Home ಜಿಲ್ಲೆ ಕಲಬುರಗಿ ರೇವೂರ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ, ರಸ್ತೆತಡೆ

ರೇವೂರ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ, ರಸ್ತೆತಡೆ

ಕಲಬುರಗಿ,ಜೂ.7-ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ ಅವರ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದುಪಡಿಸುವಂತೆ ಹಾಗೂ ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರೆ ಮಾಧ್ಯಮಗಳಲ್ಲಿ ಅವಹೇಳನಕಾರಿ ಹೇಳಿಕೆ ನೀಡಿರುವ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ಪಟ್ಟಣ ಸರ್ಕಲ್‍ನ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಪಟ್ಟಣ ಕ್ರಾಸ್ ಹತ್ತಿರ ಇಂದು ಪ್ರತಿಭಟನೆ ಮತ್ತು ರಸ್ತೆ ತಡೆ ನಡೆಸಿದರು.
ಪಟ್ಟಣ ಬಿಜೆಪಿ ಮುಖಂಡ ಶರಣಯ್ಯ ಎಸ್.ಮಠಪತಿ, ಬಿಜೆಪಿ ನಗರ ರೈತ ಮೋರ್ಚಾ ಅಧ್ಯಕ್ಷ ಲಿಂಗರಾಜ ಧೂಳಗೊಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭು ವ್ಹಿ.ಶೀಲ್ಡ, ಭೀಮಳ್ಳಿಯ ಬಿಜೆಪಿ ಮುಖಂಡ ಸಲೀಮ್ ಶಾ, ಸಾವಳಗಿ ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ, ಸುಲ್ತಾನಪೂರ ಬಿಜೆಪಿ ಮುಖಂಡ ಗುರು ಹವಾ, ಸುಭಾಶ್ಚಂದ್ರ ಓಗಿ, ಬಸವರಾಜ ಮಂಗಲಗಿ, ವಿಠ್ಠಲ ಗೌಳಿ, ಅನಿಲಕುಮಾರ ಡಾಂಗೆ, ಮಡಿವಾಳಪ್ಪ ಮಡಿವಾಳ, ಮಲ್ಲಿನಾಥ ಚೋರಗಸ್ತಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರತಿಭಟನೆ ನಂತರ ಸಬ್-ಅರ್ಬನ್ ಪೊಲೀಸ್ ಠಾಣೆ ಸಿಪಿಐ ಅವರ ಮುಖಾಂತರ ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.