ತಹಶೀಲ್ದಾರ್ ವಜಾಕ್ಕೆ ಆಗ್ರಹಿಸಿ ಜೂ೩೦ ಪ್ರತಿಭಟನೆ

ಆನೇಕಲ್.ಜೂ೨೨: ಮೂಲ ಭೂತ ಸೌಲಭ್ಯಗಳಿಗೆ ಆಗ್ರಹಿಸಿ ಹಾಗೆಯೇ ಆನೇಕಲ್ ತಹಶೀಲ್ದಾರ್ ಮತ್ತು ವಿಶೇಷ ತಹಶೀಲ್ದಾರ್ ರವರನ್ನು ಕೂಡಲೇ ಸೇವೆಯಿಂದ ವಜಾ ಮಾಡುವಂತೆ ಆಗ್ರಹಿಸಿ ಜೂನ್ ೩೦ ರಂದು ಆನೇಕಲ್ ತಾಲ್ಲೂಕು ಕಚೇರಿ ಮುಂಬಾಗದಲ್ಲಿ ಆನೇಕಲ್ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಾಗಿದೆ ಎಂದು ಆನೇಕಲ್ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಮರಸೂರು ಡಾ ಎಂ.ಕೃಷ್ಣಪ್ಪರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದರು.


ಇನ್ನು ಕಳೆದ ೮ ತಿಂಗಳ ಹಿಂದೆ ಮೂಲಭೂಲ ಭೂತ ಸೌರ್‍ಯಗಳಿಗೆ ಆಗ್ರಹಿಸಿ ಆನೇಕಲ್ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘ ವತಿಯಿಂದ ಬೃಹತ್ ಹೋರಾಟ ಹಮ್ಮಿಕೊಂಡಿದ್ದೆವು ಆದರೆ ಇದುವರಗೆ ಸಾರ್ವಜನಿಕರ ಸಮಸ್ಯೆಯನ್ನು ಬಗೆಹರಿಸದೆ ಅದಿಕಾರಿಗಳು ತಮ್ಮ ಜೇಬು ತುಂಬಿಸಿಕೊಳ್ಳುವ ಕಾಯಕದಲ್ಲಿ ತೊಡಗಿದ್ದು ಕೂಡಲೇ ಜಿಲ್ಲಾದಿಕಾರಿಗಳು ಆನೇಕಲ್ ತಹಶೀಲ್ದಾರ್ ಮತ್ತು ವಿಶೇಷ ತಹಶೀಲ್ದಾರ್ ರವರನ್ನು ಸೇವೆಯಿಂದ ವಜಾ ಮಾಡುವಂತೆ ಆನೇಕಲ್ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಬೊಮ್ಮಸಂದ್ರ ರೇಣುಕಾ ರವರು ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಆನೇಕಲ್ ಡಾ.ಬಿ.ಆರ್. ಅಂಬೇಡ್ಕರ್ ಯುವಕರ ಸಂಘದ ಕನ್ನಡಾಂಬೆ ಮಂಜು. ಕೋನಸಂದ್ರ ಮಂಜುನಾಥ್. ಮೈಲಾರಿ ಗದಗ್. ನಂದಿನಿ. ಮಂಜುಳ ಮತ್ತು ಪದಾದಿಕಾರಿಗಳು ಹಾಜರಿದ್ದರು.