ಲಕ್ಷಿö್ಮÃ ನಗರಕ್ಕೆ ಮೂಲ ಸೌಕರ್ಯ ಒದಗಿಸಲು ಆಗ್ರಹಿಸಿ ಪ್ರತಿಭಟನೆ

ಕಲಬುರಗಿ,ಜೂ.೧೬-ಕಲಬುರಗಿ ಉತ್ತರ ಮತಕ್ಷೇತ್ರದ ವಾರ್ಡ ನಂ.೩೧ರಲ್ಲಿ ಬರುವ ಲಕ್ಷ್ಮೀ ನಗರದಲ್ಲಿ ಒಳಚರಂಡಿ (ಡ್ರೆöÊನೇಜ್) ವ್ಯವಸ್ಥೆ ಹಾಗೂ ಸಿ.ಸಿ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಶ್ರೀ ಲಕ್ಷಿö್ಮÃ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ನಂತರ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಲಕ್ಷ್ಮೀ ನಗರದಲ್ಲಿ ಸುಮಾರು ೩೦ ವರ್ಷಗಳಿಂದ ಮೂಲಭೂತ ಸೌಲಭ್ಯವಿಲ್ಲದೆ ನಾಗರೀಕರು ವಂಚಿತರಾಗಿದ್ದಾರೆ. ಈ ಬಡಾವಣೆಯು ತೆಗ್ಗು ಪ್ರದೇಶವಾಗಿರುವುದರಿಂದ ಪ್ರತಿ ವರ್ಷ ಮಳೆಗಾಲದಲ್ಲಿ ರಸ್ತೆ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಹಾಗೂ ಸಣ್ಣ ಮಕ್ಕಳು ಶಾಲಾ ಬಸ್‌ಗಳು ಬಡಾವಣೆಯಲ್ಲಿ ಹೋಗುವುದು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಲಕ್ಷ್ಮೀ ನಗರ ಸಮಸ್ಯೆಗಳ ಬಗ್ಗೆ ಉತ್ತರ ಮತಕ್ಷೇತ್ರದ ಶಾಸಕರಿಗೂ ಹಾಗೂ ಮಹಾನಗರ ಪಾಲಿಕೆ ಆಯುಕ್ತರಿಗೆ ಅನೇಕ ಬಾರಿ ಮನವಿ ಪತ್ರ ಸಲ್ಲಿಸಿದರೂ ಸಹಿತ ಇದುವರೆಗೆ ಯಾವುದೇ ಕ್ರಮ ಜರುಗಿಸದೇ ಇರುವುದರಿಂದ ಬಡಾವಣೆಯ ನಾಗರೀಕರು ತೊಂದರೆ ಅನುಭವಿಸುತ್ತಿದ್ದಾರೆ.
ಲಕ್ಷ್ಮೀ ನಗರದಲ್ಲಿ ಒಳಚರಂಡಿ ವ್ಯವಸ್ಥೆ (ಡ್ರೈನೇಜ್) ವ್ಯವಸ್ಥೆ ಇಲ್ಲದೇ ಇರುವುದರಿಂದ ಹೊಲಸು ನೀರು ರಸ್ತೆ ಮೇಲೆ ಹಾದು ಹೋಗುವುದರಿಂದ ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತವೆ. ಕಾಮಗಾರಿ ಮಂಜೂರಾತಿ ಮಾಡಬೇಕು. ಕೂಡಲೇ ಒಳಚರಂಡಿ ನಿರ್ಮಿಸಬೇಕು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿAದ ಶಾಸಕರು ರೂ.೧.೦೦ ಕೋಟಿ ಮಂಜೂರಾತಿ ಮಾಡಿ ಸಿ.ಸಿ. ರಸ್ತೆ ನಿರ್ಮಿಸಬೇಕು, ನಗರದಲ್ಲಿರುವ ೨ ಉದ್ಯಾನವನದಲ್ಲಿ ಅಭಿವೃದ್ಧಿ ಕಾಮಗಾರಿಗಳಾದ ಉದ್ಯಾನವನಕ್ಕೆ ಸುತ್ತಲೂ ಕಂಪೌAಡ ನಿರ್ಮಾಣ ಹಾಗೂ ಮಕ್ಕಳಿಗೆ ಆಟವಾಡಲು ಬೇಕಾಗುವ ಸಲಕರಣೆಗಳ ವ್ಯವಸ್ಥೆ ಮತ್ತು ವಯೋ ವೃದ್ಧರಿಗೆ ಹಾಗೂ ಹೆಣ್ಣು ಮಕ್ಕಳಿಗೆ ವಾಕಿಂಗ್ ಮಾಡಲು ವಾಕಿಂಗ್ ಟ್ರಾಕ್ ನಿರ್ಮಾಣ ಮಾಡಬೇಕು, ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿರುವುದರಿಂದ ಬಡಾವಣೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಮನವಿ ಪತ್ರದಲ್ಲಿ ಒತ್ತಾಯಿಸಲಾಗಿದೆ.
ಟ್ರಸ್ಟ್ ಗೌರವಾಧ್ಯಕ್ಷ ರಾಜಶೇಖರಯ್ಯ ಟಿ.ಕೊಲ್ಲೂರ, ಉಪಾಧ್ಯಕ್ಷ ಮಹಾದೇವ ಆರ್.ಹಂಚೆ, ನೂರ್ ಜಿ.ರಾಠೋಡ್, ಮಲ್ಲಪ್ಪ ಎಂ.ಹೊಸಮನಿ, ಚಂದ್ರಕಾAತ ಎಂ.ಪಾಟೀಲ, ಶರಣಪ್ಪ ಎಸ್.ಕೆಸರಟ್ಟಿ, ಶಿವಲಿಂಗಪ್ಪ ಆರ್.ಗುಂಡಗುರ್ತಿ, ಭೀಮರಾಯ ಎಚ್.ತೊನಸಳ್ಳಿ, ವೈಜನಾಥ ಪಿ.ಪಾಟೀಲ, ಮಹಾದೇವಪ್ಪ ವೈ.ಗೋಳಾ, ನಾಗಪ್ಪಾ ಎಸ್.ಪೂಜಾರಿ, ಆನಂದರಾಜ ಎಸ್.ಪಾಟೀಲ, ಜೀತೇಂದ್ರ ಆರ್.ಜರಂಗ್, ಸಿದ್ರಾಮಯ್ಯ ಎಸ್.ಹಿರೇಮಠ, ಜಗನ್ನಾಥ ಎಸ್.ಪೂಜಾರಿ, ರಾಮಚಂದ್ರ ಕೆ.ಹೊಟಕರ್ ಸೇರಿದಂತೆ ಲಕ್ಷಿö್ಮÃ ನಗರದ ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.