ಆಳಂದ:ಅ.೧೯: ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವ ಪ್ರಿಯಾಂಕಾ ಖರ್ಗೆ ಅವರಿಗೆ ಜೀವ ಬೇದರಿಕೆ ಹಾಕಿದ ಆರೋಪಿಗಳನ್ನು ಬಂಧಿಸಿ ಅವರು ಉನ್ನತ ಭದ್ರತೆ ಒದಗಿಸಬೇಕು ಎಂಬ ಬೇಡಿಕೆ ಸೇರಿದಂತೆ ಸುಪ್ರೀಂಕೋರ್ಟ್ ನ್ಯಾಯಾಧೀಶ ಬಿ.ಆರ್. ಗವಾಯಿ ಅವರತ್ತ ಶೂ ಎಸೆದ ಪ್ರಕರಣ ಖಂಡಿಸಿ ಆರೋಪಿಗಳ ಕಠಿಣ ಶಿಕ್ಷೆ ವಿಧಿಸುವಂತೆ ಪಟ್ಟಣದಲ್ಲಿ ಕರ್ನಾಟಕ ಭೀಮ ಸೇನೆ ತಾಲೂಕು ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪಟ್ಟಣದ ಹಳೆ ತಹಸೀಲ್ದಾರ ಕಚೇರಿಯಿಂದ ಬಸ್ ನಿಲ್ದಾಣ ವರೆಗೆ ಶನಿವಾರ ಪ್ರತಿಭಟನೆ ನಡೆದ ಸೇನೆಯ ಜಿಲ್ಲಾ ಅಧ್ಯಕ್ಷ ಸಂಜಯ ಬೋಸಲೆ ಮತ್ತು ತಾಲೂಕು ಅಧ್ಯಕ್ಷ ನಾಗರಾಜ ಸಿಂಗೆ ನೇತೃತ್ವದದಲ್ಲಿ ಕಾರ್ಯಕರ್ತರು ಪ್ರತಿಭಟನೆ ಕೈಗೊಂಡು ತಹಸೀಲ್ದಾರ ಮೂಲಕ ರಾಜ್ಯ ಹಾಗೂ ಕೇಂದ್ರ ಗೃಹ ಸಚಿವರಿಗೆ ಪ್ರತ್ಯೇಕವಾಗಿ ಬೇಡಿಕೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಮುಖಂಡರು ಮಾತನಾಡಿ, ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮೇಲೆ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್ ಕಿಶೋರ್ ಅವರನ್ನು “ಸಂವಿಧಾನ ವಿರೋಧಿ ಮತ್ತು ಜಾತಿವಾದಿ” ಎಂದು ಖಂಡಿಸಿ, ಕಠಿಣ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ರಾಜ್ಯದ ಗ್ರಾಮೀಣ ಅಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆರ್‌ಎಸ್‌ಎಸ್ ಕಾರ್ಯಕರ್ತರಿಂದ ಬಂದ ಜೀವ ಬೇದರಿಕೆ ಮತ್ತು ಅವಾಚ್ಯ ನಿಂದನೆಗಳನ್ನು ತೀವ್ರವಾಗಿ ಖಂಡಿಸಿದ ಅವರು, ಅಂತಹ ವ್ಯಕ್ತಿಗಳನ್ನು ಗಡಿಪಾರು ಮಾಡುವುದು ಮತ್ತು ಸಚಿವರಿಗೆ ಝಡ್+ ಸುರಕ್ಷತೆ ನೀಡಬೇಕು ಎಂದು ಆಗ್ರಹಿಸಿದರು.
“ದೇಶದಲ್ಲಿ ಎಲ್ಲರಿಗೂ ಒಂದೇ ಸಂವಿಧಾನ ಇದ್ದರೂ, ದಲಿತ ಸಚಿವರಿಗೆ ಜೀವ ಬೇದರಿಕೆ ಮತ್ತು ನಿಂದನೆ ಮಾಡುವುದು ಸಹ್ಯಿಸಲು ಆಗದು. ಸಾಮಾನ್ಯ ಜನರ ಗತಿ ಏನು? ಇಂತಹ ಮನುವಾದಿಗಳು ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದಾರೆ. ಪ್ರಧಾನ ಮಂತ್ರಿ, ಗೃಹ ಸಚಿವರೇ, ಈ ಜಾತಿವಾದಿ ವಕೀಲ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರನ್ನು ಶಿಕ್ಷಿಸದಿದ್ದರೆ, ನಾವು ದೆಹಲಿ ಚಲೋ ಹೋರಾಟಕ್ಕೆ ಕರೆ ನೀಡುತ್ತೇವೆ. ಜಂತರ್ ಮಂತರ್‌ನಲ್ಲಿ ಮಹಾ ಪ್ರತಿಭಟನೆ ನಡೆಸಿ, ಸಂವಿಧಾನದ ರಕ್ಷಣೆಗಾಗಿ ಹೋರಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು. ಸಚಿವ ಖರ್ಗೆ ಅವರಿಗೆ ಸೂಕ್ತ ರಕ್ಷಣೆ ನೀಡುವುದು ಮತ್ತು ಸಂವಿಧಾನ ವಿರೋಧಿ ಚಟುವಟಿಕೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯ ಮತ್ತು ಕೇಂದ್ರದ ಗೃಹ ಸಚಿವರಿಗೆ ನಾಡ್ ತಹಸೀಲ್ದಾರ ಗುರಲಿಂಗಯ್ಯ ಸ್ವಾಮಿ ಅವರ ಮೂಲಕ ಪ್ರತ್ಯೇಕ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸೇನೆಯ ಜಿಲ್ಲಾ ಅಧ್ಯಕ್ಷ ಸಂಜಯ ಬೋಸಲೆ, ತಾಲೂಕು ಅಧ್ಯಕ್ಷ ನಾಗರಾಜ ಸಿಂಗೆ, ಉಪಾಧ್ಯಕ್ಷ ಜೈಭೀಮ ಸುಳ್ಳದ, ಪ್ರಧಾನ ಕಾರ್ಯದರ್ಶಿ ಮಹೇಶ ಪೋತೆ, ಕಾಯಾಧ್ಯಕ್ಷ ಮಹಾವೀರ ಕಾಂಬಳೆ, ಜಂಟಿ ಕಾರ್ಯದರ್ಶಿ ಅಮರ ಸಿಂಗೆ, ಯುವ ಅಧ್ಯಕ್ಷ ನಿತೀನ ಡೊಲೆ, ಉಪಾಧ್ಯಕ್ಷ ರವಿಕುಮಾರ ಆರೆ, ಕಾರ್ಯಾಧ್ಯಕ್ಷ ಅಜಯಕುಮಾರ ಹಬಾಡೆ, ಸಂಘಟನಾ ಕಾರ್ಯದರ್ಶಿ ಪ್ರಜ್ವಲ ಡೊಲೆ, ಜಂಟಿ ಕಾರ್ಯದರ್ಶಿ ಅಭಿಷೇಕ ಕಟ್ಟಿಮನಿ, ಜಿಲ್ಲಾ ಕಾರ್ಯದರ್ಶಿ ಶಿವು ಪ್ರಸನ್ನ, ಜೈಭೀಮ ಸುಳ್ಳದ, ಆಸ್ಫಾಕ್ ಮುಲ್ಲಾ, ಮುತ್ತಣ್ನಾ ಜಂಗಲೆ, ಹಿರಿಯ ಮುಖಂಡ ಬಾಬುರಾವ್ ಸುಳ್ಳದ, ಮಲ್ಲಿಕಾರ್ಜುನ ಮಂಡೆ, ವಿದ್ಯಕುಮಾರ ಕಾತ್ರಾಬಾದ, ದಿನೇಶ ಕಾತ್ರಾಬಾದ, ವಿಜಯಕುಮಾರ ಇಕ್ಕಳಕಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.

























