ರಾಕೇಶ್ ಕಿಶೋರ್ ವಿರುದ್ದ ಕ್ರಮಕ್ಕೆ ಪ್ರತಿಭಟನೆ

ಕೋಲಾರ,ಅ.೧೦- ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ವತಿಯಿಂದ ವೇಮಗಲ್ ಪಟ್ಟಣದ ಹೃದಯ ಭಾಗದ ರಾಮಶೆಟ್ಟಿ ವೃತ್ತದಲ್ಲಿ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್.ಆರ್ ಗವಾಯಿ ಅವರತ್ತ ಮೂಲ ಭೂತವಾದಿ, ಅನಿಷ್ಟ ಬ್ರಾಹ್ಮಣ್ಯದ ಅನುಚರ, “ಕೊಳೆತ” ಮನಸ್ಥಿತಿಯ ಮನುವಾದಿ ಸನಾತನಿ ರಾಕೇಶ್ ಕಿಶೋರ್ ಅನ್ನುವ ಕಿಡಿಗೇಡಿ ವಕೀಲನೊಬ್ಬ ಶೂ ಎಸೆದಿರುವ ಘಟನೆಯನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.


ಈ ಸನಾತನಿ ರಾಕೇಶ್ ಕಿಶೋರ್ ಎಸಗಿರುವ ದುಷ್ಕೃತ್ಯ ದೇಶದ ಸಂವಿಧಾನದ ಮೇಲೆ ನಡೆದಿರುವ ಅಸಹ್ಯಕರ ದಾಳಿಯಾಗಿದ್ದು, ನ್ಯಾಯಾಲಯದ ವಿಚಾರಣೆ ವೇಳೆ ನ್ಯಾಯಪೀಠದ ಮೇಲೆ ಬೂಟುಗಳನ್ನು ಎಸೆದು ನ್ಯಾಯಾದೇವತೆಗೆ ಅಗೌರವವನ್ನು ತಂದಿರುವ ವಿದೇಶಿ ಡಿ.ಎನ್.ಎ ಆರ್ಯನ್ ಸಂಘೀ ಬ್ರಾಹ್ಮಣ ದೃಷ್ಟ ರಾಕೇಶ್ ಕಿಶೋರ್ಗೆ ತಕ್ಕುದಾದ ಶಾಸ್ತಿಗೆ ಆಗ್ರಹಿಸಿ ಮೇಡಿಹಾಳ ಚಂದ್ರಶೇಖರ್ ಒತ್ತಾಯಿಸಿ ವೇಮಗಲ್ ಆರಕ್ಷಕ ನಿರೀಕ್ಷಕರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಿದರು.


ಈ ಸಂದರ್ಭದಲ್ಲಿ ಕದಸಂಸ ರಾಜ್ಯ ಸಂಘಟನಾ ಸಂಚಾಲಕ ಚಂದ್ರಶೇಖರ್ ಎಂ. ಮೇಡಿಹಾಳ, ವೇಮಗಲ್ ಜಿಲ್ಲಾ ಸಂಚಾಲಕ ರಮೇಶ್ ವಿ.ಎಂ, ಪ್ರಕಾಶ್ ಕ್ಯಾಲನೂರು, ನಾಗರಾಜ್ ಜಿ, ಚನ್ನಪ್ಪ ನಂಹಳ್ಳಿ, ಆಂಜಿನಪ್ಪ ಹೊಲೇರಹಳ್ಳಿ, ಬ್ಯಾಟಪ್ಪ ಮತ್ತು ರವಿಕುಮಾರ್ ಬೆಟ್ಟಹೊಸಪುರ, ಐತರಾಸನಹಳ್ಳಿ ಸಂಜೀವಪ್ಪ, ಸೀತಿ ಹೊಸೂರು ಮುನಿಕೃಷ್ಣಪ್ಪ, ಶಿವಣ್ಣ, ರಮೇಶ್, ವೆಂಕಟೇಶ್ ರಾಮಾಪುರ, ಚೌಡೇಗೌಡ, ಮುರುಳಿ, ರವಿ, ಕಾಂತರಾಜ್, ಅರುಣ್, ಮುನಿಯಪ್ಪ, ಟೈಲರ್ ಮಂಜು ಕುರುಗಲ್, ಆಂಜಿನಪ್ಪ ಕಡಗಟ್ಟೂರು, ಮುನಿಯಪ್ಪ ಬೆದ್ಲಿ, ಮುನಿಯಪ್ಪ ಮತ್ತು ಕೃಷ್ಣಪ್ಪ ಹಾರ್ಜೇನಹಳ್ಳಿ, ಮಂಜು, ಕೊಳಗಂಜನಹಳ್ಳಿ ನವೀನ್, ಆಂಜಿನಪ್ಪ ಕೆ. ಬೈರೇಶ್, ಮುನಿವೆಂಕಟಪ್ಪ, ಚೆನ್ನಕೇಶವ, ಮೇಡಿಹಾಳ ಮತ್ತಿತರರು ಭಾಗವಹಿಸಿದ್ದರು.