
ಬೀದರ:ಅ.೬:ವ್ಯಕ್ತಿಯ ನೂರಾರು ಪರಿವರ್ತನೆಗಳ ಜೊತೆಗೆ ಆಂತರಿಕ ಆಲೋಚನೆ ಬದಲಾವಣೆಯಾದಾಗ ಸಾಧನೆ ಸಾಧ್ಯ. ಹಾಳು ಹರಟೆಯ ಕಾಲ ಹರಣಕ್ಕಿಂತ ಧನಾತ್ಮಾಕ ಚಿಂತನೆ ಮನುಷ್ಯನ ವ್ಯಕ್ತಿತ್ವ ರೂಪಿಸುತ್ತದೆಂದು ಆರ್ಥಿಕ ತಜ್ಞಾರಾದ ಸಿಎ ರುದ್ರ ಮೂರ್ತಿ ನುಡಿದರು.
ಡಾ. ಚನ್ನಬಸವ ಪಟ್ಟದೇವರ ರಂಗ ಮಂದಿರದಲ್ಲಿ ವಚನ ಸಮೂಹ ಸಂಸ್ಥೆ ಏರ್ಪಡಿಸಿದ ವಚನ ವೆಂಚರ್ಸ್ ಪ್ರಾ.ಲಿ. ಉದ್ಘಾಟಣೆ ಹಾಗೂ ಡಿಬೆಂಚರ್ ವಿತರಣ ಸಮಾರಂಭವನ್ನು ಜ್ಯೋತಿ ಪ್ರಜ್ವಲನ ಮಾಡಿದ ಸಿಎ ರುದ್ರ ಮೂರ್ತಿ – ಮೊದಲು ಒಳ ಮನಸ್ಸಿನಲ್ಲಿ ಸಾಹುಕಾರ ಆಗಲು ಸಿದ್ಧತೆ ಮಾಡಿಕೊಂಡ ಮೇಲೆ ಹೋರಗೆ ಸಾಹುಕಾರರಾಗಲು ಸಾಧ್ಯ. ನಮ್ಮ ಮನೋಭೂಮಿಕೆ ಮೇಲೆ ಎಲ್ಲವು ನಿರಾಭಾರವಾಗಿದೆ. ನಮ್ಮ ಸುತ್ತಲಿನ ವಾತಾವರಣ ಸಹಿತ ಸ್ವಚ್ಛಂದವಾಗಿರಬೇಕು. ಮುಖ್ಯವಾಗಿ ನಮ್ಮ ಸಂಗಾತಿಗಳು ಸಹ ಒಳ್ಳೆಯವರಾಗಿರುವದು ಅಷ್ಟೇ ಮುಖ್ಯ.
ದುಡ್ಡು ಮಾಡುವದು ಸರಳ ಆದರೆ ಅದರ ಹಿಂದೆ ಪರಿಶ್ರಮ, ಬದ್ಧತೆ, ಕೃಪಾರ್ಶಿವಾದ ಇದರೆ ಆರ್ಥಿಕ ಸಧೃಡತೆ ಸಾಧ್ಯ. ಆದರ್ಶ ವ್ಯಕ್ತಿಗಳ, ಅಪ್ರತಿಮ ಸಾಧಕರ ಸಾಧನೆ ನಮ್ಮಗೆ ದಿಗ್ಧರ್ಶನವಾಗಬೇಕು. ನಮ್ಮ ಯಾವುದೇ ಹೂಡಿಕೆಗೆ ಮೊದಲು ಲಾಭಕ್ಕಿಂತ ಸುರಕ್ಷತೆ ಬಗ್ಗೆ ಯೋಚನೆ ಮಾಡಲೇಬೇಕು. ಡಿಬೆಂಚರ್‌ನಲ್ಲಿ ಹಣ ಹೂಡಿಕೆಮಾಡಿದರೆ ಐಡಿಎಫ್‌ಸಿ ಬ್ಯಾಂಕ್ ಗ್ಯಾರಂಟಿ ಕೊಡುತಿರುವುದು ನಿಮ್ಮೇಲ್ಲರ ಬಂಡವಾಳಕ್ಕೆ ಸುರಕ್ಷತೆ ಎಂಬುವುದು ನಿಸ್ಸಂದೇಹವಾಗಿದೆ ಎಂದರು. ಮನುಷ್ಯನಿಗೆ ದುಡ್ಡು ಬೇಕು, ಆದರೆ ದುಡ್ಡೇ ಎಲ್ಲವೂ ಅಲ್ಲ. ಸಂಸ್ಕಾರದಿAದ ನ್ಯಾಯ ನೀತಿ ನಿಷ್ಠೆಯಿಂದ ಗಳಿಸಿದ ಹಣ ಸಮಾಜಕ್ಕೆ ಉಪಯುಕ್ತವಾದರೆ ನಮ್ಮ ಹಿತಶತ್ರುಗಳ ಸಹ ನಮ್ಮನ್ನು ನೋಡಿ ಸಂತಸ ಪಡುವದರಲ್ಲಿ ಸಂಶಯವಿಲ್ಲವೆAದು ನುಡಿದರು.
