ಅಧಿಕಾರಿಗಳಿಗೆ ಮಸಿ ಬಳಿದ ಘಟನೆ ಖಂಡಿಸಿ ಪ್ರತಿಭಟನೆ

ಕಲಬುರಗಿ,ಸೆ.19: ಲೋಕೊಪಯೋಗಿ ಇಲಾಖೆ, ಕಲಬುರಗಿ ವೃತ್ತ ಕಛೇರಿಯ ಸೂಪರಿಂಟೆಂಡೆಂಟ್ ಇಂಜಿನೀಯರ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಮುಖಕ್ಕೆ ಕಪ್ಪು ಬಣ್ಣ ಬಳಿದ ಕನ್ನಡಪರ ಸಂಘಟನೆಯ ಕಾರ್ಯಕರ್ತರ ಕ್ರಮವನ್ನು ಖಂಡಿಸಿ ತಕ್ಷಣ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ಇಂಜಿನೀಯರಿಂಗ್ ಸೇವಾ ಸಂಘ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಿ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಯಿತು.
. ಎಂ.ಎಸ್.ಕೆ ಮಿಲ್ ಹತ್ತಿರ ನಿರ್ಮಿಸುತ್ತಿರುವ ನೂತನ ಕಣ್ಣಿ ತರಕಾರಿ ಮಾರುಕಟ್ಟೆ ಕಟ್ಟಡದ ನಾಮಫಲಕ ತೆರವುಗೊಳಿಸಿದ ವಿಚಾರವಾಗಿ ಕನ್ನಡಪರ ಸಂಘಟನೆಯ ಕಾರ್ಯಕರ್ತರು ಅಧಿಕಾರಿಯವರಿಗೆ ತೀವ್ರ ಮುಜುಗುರವಾಗುವಂತೆ ಅವಮಾನಿಸಿರುತ್ತಾರೆ.ಹೀಗಾಗಿ ಈ ಸಂಘಟನೆಗಳ ಕಾರ್ಯಕರ್ತರು ಸರ್ಕಾರಿ ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿರುವುದರಿಂದ ಕಛೇರಿಯಲ್ಲಿ ಭಯದ ವಾತಾವರಣದಿಂದ ಪರಿಣಾಮಕಾರಿಯಾಗಿ ಕೆಲಸ ಮಾಡುವ, ನಮ್ಮ ಸಾಮಥ್ರ್ಯದ ಮೇಲೆ ಪರಿಣಾಮ ಬೀರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ಮಸಿ ಬಳೆಯುವ ಅಕ್ಷಮ್ಯ ಅಪರಾಧ ಎಸಗಿದವವರ ವಿರುದ್ಧ ತುರ್ತು ಕ್ರಮ ಕೈಗೊಂಡು ಅವರನ್ನು ಶಿಕ್ಷೆಗೆ ಗುರಿಪಡಿಸುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಲಾಯಿತು.ಈ ಸಂದರ್ಭದಲ್ಲಿ
ನೀಲಕಂಠ ಜಮಾದಾರ, ಕಾಳಪ್ಪ, ರಮೇಶ ನಾಯಿಕ, ಮಾತರ್ಂಡ ಶಾಸ್ತ್ರೀ, ಮಂಜೂನಾಥ ಧೂಳೆ, ಶಶಿಕಾಂತ ಕಮಲಾಪೂರಕರ್, ದುಂಡೆಶ ಸುಬೇದಾರ, ಶಾಮಸುಂದರ ಸರ್ನಾಡ, ಸಿದ್ದಲಿಂಗಪ್ಪ ಗೌಂಡಿ, ಉಮೇಶ ಆಲೇಗಾಂವ, ಸೂರ್ಯಕಾಂತ ಗಾಯಕವಾಡ ಸೇರಿದಂತೆ ಹಲವರಿದ್ದರು.