
ಸುರಪುರ:ಫೆ.13:ವಿಬಿ ಜಿ-ರಾಮ್-ಜಿ ಯೋಜನೆ ಹಿಂಪಡೆಯಲು ನಮ್ಮ ಸರ್ಕಾರವು ಕೇಂದ್ರ ಸರಕಾರಕ್ಕೆ ಒತ್ತಾಯಿಸುತ್ತದೆ.ಅಲ್ಲದೆ ನೀವು ಹೋರಾಟ ಮಾಡುತ್ತಿರುವ ನಿಮ್ಮ ಎಲ್ಲಾ ಬೇಡಿಕೆಗಳಿಗಾಗಿ ನಮ್ಮ ಸರ್ಕಾರವು ಕೂಡ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತದೆ ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ತಿಳಿಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾರ್ಮಿಕ ಸಂಘಟನೆಗಳು ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ನಮ್ಮ ಸರಕಾರ ರಾಜ್ಯದಲ್ಲಿರುವ ಎಲ್ಲಾ ಕಾರ್ಮಿಕರು ಹಿಂದುಳಿದವರು ಅಲ್ಪಸಂಖ್ಯಾತರು ವಿದ್ಯಾರ್ಥಿಗಳು ಮಹಿಳೆಯರ ಏಳಿಗೆಗಾಗಿ ಯೋಜನೆಗಳನ್ನು ನೀಡಿದೆ. ಆದರೆ ಕೇಂದ್ರ ಸರ್ಕಾರ ರೈತ ಕಾರ್ಮಿಕ ವಿರೋಧಿ ನಡೆಯನ್ನು ಅನುಸರಿಸುತ್ತಿದ್ದು ಈಗ ವಿಬಿ ಜಿ ರಾಮ ಜಿ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು ಆ ಹೆಸರಿನಂತೆಯೇ ಯೋಜನೆಯು ಕೂಡ ಸರಿಯಾಗಿಲ್ಲ ಎಂದು ವಿರೋಧ ವ್ಯಕ್ತಪಡಿಸಿದರು. ನಿಮ್ಮ ಯಾವುದೇ ಬೇಡಿಕೆಗಳನ್ನು ನಮ್ಮ ಸರ್ಕಾರ ಈಡೇರಿಸುತ್ತದೆ ಅಲ್ಲದೆ ನಾನು ಕೂಡ ನಿಮ್ಮ ಬೇಡಿಕೆಗಳ ಈಡೇರಿಸಲು ಸದಾಕಾಲ ಶ್ರಮಿಸುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ತಮ್ಮ ಹೋರಾಟದ ಅನೇಕ ಬೇಡಿಕೆಗಳನ್ನು ಕೇಂದ್ರ ಸರ್ಕಾರ ಈಡೇರಿಸಲು ಕೇಂದ್ರ ಸರಕಾರಕ್ಕೆ ಒತ್ತಾಯಿಸುವಂತೆ ಹೋರಾಟಗಾರರು ಶಾಸಕರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರಾಜಾ ಕುಮಾರ ನಾಯಕ, ರಾಜಾ ವಾಸುದೇವ ನಾಯಕ, ಮಲ್ಲಣ್ಣ ಸಾಹುಕಾರ ಮುಧೋಳ, ನಿಂಗರಾಜ ಬಾಚಿಮಟ್ಟಿ, ಸೂಗುರೇಶ ವಾರದ, ವೆಂಕಟೇಶ ಹೊಸಮನಿ, ದೇವಿಂದ್ರಪ್ಪ ಪತ್ತಾರ, ಅಹ್ಮದ್ ಪಠಾಣ್, ಅಬ್ದುಲ್ ಗಫರ್ ನಗನೂರಿ, ಹಣಮಂತ್ರಾಯ ಮಡಿವಾಳ,ದೊಡ್ಡ ದೇಸಾಯಿ,ಬಸ್ಸಮ್ಮ ಆಲ್ಹಾಳ, ಪ್ರಕಾಶ ಆಲ್ಹಾಳ,ನಸೀಮಾ ಮುದನೂರ,ತಿಮ್ಮಯ್ಯ ತಳವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.



























