
ಚಿಟಗುಪ್ಪಾ:ಫೆ.27: ಪರಿಶಿಷ್ಟ ಜಾತಿ ಒಳಮೀಸಲಾತಿಯಲ್ಲಿ ಬಲಗ್ಗೆ ಸಮುದಾಯಕ್ಕೆ ಅನ್ಯಾಯವಾಗಿದು. ಅದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ ಎಸ್ಸಿ ಬಲಗೈ ಹೋರಾಟ ಸಮಿತಿ ವತಿಯಿಂದ ಮನ್ನಾಏಖೇಳ್ಳಿಯಲ್ಲಿ ಗುರುವಾರ ಬ್ರಹತ್ ಪ್ರತಿಭಟನೆ ನಡೆಸಿದರು,
ಬೀದರ್ ಚಿಂಚೋಳ್ಳಿ ರಸ್ತೆಯ ಕ್ರಾಸ್ ನಿಂದ ಮನ್ನಾಏಖೇಳ್ಳಿ ಗ್ರಾಮದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ್ಯಾಲಿ ಜರುಗಿತ್ತು.
ರಾಜ್ಯಪಾಲರಿಗೆ ಬರೆದ ಮನವಿ ಪತ್ರ ತಹಸೀಲ್ದಾರ್ ಮಂಜುನಾಥ್ ಪಂಚಾಳ ಅವರಿಗೆ ಸಲ್ಲಿಸಿದರು.
ಒಳಮೀಸಲಾತಿ ರೋಸ್ಟರ್ ನಿಗದಿಯಲ್ಲಿ ಅನೇಕ ಸಮಸ್ಯೆಗಳು ಕಂಡು ಬರುತ್ತಿದ್ದು,ಪ್ರದರ್ಗ-ಎ 1ನೇ ಸ್ಥಾನದಲ್ಲಿ ಪ್ರವರ್ಗ-ವ ಅನ್ನು 9ನೇ ಸ್ಥಾನದಲ್ಲಿ ಹಾಗೂ ಪ್ರವರ್ಗ-3 ಅನ್ನು 15ನೇ ಸಮಾನ ಅವಕಾಶ ಸಿಗುತ್ತದೆ ಎಂಬ ಬಗ್ಗೆ ಅನುಮಾನ ಹಾಗೂ ಪ್ರಶ್ನೆ ಉದ್ಭವಿಸಿದೆ. ಸಮತೋಲನ ಕಾಪಾಡದಿದ್ದರೆ ಪರಿಶಿಷ್ಟ ಜಾತಿಗಳಿಗೆ ಕಡಿದು ಹುದ್ದೆಗಳ ನೇಮಕಾತಿ ನಡೆಯುವ ಸಂದರ್ಭದಲ್ಲಿ ಸಮುದಾಯಗಳು ಸಂಪೂರ್ಣ ಅವಕಾಶದಿಂದ ವಂಚಿತರಾಗುವ ಆಪಾಯ ಎದ್ದು ಕಾಣುತ್ತಿದೆ.
ರೋಸ್ಟರ್ ಬಿಂದುವಿನಲ್ಲಿ ಇರುವ ನ್ಯೂನ್ಯತೆ ಹಾಗೂ ಸರಕಾರ ತಮಗೆ ಕಳುಹಿಸಿರುವ ಒಳಮೀಸಲಾತಿಯಲ್ಲಿ ಸಮಾನ ಅವಕಾಶ ಕಲ್ಪಿಸುವ ಕಾಯ್ದೆ ರೂಪಿಸಬೇಕು, ಒಳಮೀಸಲಾತಿಗೆ ಅನ್ವಯಿಸುವ ರೋಸ್ಟರ್ ಬಿಂದುವನ್ನು ಪರಿಷ್ಕರಿಸಿ ಸರಿಪಡಿಸಬೇಕು.
ಒಳಮೀಸಲಾತಿಯಲ್ಲಿನ ಗೊಂದಲಗಳು ನಿವಾರಣೆ ಮಾಡಿ,ಎಲ್ಲರಿಗೂ ಸಮಾನತೆ ಒದಗಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಉಗ್ರರೂಪ ಪಡೆಯುತ್ತದೆ ಎಂದು ಮುಖಂಡರು ಮಾತನಾಡಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಒಳಮೀಸಲಾತಿ ಹೋರಾಟ ಸಮಿತಿಯ ಗೌರವ ಅಧ್ಯಕ್ಷ ದಿಲೀಪಕುಮಾರ್ ವರ್ಮಾ,ಅಧ್ಯಕ್ಷ ರಾಜಕುಮಾರ್ ಸಿಂಧೆ, ಉಪಾಧ್ಯಕ್ಷ ರಾಜಕುಮಾರ್ ಅಗಸಿ,ಕಾಶೀನಾಥ್ ಗುಜಗರೆ,ಸಂದೀಪ್ ಕಟ್ಟಿಮನಿ,ಓಂಕಾರ್ ಮಂಗಲಗಿ,ಶಿವಕಾಂತ ಹಾರೂರಗೆರಿಕರ್,ಬಸವರಾಜ್ ಹೊಚಕನಹಳ್ಳಿ ಶಿವಕುಮಾರ್ ಮಂಗಲಗಿ,ಶ್ರೀಕಾಂತ್ ಹೊಸಮನಿ,ಮಿಥುನ್ ವರ್ಮಾ,ಓಂಕಾರ್ ಭಂಗೂರ,ಗೌತಮ್ ಬಗದಲ್ಕರ,ವಿದ್ಯಾಸಾಗರ ಅಲ್ಲಿಪುರ್ ಸೇರಿದಂತೆ ಅಪಾರ ಮಹಿಳೆಯರು ಭಾಗವಹಿಸಿದ್ದರು.
























