಹಸ್ತಾಕ್ಷರ ಪಡೆಯಲಾಗಿದೆ. ಸಾರ್ವಜನಿಕರು ಮುಕ್ತ ಮನಸ್ಸಿನಿಂದ ಸಹಿ ಮಾಡಿ ಹೋರಾಟವನ್ನು ಬೆಂಬಲಿಸಿದ್ದಾರೆ. ಸಂಗ್ರಹಿಸಲಾಗಿರುವ ಹತ್ತು ಸಾವಿರ ಸಹಿಗಳ ದಾಖಲೆಗಳನ್ನು ಪ್ರತಿಭಟನಾ ಧರಣಿ ಸ್ಥಳಕ್ಕೆ ಆಗಮಿಸುವ ಸಹಾಯಕ ಆಯುಕ್ತರು ಸೇಡಂ ಹಾಗೂ ತಹಶೀಲ್ದಾರರು ಚಿತ್ತಾಪುರ ಇವರಿಗೆ ಸಲ್ಲಿಸಿ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಈ ಹೋರಾಟದಲ್ಲಿ ವಿವಿಧ ಬಡಾವಣೆಗಳ ನೂರಾರು ಜನರು ಪಾಲ್ಗೊಳ್ಳುವರು ಎಂದು ವೀರಭದ್ರಪ್ಪ ಆರ್.ಕೆ ತಿಳಿಸಿದ್ದಾರೆ.