ಜಮಖಂಡಿ:ಸೆ.7: ಸಮರ್ಪಕ ನೀರು ಪೂರೈಕೆ ಮಾಡಲು ಆಗ್ರಹಿಸಿ ನಗರದ ವಾರ್ಡ ನಂ. 27ರ ಆಝಾದ ನಗರ ಬಡಾವಣೆಯ ನಿವಾಸಿಗಳು ನಗರಸಭೆ ಕಾರ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸಿದರು.
ಕಳೆದ 15 ದಿನಗಳಿಂದ ಬಡಾವಣೆಯ ನಿವಾಸಿಗಳು ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ ವಾರದಲ್ಲಿ ಒಂದು ಸಾರಿ ಆದರು ನೀರನ್ನು ಪೂರೈಕೆ ಮಾಡಿ ಎಂದು ಆಗ್ರಹಿಸಿದರು
ಸ್ಥಳಿಯ ಮುಖಂಡ ಯಾಶೀನ ಬಾಗವಾನ ಮಾತನಾಡಿ ನಗರದ ಪ್ರತಿ ಬಡಾವಣೆಗಳಲ್ಲಿ ವಾರದಲ್ಲಿ ಎರಡು ಬಾರಿ ನೀರಿ ಬೀಡುತ್ತಾರೆ ಆದರೆ ನಮ್ಮ ಬಡಾವಣೆಗೆ ಮಾತ್ರ ಹದಿನೈದು ದಿನಕ್ಕೊಂದು ಸರಿ ನೀರು ಬಿಡುತ್ತಾರೆ ಬಿಟ್ಟರು ಕೂಡ ಪೂರ್ಣ ಪ್ರಮಾಣದಲ್ಲಿ ಬೀಡುವದಿಲ್ಲ ವಿದ್ಯುತ್ ಸಂಪರ್ಕ ಕಡಿತವಾದರೆ ನೀರು ಅರ್ಧಕ್ಕೆ ಬಂದ ಆಗುತ್ತೆ ಮರಳಿ ನೀರು ಬೀಡುವದಿಲ್ಲ ಸಂಭಂಧ ಪಟ್ಟ ಅಧಿಕಾರಿಗಳು ನಮಗೆ ಐದು ದಿನಕ್ಕೆ ಒಮ್ಮೆಯಾದರೂ ನೀರನ್ನು ಬಿಡಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರಾಜು ಮಸಳಿ,ಬಸವರಾಜ ಚಾರಮಗೋಳ,ಸುರೆಖಾ ಸುತಾರ,ಇಮತಿಯಾಜ ಅವಟಿ,ಶಬಾನಾ ಮಖಾಂದಾರ,ಶಿರಾಜ್ಜುದಿನ ಜಮಾದಾರ ಇನ್ನಿತರರು ಇದ್ದರು

























