Home ಜಿಲ್ಲೆ ಕಲಬುರಗಿ ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ

ಕಾರ್ಮಿಕ ವಿರೋಧಿ ನೀತಿ ವಿರೋಧಿಸಿ ರಸ್ತೆ ತಡೆದು ಪ್ರತಿಭಟನೆ

ಸೇಡಂ, ಫೆ,13: ಸಾರ್ವಜನಿಕ ಸೇವೆಗಳನ್ನು ಕಾಸಿಕರಿಸುವತ್ತ ದೊಡ್ಡ ಕಾಪೆರ್Çರೇಟ್ ಕಂಪನಿಗಳಿಗೆ ಮಾರಾಟ ಮಾಡುವುದನ್ನು ಮುಂದುವರಿಸುತ್ತಿರುವ ಸರ್ಕಾರದ ನಡೆ ಖಂಡಿಸಿ ಹಾಗೂ ನನಗೆ ಯೋಜನೆಯನ್ನು ವಿಬಿಜಿ ರಾಮ್ ಜಿ ಎಂದು ಬದಲಿಸಿ ಉದ್ಯೋಗ ಖಾತ್ರಿ ಹಕ್ಕನ್ನೆ ಕಸಿದುಕೊಂಡು ಹಳ್ಳಿಯ ಬಡಜನರ ಆಸೆಯ ಕಿತ್ತುಕೊಂಡಿರುವುದು ಖಂಡಿಸಿರುವ ಜೊತೆಗೆ ದಿನಕ್ಕೆ 12 ತಾಸು ಕೆಲಸದ ಅವಧಿ ಹೆಚ್ಚಿಸಿರುವುದರ ಜೊತೆಗೆ ಮಹಿಳಾ ಉದ್ಯೋಗಗಳಿಗೆ ರಾತ್ರಿ ಪಾಳಿಯಲು ದುಡಿಯುವ ಅವಕಾಶ ನೀಡುವ ಲೇಬರ್ ಕೋಡ್ ಗಳನ್ನು ಕಿತ್ತಿ ಕೊಳ್ಳುತ್ತಿರುವುದನ್ನು ಖಂಡಿಸಿ ಅಂಗನವಾಡಿ, ಆಶಾ, ವಸತಿ, ನೌಕರರ ಸಂಘಗಳಿಂದ, ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೇಂಟರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಜರುಗಿತ್ತು.
ಇಲ್ಲಿನ ಬಸವೇಶ್ವರ ವೃತ್ತದ ರಾಜ್ಯ ಹೆದ್ದಾರಿ ತಡೆದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯುವಂತೆ ಹಾಗೂ ಕಾರ್ಮಿಕರ ಹಕ್ಕುಗಳನ್ನು ಸಂರಕ್ಷಿಸಲು ಪ್ರಧಾನ ಮಂತ್ರಿಗಳಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ತಹಸಿಲ್ದಾರ್ ಶ್ರೀಮತಿ ಶ್ರೀಯಾಂಕ್ ಎ ಧನಶ್ರೀ ಅವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.
ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳಾದ ನಾಲ್ಕು ಕರಾಳ ಲೇಬರ್ ಕೋಡ್ ಗಳನ್ನ ಹಿಂಪಡೆಯಬೇಕು, ಬಿಬಿಜಿ ರಾಮ್ ಜಿ, ಭೀಮ ಕಾಯ್ದೆ ಶಾಂತಿ ಕಾಯ್ದೆ ರದ್ದುಗೊಳಿಸಬೇಕು, ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ಬೀಜ ಕಾಯ್ದೆ, ಭೂಸ್ವಾಧೀನ ಕಾಯ್ದೆ ರದ್ದುಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ಧರಣಿ ನಡೆಸಿದರು.ಈ ವೇಳೆಯಲ್ಲಿ ಎಐಯುಟಿಯುಸಿ ಜಿಲ್ಲಾಧ್ಯಕ್ಷ ವಿಜಿ ದೇಸಾಯಿ, ಆಶಾ ಕಾರ್ಯಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ಲಕ್ಷ್ಮಿ, ಅಂಗನವಾಡಿ ನೌಕರರ ಸಂಘದ ತಾಲೂಕ ಅಧ್ಯಕ್ಷೆ ಮಹಾದೇವಿ, ಹಾಸ್ಟೆಲ್ ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಹುಳಗೋಳ, ಅಯ್ಯಪ್ಪ ಪುಜಾರಿ, ಸತೀಶ್ ರೆಡ್ಡಿ ರಂಜೋಳ್, ಜಮೀಲ್ ಅಲಂಪುರ, ದೇವೇಂದ್ರಪ್ಪ ಜಾಪೂರ, ಭೀಮಾಶಂಕರ ಕೋಳಕುರ, ಮನೋಜ್ ಜಾಧವ್,ಶ್ರೀಮತಿ ವಿಜಯಲಕ್ಷ್ಮಿ,ಎಐಯುಟಿಯುಸಿ ಜಿಲ್ಲಾ ಸದಸ್ಯೆ ಶ್ರೀಮತಿ ನಾಗಮಣಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.