Home ಜಿಲ್ಲೆ ಬೆಳೆ ವಿಮೆ ಪರಿಹಾರ ಜಮಾಕ್ಕೆ ಆಗ್ರಹಿಸಿ ಪ್ರತಿಭಟನೆ

ಬೆಳೆ ವಿಮೆ ಪರಿಹಾರ ಜಮಾಕ್ಕೆ ಆಗ್ರಹಿಸಿ ಪ್ರತಿಭಟನೆ

ಲಕ್ಷೆ÷್ಮÃಶ್ವರ,ಅ೧೬ ತಾಲೂಕಿನ ರೈತರಿಗೆ ಸನ್ ೨೦೨೫_೨೬ ಸಾಲಿನ ತೋಟಗಾರಿಕಾ ಬೆಳೆಯಾದ ಮೆಣಸಿನಕಾಯಿ ಬೆಳೆಗೆ ಇದುವರೆಗೂ ಬೆಳೆ ವಿಮೆ ಪರಿಹಾರವನ್ನು ಜಮಾ ಮಾಡದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ಕಿಸಾನ್ ಸಂಘದ ತಾಲೂಕ ಘಟಕದ ಅಧ್ಯಕ್ಷ ಚೆನ್ನಪ್ಪ ಷಣ್ಮುಖ ಅವರ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.


ಶಿಗ್ಲಿ ನಾಕಾದಿಂದ ಹೊರಟ ರೈತರು ಸರಕಾರ ವಿರುದ್ಧ ಘೋಷಣೆ ಕೂಗಿ ಬಜಾರ್ ಮುಖಾಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಚೆನ್ನಪ್ಪ ಷಣ್ಮುಖಿಯವರು ತಾಲೂಕಿನಲ್ಲಿ ಕಳೆದ ವರ್ಷ ಮಾಡಳ್ಳಿ , ಯಳವತ್ತಿ ಯತ್ನಳ್ಳಿ ಗೊಜನೂರು ಲಕ್ಷೆ÷್ಮÃಶ್ವರ ಬಸಾಪುರ ರಾಮಗಿರಿ ಸೇರಿದಂತೆ ಸುಮಾರು ರೂ.೭,೦೦೦ ಹೆಕ್ಟರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗಿತ್ತು ಆದರೆ ಈ ಬೆಳೆ ಕೈ ಕೊಟ್ಟಿದ್ದು ಬೆಳೆ ಹಾನಿ ಪರಿಹಾರವನ್ನು ಇದುವರೆಗೂ ಜಮೆ ಮಾಡದಿರುವುದು ಖಂಡನೀಯ.


ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಬೆಳೆ ವಿಮೆ ಪರಿಹಾರವನ್ನು ರೈತರಿಗೆ ಜಮೆ ಮಾಡಲಾಗಿದ್ದು ಕೇವಲ ಲಕ್ಷೆ÷್ಮÃಶ್ವರ ತಾಲೂಕಿನ ರೈತರಿಗೆ ಅನ್ಯಾಯ ಮಾಡಲಾಗಿದೆ ಇದನ್ನು ೯ ದಿನಗಳೊಳಗಾಗಿ ರೈತರ ಖಾತೆಗಳಿಗೆ ಬೆಳೆ ವಿಮೆ ಪರಿಹಾರ ಜಮಾ ಆಗದಿದ್ದರೆ ರಾಜ್ಯ ಹೆದ್ದಾರಿಯ ಮೇಲೆ ಚಕ್ಕಡಿ ಜಾನುವಾರುಗಳನ್ನು ತಂದು ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದು ಸರ್ಕಾರ ರೈತರ ಸಹನೆಯನ್ನು ಪರೀಕ್ಷೆ ಮಾಡಬಾರದು ಯಾವುದೇ ಕಾರಣ ಹೇಳದೆ ಜಿಲ್ಲಾಧಿಕಾರಿಗಳು ಸಂಬAಧಪಟ್ಟ ವಿಮೆ ಕಂಪನಿಗೆ ಹಾಗೂ ಇಲಾಖೆಯವರಿಗೆ ತಾಕೀತು ಮಾಡಿ ಬೆಳೆ ಹಾನಿಯನ್ನು ಜಮಾ ಮಾಡದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.


ಮನವಿ ಪತ್ರ ಸ್ವೀಕರಿಸಿದ ಗ್ರೇಡ್ ೨ ತಹಸಿಲ್ದಾರ್ ಮಂಜುನಾಥ ಅಮಾಸಿ ಅವರು ಈಗ ಚುನಾವಣೆ ಇರುವುದರಿಂದ ಹಾಗೂ ಕೆಲವರು ತರಬೇತಿಗೆ ಹೋಗಿರುವುದರಿಂದ ಅವರು ಬಂದ ನಂತರ ಹಿರಿಯ ಅಧಿಕಾರಿ ಗಳಗಮನಕ್ಕೆ ತಂದು ರೈತರ ಬೇಡಿಕೆಯನ್ನು ಈಡೇರಿಸುವದಾಗಿ ಭರವಸೆ ನೀಡಿದರು.


ಈ ಸಂದರ್ಭದಲ್ಲಿ ಟಾಕಪ್ಪ ಸಾತಪೂತೆ ನಿಂಬಣ್ಣ ಮಡಿವಾಳರ ಶಿವನಗೌಡ ಪಾಟೀಲ ಶಿವನಗೌಡ ಕರಿಭರಮಗೌಡ್ರ ಎಸ್ ಎಸ್ ರಾಯಣ್ಣ ಗೌಡ್ರೆ ಮಂಜುನಾಥ್ ಗೌಡ ಕರಿಭಮಗೌಡರ ನಿಂಗನಗೌಡ ನೆಗಳೂರ ಶಂಕರಗೌಡ ಬೆಟದೂರ ಬಸವಣ್ಣಪ್ಪ ಅಂಗಡಿ ವಿರುಪಾಕ್ಷಪ್ಪ ಮುದುಕಣ್ಣವರ ಪರಮೇಶ್ವರ್ ಗೌಡ ಪಾಟೀಲ ಬಸವರಾಜ ಕೊಕಾಡಿ ಹುಲಿಗೆಪ್ಪ ಕರೆಂ ಅವರ ರಾಮನಗೌಡ ಕುಂದಗೋಳ ಚನ್ನಬಸನಗೌಡ ಬೆಟ್ಟದೂರ ಫಕೀರ್ ಗೌಡ ಸಂಕನಗೌಡ್ರ ಮಂಜುನಾಥ್ ಸೋಮವಾರದ ಷಣ್ಮುಖ ಗೌಡ ಪಾಟೀಲ ಚನ್ನಪ್ಪ ಮಟ್ಟಿ ದ್ಯಾಮನಗೌಡ ದೋಣಿ ಶೇಖರ್ ಗೌಡ ಗೌಡ ಹನುಮಂತ ಗೌಡ ಮೂಲಿಮನಿ ಮಂಜುನಾಥ್ ಗೌಡ ಹರ್ತಿ ಸೇರಿದಂತೆ ಅನೇಕ ರೈತರು ಪಾಲ್ಗೊಂಡಿದ್ದರು.