Home ಜಿಲ್ಲೆ ಕಲಬುರಗಿ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ

ಚಿಂಚೋಳಿ:ಮಾ.27: ಕರ್ನಾಟಕ ಮಾದರ ಮಹಾಸಭಾ ಮತ್ತು ಮಾದಿಗ ಸಂಘಟನೆಗಳ ಒಕ್ಕೂಟ ವತಿಯಿಂದ ಸಂಪೂರ್ಣ ಒಳ ಮೀಸಲಾತಿ ಜಾರಿಗಾಗಿ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು ಪ್ರತಿಭಟನೆ ಉದ್ದೇಶಿಸಿ ಕರ್ನಾಟಕ ಮಾದರ ಮಹಾ ಸಭಾ ಜಿಲ್ಲಾಧ್ಯಕ್ಷರಾದ ಗೋಪಾಲರಾವ್ ಕಟ್ಟಿಮನಿ, ಅವರು ಮಾತನಾಡಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಕುರಿತಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಾಯ್ದೆ ರೂಪಿಸಿ ರಾಜ್ಯಪಾಲರಿಂದ ಅಂಕಿತ
ಪಡೆದಿರುವುದು ಮಾದಿಗ ಸಮುದಾಯದ 35 ವರ್ಷಗಳ ನಿರಂತರ ಹೋರಾಟಕ್ಕೆ ದೊರೆತ
ಐತಿಹಾಸಿಕ ನ್ಯಾಯವಾಗಿದೆ ಈ ಹೋರಾಟವು ಸಂವಿಧಾನದ ವಿಧಿ 15(4) ಮತ್ತು 16(4)ಗಳ ಆತ್ಮವನ್ನು ಜೀವಂತವಾಗಿರಿಸುವ ಹೋರಾಟವಾಗಿದೆ. ಕಳೆದ 35 ವರ್ಷಗಳಿಂದ ನಮ್ಮ ಸಮುದಾಯ ಸಾಮಾಜಿಕ ನ್ಯಾಯಕ್ಕಾಗಿ ಶಾಂತಿಯುತವಾಗಿ, ಪ್ರಜಾಸತ್ತಾತ್ಮಕವಾಗಿ ಹೋರಾಟ ನಡೆಸುತ್ತಿದೆ ಸರ್ವೋಚ್ಚ ನ್ಯಾಯಾಲಯವೂ ಈ ಸಮುದಾಯದ ಪರವಾಗಿ ತೀರ್ಪು ನೀಡಿದರೂ ಸಹ ಸರ್ಕಾರ ಒಳ ಮೀಸಲಾತಿಯನ್ನು ಅನುಷ್ಠಾನಗೊಳಿಸಲು ಕಳೆದ ಎರಡು ವರ್ಷಗಳಿಂದ ವಿಳಂಬ ಮಾಡುತ್ತಿರುವುದು
ಅತ್ಯಂತ ಖಂಡನೀಯ ಮತ್ತು ನೋವುಂಟುಮಾಡುವ ಸಂಗತಿಯಾಗಿದೆ ಆದರೆ, ದಿನಾಂಕ 26.02.2026ರ ಸಚಿವ ಸಂಪುಟದ ನಿರ್ಣಯದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ಸರ್ಕಾರದ ಆದೇಶ ಸಂಖ್ಯೆ ಸಿಆ ಸುಇ-1ಸೇಹಿಮ 2026, ಬೆಂಗಳೂರು, ದಿನಾಂಕ 27.02.2026, ಮೂಲಕ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ-1ಸೇಹಿಮ 2022, ಬೆಂಗಳೂರು, ದಿನಾಂಕ 28.12.2022 ರ ಪೂರ್ವ ಮೀಸಲಾತಿ ವ್ಯವಸ್ಥೆಯಂತೆ, ಅಂದರೆ ಸರ್ಕಾರದ ಆದೇಶ ಸಂಖ್ಯೆ ಸಿಆಸುಇ-8 ಸೇಹಿಮ 1995, ಬೆಂಗಳೂರು, ದಿನಾಂಕ 20.06.1995 ರ ಆದೇಶದಂತೆ ಶೇಕಡಾ 15 ಪರಿಶಿಷ್ಟ ಜಾತಿ ಮತ್ತು ಶೇಕಡಾ 3 ಪರಿಶಿಷ್ಟ ಪಂಗಡ ಮೀಸಲಾತಿ ಹಾಗೂ ರೋಸ್ಟರ್ ಮಾರ್ಗಸೂಚಿಗಳಂತೆ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಸೂಚಿಸಲಾಗಿದೆ ಈ ಆದೇಶದಲ್ಲಿ ಒಳ ಮೀಸಲಾತಿ ಶೇ 17% ಸಂಬಂಧ ಹೊರಡಿಸಿದ ಆದೇಶ ಸಂಖ್ಯೆ ಸಕಇ-8
ಎಸ್‍ಎಲ್‍ಪಿ 2024 (ಭಾ-1), ದಿನಾಂಕ 25.08.2025 ಮತ್ತು ಸರ್ಕಾರದ ಆದೇಶ ಸಿಆಸುಇ-2 ಸೇಹಿಮ 2025, ದಿನಾಂಕ 03.09.2025 ರ ಆದೇಶಗಳನ್ನು ಅಳವಡಿಸದೆ ನೇಮಕಾತಿ ಮಾಡಲು ಸೂಚಿಸಿರುವುದು ಮಾದಿಗ ಸಮುದಾಯದ ದೀರ್ಘ 35 ವರ್ಷಗಳ ಹೋರಾಟಕ್ಕೆ ಮಾಡಿದ ಗಂಭೀರ ಅನ್ಯಾಯ ಹಾಗೂ ನಂಬಿಕೆ ದ್ರೋಹವಾಗಿದೆ ಮತ್ತು ಸರ್ಕಾರ ನಮ್ಮ ಸಮುದಾಯದ 35 ವರ್ಷದ ನೋವು ನಿರೀಕ್ಷೆ ಮತ್ತು ನಂಬಿಕೆಯನ್ ಮನದಟ್ಟು ಮಾಡಿಕೊಂಡು ನ್ಯಾಯಯುತ ಹಾಗೂ ಧೈರ್ಯವಾದ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದರು ಪ್ರತಿಭಟನೆಯಲ್ಲಿ ಮಾದಿಗ ಸಮಾಜದ ಮುಖಂಡರಾದ ಶಾಮರಾವ್ ಓಂಕಾರ್, ನರಸಪ್ಪ ಕಿವಡನೋರ, ಪ್ರದೀಪ್ ಮೈತ್ರಿ, ಮಲ್ಲು ಕೋಡಂಬಲ, ವಿಜಯರಾಜ ಕೊಂಡಂಪಳ್ಳಿ, ಆಕಾಶ ಕೊಳ್ಳುರ, ಮಚೇಂದ್ರ ಶೇರಿಕರ್, ಸುನಿಲ್ ಸಲಗರ್, ನಾಗು ಕಿವಡನೋರ, ಕಾಶಿನಾಥ್ ಬೀರನಳ್ಳಿ, ಮೋಹನ್ ದಂಡಿನ, ವಿವೇಕ್ ಬೀರನಳ್ಳಿ, ಸುರೇಶ ಸೇರಿಕಾರ, ಸೋಮಶೇಖರ್ ನಿಂಗದಳ್ಳಿ, ಪ್ರಶಾಂತ ಕಟ್ಟಿಮನಿ, ಅಶ್ವತ್ ಕಟ್ಟಿಮನಿ, ಜಗನ್ನಾಥ ಕೊಂಡಂಪಳ್ಳಿ, ವಿಜಯಕುಮಾರ್ ಶಾಹಾಬಾದಿ, ಮೋಹನ್ ಐನಾಪುರ್, ರವಿ ಗಡಿನಿಂದಳಿ, ಮತ್ತು ಅನೇಕ ಸಾವಿರಾರು ಜನಸಂಖ್ಯೆಯಲ್ಲಿ ಮಾದಿಗ ಸಮಾಜದ ಬಾಂಧವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು