ಸೇಡಂ, ಆ,೧೧: ತಾಲೂಕಿನ ಮಳಖೇಡ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕೊಂಕನಹಳ್ಳಿ ಗ್ರಾಮದಲ್ಲಿ ಕಳೆದ ಹದಿನೈದು ದಿನಗಳ ಕೆಳಗೆ ನಿಜಶರಣ ಅಂಬಿಗರ ಚೌಡಯ್ಯನವ ಧ್ವಜದ ಕಟ್ಟೆ ಹಾಗೂ ನಾಮಫಲವನ್ನು ಗ್ರಾಮದ ಹನುಮಾನ ದೇವಾಲಯದ ಪಕ್ಕದಲ್ಲಿ ನೆಟ್ಟಿರುವುದನ್ನು ಸಹಿಸಿಕೊಳ್ಳದ ಗ್ರಾಮದ ಮುಖಂಡರು ನಿರಂತರವಾಗಿ ಮಳಖೇಡ ಪಿ.ಎಸ್.ಐ ಅವರ ಮೇಲೆ ಒತ್ತಡ ಹಾಕಿ ಧ್ವಜವನ್ನು ತೆರವುಗೊಳಿಸುವಂತೆ ಗ್ರಾಮದ ಕೊಲಿ ಸಮಾಜದ ಹೋರಾಟಗಾರರು ಮುಖಂಡರಾದ ಹಣಮಂತಪ್ಪ ಭಾವನೋರ ಇವರಿಗೆ ಪಿ.ಎಸ್.ಐ ನಿರಂತರವಾಗಿ ಕಿರುಕುಳ ಕೊಟ್ಟಿರುವುದರ ಪರಿಣಾಮವಾಗಿ ಮನನೊಂದು ಹಣಮಂತಪ್ಪನವರು ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ.ಕಾರಣ ಪಿ.ಎಸ್.ಐ ಅವರೇ ನೇರ ಹೊಣೆಗಾರರಾಗಿದ್ದು ಅವರಿಗೆ ಅಮಾನತು ಮಾಡುವವರೆಗೂ ಮಳಖೇಡ ಪೋಲಿಸ್ ಠಾಣೆಯ ಮುಂದೆ ಹೋರಾಟ ಮಾಡಲು ನಿರ್ಧರಿಸಿದ್ದು ನಾಳೆ (ದಿನಾಂಕ ೧೨-೦೮-೨೦೨೫ ಮಂಗಳವಾರ ಬೆಳ್ಳಿಗ್ಗೆ ೧೧ ಗಂಟೆಗೆ) ಮಳಖೇಡ ಪೋಲಿಸ್ ಠಾಣೆಯ ಎದುರುಗಡೆ ತಾಲೂಕಿನ ಸಮಾಜ ಬಾಂಧವರು, ಯುವಕರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ತಾಲೂಕು ಕೋಲಿ ಕಬ್ಬಲಿಗ ಸಮಾಜದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮೆಕ್ಯಾನಿಕ್ ಅವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿದ್ದಾರೆ.

























