
ಜೇವರ್ಗಿ: ಜ.೧೮:ತಾಲೂಕಿನ ಅಂಕಲಗಾ ಗ್ರಾಮದ ರೈತನಿಗೆ ಅನ್ಯಾಯವಾಗಿದೆ ೧೯ ರೊಳಗೆ ಸರಿಪಡಿಸುವುದಿದ್ದರೆ ವಿಧಾನಸೌಧ ಎದುರೇ ಪ್ರತಿಭಟನೆ ಮಾಡಲಾಗುತ್ತದೆ ಎಂದು ರೈತ ಮುಖಂಡ ಹಾಗೂ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಕಾರ್ಯದರ್ಶಿಯಾದ ಮಲ್ಲನಗೌಡ ಪಾಟೀಲ್ ಕೆಲ್ಲೂರ್ ಹೇಳಿದರು
ನಂತರ ಮಾತನಾಡಿದವರು ರಾಮು ತಂದೆ ಪೀರಪ್ಪ ಬೇಲೂರು ಅಂಕಲಗಾ ಎಂಬ ವ್ಯಕ್ತಿ ತಂದೆಯವರಾದ ಪೀರಪ್ಪ ತಂದೆ ಯಲ್ಲಪ್ಪ ಬೇಲೂರು ಅಂಕಲಗ ಅವರಿಗೆ ಐಖಙ೬೬೨೫/೭೬-೭೭ ಸಾಲಿನಲ್ಲಿ ಸರಕಾರ ನಮಗೆ ಗ್ರ‍್ಯಾಂಟ್ ಆರ್ಡರ್ ಮಾಡಲಾಗಿತ್ತು ಸರ್ವೇ ನಂಬರ್ ೬೭ ಒಟ್ಟು ವಿಸ್ತರಣಾ ೨೬ ಎಕರೆ ೩೭ ಜಮೀನನ್ನು ನೀಡಿತು ಮುಂಚಿತವಾಗಿ ಫಾರ್ ನಂಬರ್ /೭/ ತುಂಬಿ ಸಾಗುವಳಿಯಲ್ಲಿ ಇದ್ದೇವು ಮುಂದೆ ೧೯೮೧ ರಲ್ಲಿ ಫಾರ್ಮ್ ನಂಬರ್ ೧೦ ಸರಕಾರ ಒದಗಿಸಿ ಕೊಟ್ಟಿತ್ತು ಈ ಮೇಲ್ಕಾಣಿಸಿದ ಎಲ್ಲಾ ಅಂಶಗಳನ್ನು ಮೂಲವಾಗಿ ಪೀರಪ್ಪ ತಂದೆ ಯಲ್ಲಪ್ಪ ಬೇಲೂರು ಅಂಕಲಗಾ ಇವರ ಮಗನಾದ ರಾಮು ತಂದೆ ಪಿರಪ್ಪ ಬೇಲೂರು ಸಾಕಿನ್ ಅಂಕಲಗಾ ರವರು ತಾಲೂಕಿನ ತಶೀಲ್ದಾರ್ ಕಚೇರಿಯಲ್ಲಿ ಆರ್ ಟಿ ಸಿ ಯನ್ನು ಮಾಡಿಕೊಡಬೇಕೆಂದು ಹಲವಾರು ಬಾರಿ ಮನವಿ ಸಲ್ಲಿಸಿದ್ದಾರೆ ಹಲವು ದಿನಗಳಲ್ಲಿ ಈ ಮನವಿಯನ್ನು ಸಹ ಆಯುಕ್ತರ ಕಚೇರಿ ಕಲಬುರ್ಗಿ ಮತ್ತು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸಹ ಮನವೇನು ಕೊಟ್ಟಿದ್ದು ಯಾವುದೇ ರೀತಿಯ ಪರಿಹಾರ ಕಂಡುಕೊಳ್ಳದೆ ಇರುವುದರಿಂದ ನಾವು ದಿನಾಂಕ ೧೯-೦೧.೨೦೨೬ರಂದು ಜೇವರ್ಗಿಯ ತಾಸಿಲ್ದಾರ್ ಕಚೇರಿಯ ಮುಂದೆ ಅನಿದಿಷ್ಟ ಅವಧಿಯ ಧರಣಿ ಸತ್ಯಾಗ್ರಹವನ್ನು ಕೈಗೊಳ್ಳಲು ತೀರ್ಮಾನಿಸಿದ್ದು ಇದಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಎಲ್ಲಾ ಅಧ್ಯಕ್ಷರ ಸಮೇತ ಪದಾಧಿಕಾರಿಗಳು ಭಾಗವಹಿಸಲಿದ್ದು ಮತ್ತು ಇತರ ಸಂಘಟನೆಗಳು ಸಹ ಬೆಂಬಲವನ್ನು ಸೂಚಿಸುತ್ತವೆ ನಮ್ಮ ಹೆಸರಿಗೆ ಸರ್ವೇ ನಂಬರ್ ೬೭ ವಿಸ್ತೀರ್ಣ ೨೬ ಎಕರೆ ೩೭ ಆರ್ ಟಿ ಸಿ ಮಾಡಿಕೊಡಬೇಕೆಂದು ತಿಳಿಸಿದ್ದಾರೆ
























