
ಇಂಡಿ :ನ.14: ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಬೇಕು ಇಲ್ಲವೆ ಕಾರ್ಖಾನೆ ಪ್ರಾರಂಭಿಸಬಾರದು ಎಂದು ಕಬ್ಬು ಬೆಳೇಗಾರರು ಜಮಖಂಢಿ ಸಕ್ಕರೆ ಕಾರ್ಖಾನೆ ಯುನಿಟ್ 2 ನಾದ ಕೆಡಿ ಯ ಸಕ್ಕರೆ ಕಾರ್ಖಾನೆ ಎದುರು ನಡೆಯುತ್ತಿರುವ ಹೋರಾಟ ಮುಂದು ವರೆದಿದೆ.
ಮುಖಂಡ ಬಾಳು ಮುಳಜಿ ಮಾತನಾಡಿ ಕಾರ್ಖಾನೆಯವರು ಕಬ್ಬಿನ ಬೆಲೆ ನಿಗದಿ ಮಾಡಿ ಕಾರ್ಖಾನೆ ಪ್ರಾರಂಭಿಸಬೇಕು. ಇಂದು ನಾದ ಕೆಡಿ ಗ್ರಾಮದಲ್ಲಿ ರಾಜ್ಯ ಹೆದ್ದಾರೆ ಬಂದು ಮಾಡಿ ಪ್ರತಿಭಟನೆ ಮಾಡಲಾಗುವದು ಎಂದರು.
ಕಾರ್ಖಾನೆಯವರು ವಿಳಂಬ ಮಾಡದೇ ದರ ಘೋಷಿಸಬೇಕು. ಇಲ್ಲದಿದ್ದರೆ ಜಿಲ್ಲಾಧಿಕಾರಿಗಳು ಕಾರ್ಖಾನೆಯವರ ಮೇಲೆ ಕ್ರಮ ಕೈಕೊಳ್ಳಲು ಕೇಳಿಕೊಂಡರು.
ಪ್ರತಿಭಟನೆಯಲ್ಲಿಬಸವರಾಜ ಬಿರಾದಾರ,ಸಂಗಮೇಶ ಪಾಸೋಡಿ, ಭೂಮಣ್ಣ ನಾಟಿಕಾರ, ಸಂಜೀವ ಬೂದಿಹಾಳ, ಗುರಣ್ಣ ಪಾಸೋಡಿ, ಅಶೋಕ ಬಿರಾದಾರ, ಸಿದ್ದರಾಯ ಬಿರಾದಾರ ಶ್ರೀಮಂತ ಖಸ್ಕಿ, ಯಲ್ಲು ಹಿಳ್ಳಿ, ಮಲ್ಲಿಕಾರ್ಜುನ ಪಾಸೋಡಿ ಮತ್ತಿತರಿದ್ದರು.
ಮಿರಗಿ,ಶಿರಶ್ಯಾಡ, ನಾದ, ಸಂಗೋಗಿ, ಗೋಳಸಾರ, ಹಂಚಿನಾಳ, ಅರ್ಜುಣಗಿ, ಮಾರಸನಹಳ್ಳಿ, ಲಾಳಸಂಗಿ, ಸಂಗೋಗಿ ಗ್ರಾಮದ ಸಾವಿರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

























