ಕನ್ನೆರಿ ಸ್ವಾಮೀಜಿ ಜಿಲ್ಲಾ ಪ್ರವೇಶ ನಿಬರ್ಂಧ ಹಿಂಪಡೆಯುವಂತೆ ಪ್ರತಿಭಟನೆ

ಬಸವನ ಬಾಗೇವಾಡಿ :ಡಿ.1:ಕನ್ನೆರಿ ಸ್ವಾಮೀಜಿಯ ಮೇಲೆ ಕಪ್ಪು ಚುಕ್ಕೆ ತಂದು ಹಿಂದೂ ಧರ್ಮ ಒಡೆಯುವ ಹುಣ್ಣಾರ ನಡೆಯುತ್ತಿದೆ ಸಚಿವರು ಕನ್ನೆರಿ ಶ್ರೀಗಳನ್ನು ಹಾಗೂ ಬಸವ ಸಂಸ್ಕøತಿ ಅಭಿಯಾನ ಭಾಗಿಯಾದ ಪೂಜ್ಯರನ್ನು ಬಸವನಾಡಿಗೆ ಕರೆತಂದು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಹಿಂದೂ ಮುಖಂಡ ರಾಘವನ್ ಅಣ್ಣಿಗೇರಿ ಹೇಳಿದರು ರಾಜ್ಯ ಸರ್ಕಾರ ಕಣ್ಣೀರಿ ಶ್ರೀಗಳಿಗೆ ಜಿಲ್ಲಾ ಪ್ರವೇಶ ನಿಬರ್ಂಧ ವಿಧಿಸಿರುವುದನ್ನು ಖಂಡಿಸಿ ಕೂಡಲೇ ಆದೇಶವನ್ನು ಪಡೆಬೇಕೆಂದು ಆಗ್ರಹಿಸಿ ಶನಿವಾರ ಪಟ್ಟಣದಲ್ಲಿ ವಿವಿಧ ಸಂಘಟಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನ ಮೆರವಣಿಗೆ ವೇಳೆ ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ಉದ್ದೇಶಿಸಿ ಅವರು ಮಾತನಾಡಿದರು ನಮ್ಮ ಹಿಂದೂ ದೇವರಗಳ ವಿರೋಧ ಮಾಡುವರನ್ನು ಇನಾವಾಗಿ ನಿಂದಿಸಿದವರಿಗೆ ಕಣ್ಣೀರು ಶ್ರೀಗಳು ಅವರೇ ಭಾಷೆಯಲ್ಲಿ ಅವರು ಮಾತನಾಡಿದ್ದಾರೆ ಹೊರತು ಬಸವ ಸಂಸ್ಕೃತಿ ಅಭಿಯಾನದಲ್ಲಿ ಭಾಗಿಯಾದ ಸ್ವಾಮಿಗಳಿಗೆ ಭಾಗಿಯಾದ ಬಸವಾದಿ ಶರಣರ ಭಕ್ತರಿಗೆ ಅವರು ಬೈದಿಲ್ಲ ಆದರೆ ಕಾಂಗ್ರೆಸ್ಸಿಗರು ಕಣ್ಣೀರಿ ಸ್ವಾಮೀಜಿಗೆ ಎಲ್ಲಾ ಬಸವಾದಿ ಶರಣರಿಗೆ ಬೈದಿದ್ದಾರೆ ಎಂದು ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದು ಅವರು ಆರೋಪ ಮಾಡಿದರು ಈ ಪ್ರತಿಭಟನೆಯ ನೇತೃತ್ವ ವಹಿಸಿದ ಕರವೇ ರಾಜ್ಯ ಕಾರ್ಯದರ್ಶಿ ಅಶೋಕ್ ಹಾರಿವಾಳ ಮಾತನಾಡಿ ನಮ್ಮ ಭಾಗದ ನಮ್ಮವರೇ ಆಗಿರುವ ಕನ್ನೆರಿ ಸ್ವಾಮಿಗಳು ಎರಡನೇ ಬಸವಣ್ಣ ಇದ್ದಂತೆ ಧರ್ಮ ಒಡೆಯುವ ಕೆಲವ ರಾಜಕಾರಣಿಗಳ ಕುತಂತ್ರದಿಂದ ಶ್ರೀಗಳ ಮೇಲೆ ಜಿಲ್ಲಾ ನಿಬರ್ಂಧ ಹೇರಿದ್ದಾರೆ ಆದರೆ ರಾಜ್ಯ ಸರ್ಕಾರ ಬಸವ ತತ್ವ ಆಚಾರ ವಿಚಾರಗಳನ್ನು ವಿರೋಧಿಸುವ ಕಾವಿಧಾರಿಗಳಿಗೆ ಏಕೆ ನಿಬರ್ಂಧ ಹೇರಿಲ್ಲ ಸರ್ಕಾರ ಕೂಡಲೇ ಸ್ವಾಮಿಗಳ ಮೇಲೆ ಹೇರಿರುವ ಪ್ರವೇಶ ನಿಬರ್ಂಧ ಹಿಂಪಡೇಬೇಕೆಂದು ಅವರು ಆಗ್ರಹಿಸಿದರು ಬದಾಮಿಯ ಅಭಿನವ ಬಸವರಾಜೇಂದ್ರ ಸ್ವಾಮೀಜಿ ಮಂಜುಳಾತಾಯಿ ಬಳಗಾನೂರ ಮುಧೋಳದ ಶಿವಶರಣಾನಂದ ಸ್ವಾಮೀಜಿ ಇಂಡಿಯ ಗಿರೀಶಾನಂದ ಸ್ವಾಮೀಜಿ ಜಮಖಂಡಿಯ ಶಿವಪುತ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಸವರಾಜ ಗಚ್ಚಿನವರ ವಿವೇಕ ಬ್ರಿಗೇಡಿನ ವಿನುತ್ ಕಲ್ಲೂರ ಕಲ್ಲು ಸೊಣ್ಣದ ದಯಾನಂದ ಸಾರವಾಡ ಪರಶುರಾಮ ಅಡಿಗಿಮನಿ ಗುರು ಕುಂಟೋಜಿ ಅಶ್ವಿನಿ ಪಟ್ಟಣಶೆಟ್ಟಿ ಸಂತೋಷ ನಾಯಕ ಮಹೇಶ್ ಸಾಲುವಾಡಗಿ ತಮ್ಮಣ್ಣ ಬಡಿಗೇರ ಬಸವರಾಜ್ ಸಂಡೆ ಶಿವಶಂಕರಯ್ಯ ಹಿರೇಮಠ ಗೊರೆಡ್ಡಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು