೪ ನೇ ದಿನಕ್ಕೆ ಕಾಲಿಟ್ಟ ಪೌರಸೇವಾ ನೌಕರರ ಪ್ರತಿಭಟನೆ; ನಗರದಲ್ಲಿ ರಾಶಿ ಕಸ

ಕೆಜಿಎಫ್:ಜೂ:೩:ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ವಿವಿಧ ಭೇಡಿಕೆಗಳನ್ನು ಮುಂದಿಟ್ಟು ಕರೆ ನೀಡಿರುವ ಅನಿರ್ಧಿಷ್ಠಾವದಿ ಮುಷ್ಕರಕ್ಕೆ ಕೆಜಿಎಫ್ ಪೌರಕಾರ್ಮಿಕರ ಸಂಘ ಬೆಂಬಲ ವ್ಯಕ್ತಪಡಿಸಿ ನಗರಸಭೆ ಮುಂಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆ ೪ ನೇ ದಿನಕ್ಕೆ ಕಾಲಿಟ್ಟಿದ್ದು ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿರುವುದರಿಂದ ನಗರದಲ್ಲಿ ಕಸ ವಿಲೇವರಿ ಯಾಗದೆ ರಸ್ತೆ ರಸ್ತೆಗಳಲ್ಲಿ ಕಸಗಳ ರಾಷಿ ತುಂಬಿ ತುಳುಕುತ್ತಿರುವ ಸನ್ನಿವೇಶ ಸಾಮಾನ್ಯವಾಗಿ ಕಂಡು ಬರುತ್ತಿದ್ದು ಸಾರ್ವಜನಿಕರು ಸಾಂಕ್ರಮಿಕ ಖಾಯಿಲೆಗಳು ಬರುವ ಆತಂಕವನ್ನು ವ್ಯಕ್ತಪಡಿಸುತ್ತಿದ್ದಾರೆ.


ಈ ವೇಳೆ ನಗರಸಭೆ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆಜಿಎಫ್ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ರಾಮು ರಾಜ್ಯ ಪೌರಸೇವಾ ನೌಕರರ ಸೇವಾ ಸಂಘ ಸರ್ಕಾರಿ ನೌಕರರಿಗೆ ನೀಡುವ ಪ್ರತಿಯೋಂದು ಸೌಲತ್ತುಗಳನ್ನು ಪೌರಸೇವಾ ನೌಕರರಿಗೂ ನೀಡಬೇಕು ಸ್ಥಳೀಯ ಸಂಸ್ಥೆಗಳಲ್ಲಿ ದಿನಗೂಲಿ ಆಧಾರದ ಮೇರೆಗೆ ದುಡಿಯುತ್ತಿರುವ ಪೌರಸೇವಾ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಬೇಕು ನಗರಸಭೆಗಳಲ್ಲಿ ಶೇ: ೧ ರಷ್ಟು ಪೌರಕಾರ್ಮಿಕರನ್ನು ವಿಶೇಷ ನೇಮಕಾತಿ ಅಡಿ ನೇಮಕಾತಿ ಮಾಡುವ ಬಗ್ಗೆ ೨೦೨೨ ರ ವಿಶೇಷ ನೇಮಕಾತಿಯಡಿ ನೇಮಕಾತಿಗೊಂಡಿರುವ ಪೌರಕಾರ್ಮಿಕರಿಗೆ ಎಸ್.ಎಫ್,ಸಿ ವೇತನ ನಿಧಿಯಿಂದ ಪಾವತಿಸಬೇಕು ನಗರಸಭೆ ವ್ಯಾಪ್ತಿಯಲ್ಲಿ ನೀರು ಸರಬರಾಜು ನಿರ್ವಹಿಸುವ ಕಾರ್ಮಿಕರ ಸೇವೆಯನ್ನು ವಿಶೇಷ ನೇಮಕಾತಿಯಡಿ ನೇಮಕಾತಿ ನೀಡಬೇಕು ಎಂದು ವಿವಿಧ ಭೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಧ್ಯಾಂತ ಪ್ರತಿಬಟನೆ ನಡೆಸುತ್ತಿದ್ದು ರಾಜ್ಯ ಸಂಘದ ಕರೆ ಮೇರೆಗೆ ನಾವು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.


ಪ್ರತಿಭಟನೆಯಲ್ಲಿ ಕೆಜಿಎಫ್ ಪೌರಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟೇಶ್,ಶಶಿಕುಮಾರ್, ರಾಮಚಂದ್ರ ,ರಾಜಾ ಮೂರ್ತಿ ,ಜಯರಾಮ, ದೇವೆಂದ್ರನ್ ,ಮಂಗಳಗೌರಿ,ಗಿರಿಬಾಬು, ಬಬಲಯ್ಯ ತಂಗರಾಜ್, ರಘುನಾಥ್ ಹಾಗೂ ಇತರರು ಹಾಜರಿದ್ದರು