Home ಜಿಲ್ಲೆ ಕಿಲ್ಲನಕೇರಾ ಉಮೇಶ ಕೆ. ಮುದ್ನಾಳ್ ನೇತೃತ್ವದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ

ಕಿಲ್ಲನಕೇರಾ ಉಮೇಶ ಕೆ. ಮುದ್ನಾಳ್ ನೇತೃತ್ವದಲ್ಲಿ ಕುಡಿಯುವ ನೀರಿಗಾಗಿ ಪ್ರತಿಭಟನೆ

ಸೈದಾಪುರ:ಮೇ.3:ಸಮೀಪ ಕಿಲ್ಲನಕೇರಾ ಗ್ರಾಮದಲ್ಲಿ ಕುಡಿಯುವ ನೀರು ಮತ್ತು ಶುದ್ಧ ಕುಡಿಯುವ ನೀರಿನ ಘಟಕ (ಆರೋ ಪ್ಲಾಟ್) ಕೂಡಲೇ ಸರಿಪಡಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ್ ನೇತೃತ್ವದಲ್ಲಿ ನೂರರು ಗ್ರಾಮಸ್ಥರು ಗ್ರಾಮದ ವಿವಿಧ ರಸ್ತೆಯಲ್ಲಿ ತಮಟೆ ಬಾರಿಸುವ ಮುಖಾಂತರ ಖಾಲಿ ಕೊಡ ಹಿಡಿದು ಬೃಹತ್ ಮಿಂಚಿನ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು
ಸರಬರಾಜು ಆಗುವ ನೀರು ಅಲ್ಲಿ ಅಲ್ಲಿ ಸೂರಿಕೆಯಾಗಿ ಕಲುಶಿತ ನೀರು ಮಿಶ್ರವಾಗಿ ಸಾಂಕ್ರಾಮೀಕ ರೋಗದ ಭೀತಿಯಲ್ಲಿದ್ದಾರೆಂದು ಆತಂಕ ವ್ಯಕ್ತಪಡಿಸಿದ ಅವರು, ಕೂಡಲೇ ಸಂಬಂದಿಸಿದ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಇತ್ಯಾರ್ಥಕ್ಕೆ ಮುಂದಾಗಬೇಕು. ಗ್ರಾಮ ಪಂಚಾಯತ ಕೇಂದ್ರ ಸ್ಥಾನದಲ್ಲೇ ಈ ಗತಿಯಾದರೆ ಇನ್ನೂಳಿದ ಊರಗಳ ಕಥೆ ಹೇಗಿರಬೇಕು? ಇದಕ್ಕೆಲ್ಲ ಕಾರಣ ಗ್ರಾಮ ಪಂ. ಪಿಡಿಓ, ತಾ.ಪಂ. ಇಓ, ನೀರು ನೈಮರ್ಲ ಅಧಿಕಾರಿಗಳಾದ ಜೆಇ, ಎಇಇ, ಇಇ ಇವರ ದಿವ್ಯ ನಿರ್ಲಕ್ಷದಿಂದ ಬೇಸಿಗೆ ಸಮಯದಲ್ಲಿ ಜನರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಇವರ ಮೇಲೆ ಕಠಿಣ ಕ್ರಮ ಕೈಗೊಂಡು ಜನರಿಗೆ ಕುಡಿಯುವ ನೀರು ಮತ್ತು ಆರೋ ಪ್ಲಾಂಟ್ ದುರಸ್ಥಿಮಾಡಿ ಚರಂಡಿ ಸ್ವಚ್ಛ ಮಾಡಿ ಸಾರ್ವಜನಕರಿಗೆ ರೋಗರುಜನೆ ಬರದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು
ಈ ಸಂಧರ್ಬದಲ್ಲಿ ಡೇವಿಡ್ ಸ್ಯಾಮಿಲ್, ಜಗದೀಶ ಹಿರೇಮಠ, ರಫೀಕ್ ಪಟೇಲ್, ಆಂಜನೇಯ, ಬಸವರಾಜ ಬಾವೂರ ಸಾಲಿಮನಿ, ಮಚ್ಚೆ ಬನ್ನಪ್ಪ ಬಾವೂರ, ಮರೆಪ್ಪ ಉಪ್ಪಾರ್, ಬಸವರಾಜ ಆನಂಪಲ್ಲಿ, ಯಂಕಪ್ಪ ಬಾವೂರ ಹೊಸಮನಿ, ಜಮ್ಸೆಪ್ಪ ಬಡಿಗೇರಾ, ಇಬ್ರಾಹಿಂ ಫೈಲ್, ಸಾಬರೆಡ್ಡಿ ಹೊಸಳ್ಳಿ, ಲಕ್ಷ್ಮಣ ಆನಂಪಲ್ಲಿ, ಬೀರಪ್ಪ ಬಾಜರ್, ಮರೆಪ್ಪ ಶಿಲ್ಪಿ ಬಾವೂರ, ಬಸವರಾಜ ಬಾವೂರ, ತಾಯಪ್ಪ ಬಾವೂರ, ಬಸವರಾಜ ಗ್ಯಾರೇಜ್, ಖಾಜಪ್ಪ ಪಿಂಜಾರ್, ಕೊಂಡರೆಡ್ಡಿ, ಹಣಮಂತ ಬಾವೂರ, ಸುಭಾμï ಗ್ಯಾರೇಜ್, ಮಹಾದೇವಪ್ಪ ಕಾಕಿ, ಭೀಮಪ್ಪ ಟೆಂಟ್, ಮಂಜಪ್ಪ ಎದ್ದೇರಿ, ಬನ್ನಪ್ಪ ಕುಂಬಾರ, ಮೂಕ ಭೀಮರಾಯ, ಮಲ್ಲಪ್ಪ ಹೊಟ್ಟೆ, ಪಿಲಿಂಗ ಅಂಬಿಗೇರ್, ಶಿವಪ್ಪ ನಾಟೇಕಾರ, ಭೀಮಪ್ಪ ಹೊಸಮನಿ, ಸಾಬಮ್ಮ ಅರಿಕೇರಿ, ಕಾಶಮ್ಮ ಗುಡೂರು, ಕಮಲಮ್ಮ ಪೂಜಾರಿ, ತಾಯಮ್ಮ ಕುರುಬರ, ಅಂಜಮ್ಮ ಬಾವೂರ, ವಸಂತಮ್ಮ ಬಾವೂರ, ನಿಂಗಮ್ಮ ಬಾವೂರ, ಮಕ್ತಿಂಬಿ ಕತ್ತಣ್ಣೋರ್ , ಮುನೀರಮ್ಮ ಫೈಲ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.