ಸಮೂಹ ಸಂಸ್ಥೆಯ ಚಾರ್ಟರ್ಡ ಅಕೌಂಟೆAಟ್ ಹೈದ್ರಾಬಾದ್‌ನ ವರುಣ ಸಿದ್ದಾರ್ಥ ಮಾತನಾಡುತ್ತ ಇಲ್ಲಿ ಹೂಡಿಕೆ ಮಾಡಿದವರಿಗೆ ಕಾನೂನಿನ ಸವಲತ್ತುಗಳಿವೆ. ಬದ್ಧತೆ ನಂಬಿಕೆ ವಿಶ್ವಾಸ ಉಳ್ಳ ವಚನ ಸಮೂಹ ಸಂಸ್ಥೆ ೧೫ ವರ್ಷಗಳ ನಡೆದು ಬಂದ ದಾರಿ ನಮ್ಮ ಕಣ್ಣೆದೂರಿಗಿದೆ.
ಡಿಬೆಂಚರ್ ಇದು ಹೂಡಿಕೆದಾರರಿಗೆ ಅಧಿಕೃತ ಪ್ರಮಾಣ ಪತ್ರ ನೀಡುವುದಲದೇ ಹಣಕ್ಕೆ ಭದ್ರತೆ ನೀಡಿ ಮಾನಸಿಕವಾಗಿ ಸಧೃಡವನಾಗಿಸುವದು ಕಾನೂನಾತ್ಮಕ ಡಾಕ್ಯುಮೆಂಟ್‌ಯಿದಾಗಿದೆ. ಇದಕ್ಕೆ ಐಡಿಎಫ್‌ಸಿ ಬ್ಯಾಂಕ್ ಟ್ರಸ್ಟ್ ಗ್ಯಾರಂಟಿ ನೀಡಲಿದ್ದು ಹೂಡಿಕೆದಾರರು ಯಾವುದೇ ಆತಂಕಕ್ಕೆ ಒಳಗಾಗದೆ ವಿಚಲಿತ ಗೊಳ್ಳದೆ ನಿರಾತಂಕವಾಗಿ ವಚನ ಸಮೂಹ ಸಂಸ್ಥೆಯಲ್ಲಿ ಹಣ ವಿನಿಯೋಗಿಸಲು ಸಲಹೆ ನೀಡಿದರು.
ಮುಂಬರುವ ದಿನಗಳಲ್ಲಿ ವಚನ ಸಮೂಹ ಸಂಸ್ಥೆಗೆ ಐಪಿಓ ಪಡೆಯಲು ಒಂದು ವಿನೂತನವಾದ ಹಾಗೂ ಸಮಗ್ರವಾದ ಕಾರ್ಯಯೋಜನೆ ಸಿದ್ಧತೆ ಮಾಡಿಕೊಳ್ಳುತಿದ್ದು ರಾಜ್ಯದಲ್ಲೇ ಮಾದರಿಯ ಆರ್ಥಿಕ ಸಂಸ್ಥೆಯನ್ನಾಗಿ ಮಾರ್ಪಡಿಸಲು ನನ್ನ ಸಂಪೂರ್ಣ ಸಹಾಯ ಸಹಕಾರ ನೀಡಲು ಪ್ರಮಾಣ ಮಾಡುತೆನೆಂದು ಆತ್ಮ ವಿಶ್ವಾಸದಿಂದ ನುಡಿದರು.
