
ಯಾದಗಿರಿ,ಜ.19-ಇಲ್ಲಿನ ಲುಂಬಿನಿ ವನದಲ್ಲಿ ದೆವ್ವದ ವದಂತಿ ಹಬ್ಬಿಸಿಸ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸುವಂತೆ ಆಗ್ರಹಿಸಿ ಡಿಎಸ್‍ಎಸ್‍ನಿಂದ ಲುಂಬಿನಿ ಲುಂಬಿನಿ ಉದ್ಯಾನವನದ ಎದರು ಪ್ರತಿಭಟನೆ ನಡೆಸಲಾಯಿತು.
ಲುಂಬಿನಿ ವನದಲ್ಲಿ ದೆವ್ವ ಇದೆ ಎಂದು ಕೆಲ ಕಿಡಿಗೇಡಿಗಳು ವದಂತಿ ಹಬ್ಬಿಸಿ ಲುಂಬಿನಿ ವನದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.






















