Home ಜಿಲ್ಲೆ ಉದ್ಯೋಗ ಖಾತ್ರಿ, ಕೂಲಿ ಹಣ ಬಾಕಿಪಿ. ಡಿ. ಓ ವಿರುದ್ಧ ಗ್ರಾಮ ಪಂಚಾಯತ್ ಮುಂದೆ ಕೂಲಿಕಾರರ...

ಉದ್ಯೋಗ ಖಾತ್ರಿ, ಕೂಲಿ ಹಣ ಬಾಕಿಪಿ. ಡಿ. ಓ ವಿರುದ್ಧ ಗ್ರಾಮ ಪಂಚಾಯತ್ ಮುಂದೆ ಕೂಲಿಕಾರರ ಧರಣಿ

ಯಾದಗಿರಿ : ತಾಲೂಕಿನ ಕಿಲ್ಲನಕೇರಾ ಗ್ರಾ.ಪಂ. ವ್ಯಾಪ್ತಿಯ ಗೌಡಗೇರಾ ಗ್ರಾಮದ ಸ.ನಂ. ೨೬೬ ರಲ್ಲಿ ಕಾಶಿನಾಥ ತಂ/ ಹುಸೇನಪ್ಪ ಎಂಬುವವರ ಜಮೀನಿನಲ್ಲಿ ಕೃಷಿ ಹೊಂಡ ಮತ್ತು ನಾಲಾ ಹೂಳೆತ್ತುವ ಕಾಮಗಾರಿ ಪೂರ್ಣಗೊಂಡಿದ್ದು, ವಿನಾಕಾರಣ ೩ ವಾರಗಳ ಎನ್.ಎಂ.ಆರ್. ಜಿರೋ ಮಾಡಿರುವ ಪಿಡಿಓ ಅವರು ಉದ್ಯೋಗ ಖಾತ್ರಿ ೩.೨.೨. ರವರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಹಾಗೂ ೩ ವಾರಗಳ ಕೂಲಿ ಹಣವನ್ನು ನೀಡುವಂತೆ ಗ್ರಾಮ ಪಂಚಾಯತ್ ಮುಂದೆ ಕೂಲಿಕಾರರು ಬುಧವಾರ ಧರಣಿ ನಡೆಸಿದರು.

ಪಿಡಿಓ ಅವರು ವಿನಾಕಾರಣ ೩ ವಾರಗಳ ಎನ್.ಎಂ.ಆರ್. ಜಿರೋ ಮಾಡಿದ್ದು, ೧೩ ಜನ ಕೂಲಿಕಾರರು ದುಡಿದಿದ್ದು, ೨೦೨೫-೨೬ ನೇ ಸಾಲಿನ ಗೌಡಗೇರಾ ತಾಂಡಾದ ನರಸಪ್ಪ ಹೊಲದಿಂದ ಅನಂತಪ್ಪ ಹೊಲದವರೆಗೆ ನಾಲಾ ಹೂಳೆತ್ತುವುದು. ೪೪ ಜನ ಕೂಲಿಕಾರರು ಕೆಲಸ ಮಾಡಿದ್ದು , ಸ್ಥಳದಲ್ಲಿ ಕಾಮಗಾರಿಗಳು ಆದ ಬಗ್ಗೆ ಟಿ.ಎ.ಇ. ಖಾತ್ರಿಪಡಿಸಿಕೊಂಡಿದ್ದು,

ಆದರೆ ಪಿಡಿಓ, ಮತ್ತು ಉದ್ಯೋಗ ಖಾತ್ರಿ ಟಿ.ಎ.ಇ. ರವರು ಉದ್ದೇಶಪೂರ್ವಕವಾಗಿ ಎನ್.ಎಂ.ಆರ್. ಜಿರೋ ಮಾಡಿದ್ದಾರೆ ಪಿಡಿಓ ರವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡದೇ ಕೂಲಿಕಾರರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಇದರ ಮಾಹಿತಿಗಾಗಿ ಪಿ ಡಿ ಓ ಅವರನ್ನು ಪ್ರಶ್ನಿಸಿದರೆ ಏನ್ ಮಾಡ್ತಿರಿ? ಮಾಡಿಕೊಳ್ಳಿ. ಎಂದು ಹೇಳುತ್ತಾರೆ.
ಜಾಬ ಕಾರ್ಡ ಮಾಡುತ್ತೇವೆಂದು ದಾಖಲೆಗಳು ಪಡೆದು ೧ ತಿಂಗಳಾದರೂ ಪಿಡಿಓ ರವರು ಜಾಬ್ ಕಾರ್ಡ ಮಾಡಿರುವುದಿಲ್ಲ.

ಆದ ಕಾರಣ ಪಿಡಿಓ & ಟಿ.ಎ.ಇ. ರವರ ಮೇಲೆ ಶಿಸ್ತು ಕ್ರಮ ಜರುಗಿಸಿ, ಸ್ಥಳ ತನಿಖೆ ಮಾಡಿ, ಸದರಿ ಕಾಮಗಾರಿಗಳ ಕೂಲಿ ಹಣ ಪಾವತಿಸಲು ಪಿಡಿಓ ರವರಿಗೆ ಸೂಚಿಸಿ ಬಡ ಕೂಲಿಕಾರರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದರು.
ಒAದು ವೇಳೆಯಲ್ಲಿ ನಿರ್ಲಕ್ಷವಹಿಸಿದರೆ ಕಿಲ್ಲನಕೇರಾ ಯಾದಗಿರಿ ಮಾರ್ಗ ರಸ್ತೆ ಬಂದ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.