ಕಾರ್ಯಕ್ರಮದ ದಿವ್ಯಾಸಾನಿಧ್ಯ ವಹಿಸಿರುವ ವಿವೇಕಾನಂದ ಆಶ್ರಮ ಪೂಜ್ಯ ಶ್ರೀ ಜ್ಯೋತಿರ್ಮಯಾನಂದ ಮಹಾಸ್ವಾಮಿಗಳು ಆರ್ಶಿವಚನ ನೀಡುತ್ತ ಯುವಕರಾದವರು ನಂಬಿಕೆ ಮತ್ತು ವಿಶ್ವಾಸದ ಪ್ರತೀಕವಾಗಿರಬೇಕು. ಜೀವನದಲ್ಲಿ ಗೊಂದಲಕ್ಕೀಡಾಗದೆ ಆಸೆ ಬುರುಕತನಕೆ ಜೊತುಬಿಳದೆ ಕಾಯಕ ಜೀವಿಗಳಾಗಿ ಹೋರಹೊಮ್ಮಿದರೆ ಪರಿಪೂರ್ಣ ಬದುಕಿಗೊಂದು ಲಕ್ಷಣ ಈ ಎಲ್ಲಾ ವಿಚಾರಗಳು ಅಲ್ಲಮಪ್ರಭು ನಾವದಗೇರೆಯವರಲ್ಲಿ ಸಮ್ಮಿಲನ ಗೊಂಡಿದು ನಿಶ್ಚಿಂತ ಬದುಕಿಗೆ ಇವರೇ ದೊಡ್ಡ ಉದಾಹರಣೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ನೇತೃತ್ವ ವಹಿಸಿರುವ ಪೂಜ್ಯ ಶ್ರೀ ಡಾ ಚನ್ನಬಸವಾನಂದ ಸ್ವಾಮೀಜಿ ಚನ್ನಬಸವೇಶ್ವರ ಜ್ಞಾನಪೀಠ, ಕುಂಬಳಗೂಡು, ಬೆಂಗಳೂರು ಹಾಗೂ ಪೂಜ್ಯ ಶ್ರೀ ಸದ್ಗುರು ಬಸವ ಪ್ರಭು ಮಹಾಸ್ವಾಮಿಗಳು, ಕಲ್ಯಾಣ ಮಹಾಮನೆ ಮಹಾಮಠ, ಗುಣತೀರ್ಥವಾಡಿ ಬಸವಕಲ್ಯಾಣ. ಸಹ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಮಹೇಶ ಬಿರಾದಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಯಾದಗಿರ. ಪ್ರೊ. ವೀರಣ್ಣ ದಂಡೆ ನಿವೃತ್ತ ಪ್ರಾಧ್ಯಾಪಕರು ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ. ಶರಣ ಬಿ.ಜಿ.ಶೆಟಕಾರ ಅಧ್ಯಕ್ಷರು, ಬೀದರ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಬೀದರ. ಶರಣ ಹಾವಶೆಟ್ಟಿ ಪಾಟೀಲ ಸಹಾಯಕ ಗವರ್ನರ್, ರೋಟರಿ ಕಲ್ಯಾಣ ಝೋನ್ ೩೧೬೦ ಜಿಲ್ಲೆ. ಶರಣ ಬಾಬು ವಾಲಿ, ರಾಜ್ಯಾಧ್ಯಕ್ಷರು, ಭಾರತೀಯ ಬಸವ ಬಳಗ, ಬೀದರ. ಶರಣ ಸುರೇಶ ಚೆನ್ನಶೆಟ್ಟಿ ಅಧ್ಯಕ್ಷರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬೀದರ. ಶರಣ ಶರಣಪ್ಪ ಮಿಠಾರೆ ಅಧ್ಯಕ್ಷರು, ಬಸವ ಕೇಂದ್ರ ಬೀದರ. ಶರಣ ಸೋಮಶೇಖರ ಪಾಟೀಲ ಗಾದಗಿ ಅಧ್ಯಕ್ಷರು, ರಾಷ್ಟ್ರೀಯ ಬಸವ ದಳ, ಬೀದರ. ಶರಣ ವಿಲಾಸರಾವ ಮೋರೆ ಹಿರಿಯ ನ್ಯಾಯವಾದಿಗಳು, ಬೀದರ. ಶರಣ ಸೋಮಶೇಖರ ಪಾಟೀಲ ವ್ಯವಸ್ಥಾಪಕ ನಿರ್ದೇಶಕರು, ಎನ್.