ಶೂ ಎಸೆದ ಆರೋಪಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಿ ಪ್ರತಿಭಟನೆ

ವಿಜಯಪುರ:ಅ.೧೨: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ.ಸಾಗರ ಬಣ) ಜಿಲ್ಲಾ ಸಮಿತಿ ವತಿಯಿಂದ ವಿಷಯ : ೦೬ನೇ ಅಕ್ಟೋಬರ್ ೨೦೨೫ ರಂದು ಸುಪ್ರಿಂಕೋರ್ಟಿನ ಮುಖ್ಯ ನ್ಯಾಯಧೀಶರಾದ ಶ್ರೀ.ಬಿ.ಆರ್.ಗಾನಾಯಿಯವರ ಮೇಲೆ “ಶೂ” ಎಸದಿರುವುದು ಅಕ್ಷಮ್ಯ ಅಪರಾಧವಾಗಿದೆ ಈ ಕೃತ್ಯ ಎಸಗಿದ ಅಪರಾಧಿಗೆ ಕಠಿಣ ಶಿಕ್ಷೆಗೆ ಗುರುಪಿಡಿಸುವುದರೊಟ್ಟಿಗೆ ಉನ್ನತ ತನಿಖೆ ಕೈಗೊಂಡು ಈ ಘಟನೆಯ ಹಿಂದಿರುವ ಸಂವಿಧಾನ ದ್ರೋಹಿಗಳನ್ನು ಬಂದಿಸಲು ನಗರದ ಡಾ.ಅಂಬೇಡ್ಕರ್ ವೃತ್ತದ ಹತ್ತಿರ ಅಪಮಾನ ಮಾಡಿದ ಕಿಶೋರನ ಪ್ರತಿ ಕೃತಿ ದೈಹಿಸಿ ಬೃಹತ್ ಪ್ರತಿಭಟನೆ ಮುಖಾಂತರ ಅಪರ ಜಿಲ್ಲಾಧಿಕಾರಿಗಳಾದ ಸೋಮನಿಂಗ ಗೆನ್ನೂರ ಅವರಿಂದ ಘನವೆತ್ತ ರಾಷ್ಟ್ರಪತಿ ನವ ದೆಹಲಿಯವರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ.ಡಿ.ಜಿ.ಸಾಗರ ಬಣದ ಜಿಲ್ಲಾ ಸಂಚಾಲಕರಾದ ಸಿದ್ದು ರಾಯಣ್ಣನವರ ಮಾತನಾಡಿ ಆರ್.ಎಸ್.ಎಸ್ ಕಾರ್ಯಕ್ರಮಕ್ಕೆ ಭಾಗವಹಿಸಿಲು ನಿರಾಕರಿಸಿದ ಸುಪ್ರಿಂಕೋರ್ಟ ಮುಖ್ಯ ನ್ಯಾಯಧೀಶರಾದ ಶ್ರೀ.ಬಿ.ಆರ್.ಗಾವಾಯಿ ಯವರು ಖಜುರಾವು ದೇವಾಲಯದ ಪ್ರಕರಣದ ಕುರಿತು ಪ್ರಚಾರಕ್ಕಾಗಿ ಕೊರ್ಟಿಗೆ ಬರಬೇಡಿ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೆ ಈದಿನ ವಿಚಾರಣೆಯಲ್ಲಿ ಸನಾತನವಾದಿ ವಕೀಲನೊಬ್ಬ “ಶೂ” ಎಸೆದಿದ್ದಾರೆ. ಸನತಾನ ಧರ್ಮಕ್ಕೆ ಅವಮಾನ ಮಾಡಿದರೆ ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಭಾರತದ ಇತಿಹಾಸದಲ್ಲಿ ಇದೆ ಮೊದಲ ಭಾರಿಗೆ ಸುಪ್ರಿಂಕೋರ್ಟಿನ ಮುಖ್ಯನ್ಯಾಯಧೀಶರನ್ನು ಅವಮಾನಿಸಲಾಗಿದೆ. ಈ ಅವಮಾನ ಈ ದೇಶಕ್ಕೆ ಮತ್ತು ಸಂವಿಧಾನಕ್ಕೆ ಅಪಚಾರ, ಇಂತ ಹೀನ ಕೃತ್ಯ ಎಸಗಿದ ಸನಾತನನ ದೇಶ ದ್ರೋಹಿಗೆ ಕಾನೂನಿನ ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಒತ್ತಾಯಿಸುತ್ತದೆ ಎಂದರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವೈ ಸಿ ಮಯೂರ ಜಿಲ್ಲಾ ಸಂಚಾಲಕರು ಡಿ ಎಸ್ ಎಫ್ ಅವರು ಮಾತನಾಡಿ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿಗಳು ಕೇವಲ ದಲಿತ ಎಂಬ ಕಾರಣದಿಂದ ಅವರ ಮೇಲೆ ಸನಾತನಿ ವಕೀಲನೊಬ್ಬ ಶೂ ಎಸೆದು ಅವಮಾನ ಎಸಗಿದ್ದಾನೆ.
ಗಾವಯಿ ಏಕಾಂಗಿಯಲ್ಲ ಅವರ ಹಿಂದೆ ದೇಶದ ಜನತೆ ಇದೆ ದೇಶದ ಅತ್ಯುನ್ನತ ನ್ಯಾಯಾಂಗಕ್ಕೆ ವ್ಯವಸ್ಥೆಗೆ ಆಪಮಾನ ಮಾಡಿದ ಕಿಶೋರ್‌ಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಹಾಂತೇಶ್ ಸಾಸಬಾಳ್ ಜಿಲ್ಲಾ ಮುಖಂಡರು ಅವಿನಾಶ್ ಬಾನಿಕೋಲ ದಸರತ್ ಈಟಿ ವಿನೋದ ನಾಗಾವಿ ರಾಮಚಂದ್ರ ಇಂಡಿ ದರೆಪ್ಪ ಮಡೋಂಳಿ ಮಹಾಂತೇಶ್ ಚಲವಾದಿ ತಮ್ಮಣ್ಣ ನಂದಿ ರಾಜು ಕಾಂಬಳೆ ರಮೇಶ್ ನಿಂಬಾಳ್ಕರ್ ದುಂಡ್ಡಪ್ಪ ನಾಟಿಕರ್ ಶ್ರೀಕಾಂತ್ ಬಬಲೇಶ್ವರ ಪವನ ನಡುವೀನಕೇರಿ ಮತ್ತಿತರರು ಉಪಸ್ಥಿತರಿದ್ದರು.