ಎಸ್.ಎಸ್. ಕೆ. ಬೀದರ. ಶರಣ ಚೇತನ ದಾಬಕೆ ಆದರ್ಶ ಕೃಷಿಕರು, ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಚನ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಅಲ್ಲಮಪ್ರಭು ನಾವದಗೇರೆ ಮಾತನಾಡುತ್ತ ನಾನು ಅತ್ಯಂತ ನಿಷ್ಠಾವಂತನಾಗಿ ಭದ್ಧತೆಯಿಂದ ಹಾಗೂ ತಮ್ಮೇಲ್ಲರ ಸದಾಶಯದ ಆರ್ಶೀವಾದದಿಂದ ಆರ್ಥಿಕ ಸಂಕಷ್ಟದ ಪಯಣದಲ್ಲಿ ದಾಪುಗಾಲು ಹಾಕಿರುವೆ. ಅನೇಕ ಸಂಕಷ್ಟಗಳ ಮಧ್ಯಯು ವಿಚಲಿತರಾಗದೆ ಗುರುಗಳಾದ ಸಿಎ ರುದ್ರ ಮೂರ್ತಿ ಹಾಕಿಕೊಟ್ಟ ಮಾರ್ಗದಲ್ಲಿ ನಡೆದಿದ್ದೇನೆ. ೨೦೧೭ರಲ್ಲಿ ಅವರು ಕೊಟ್ಟ ತರಬೇತಿಯ ಸಂಧರ್ಭದಲ್ಲಿ ಮಾಡಿದ ಸಂಕಲ್ಪ ಇಂದು ಅವರ ಸಮ್ಮುಖದಲ್ಲಿ ಸಹಕಾರ ಗೊಂಡಿರುವುದು ನನ್ನ ಅದೃಷ್ಟ, ತಮ್ಮೇಲ್ಲರ ಆಶೀರ್ವಾದ ಹೀಗೆ ಮುಂದುವರೆಯಲಿ ಎಂದು ಪ್ರಾರ್ಥಿಸಿ ಸಾಂಕೇತಿಕವಾಗಿ ೨೫ ಹೂಡಿಕೆದಾರರಿಗೆ ಡಿಬೆಂಚರ್ ಪ್ರಮಾಣ ಪತ್ರ ವಿತರಿಸಿದರು.
ಇದೇ ಸಂಧರ್ಭದಲ್ಲಿ ಮಕ್ಕಳ ರೋಗ ತಜ್ಞರು ಹಾಗೂ ಹಿರಿಯ ವೈದ್ಯ ದೇವರಾದ ಡಾ. ಜಿ.ಯು. ಹತ್ತಿ ಅವರ ಅಪ್ರತಿಮ ಸೇವೆಗೆ ಗೌರವಿಸಲಾಯಿತು.
ವಚನ ಮಿಡಿಯಾ ಹೌಸ್‌ನ ಮುಖ್ಯಸ್ಥರಾದ ಸಿದ್ದು ಯಾಪಲಪರವಿ ಪ್ರಾಸ್ತಾವಿಕವಾಗಿ ಮಾತನಾಡಿದರೆ, ಶಿಕ್ಷಕರಾದ ಮಲ್ಲಿಕಾರ್ಜುನ ಟಂಕಸಾಲೆ ನಿರೂಪಿಸಿದರೆ, ವಚನ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷರಾದ ಶಿವಕುಮಾರ ಸಾಲಿ ವಂದಿಸಿದರೆ ಶಿವಶಂಕರ ಟೋಕರೆ ನಿರೂಪಿಸಿದರು. ವಚನ ವರ್ಷಿಣಿ ತಂಡದ ಸಹೋದರಿಯವರ ಸಾಮೂಹಿಕ ವಚನ ಗಾಯನ ಹಾಗೂ ಉಶಾ ಪ್ರಭಾಕರ್ ನಿರ್ದೇಶನದ ನಿಪೂರನೃತ್ಯ ಅಕಾಡೆಮಿ ಮಕ್ಕಳ ಹಾಗೂ ಡಾ. ಪ್ರೀತಿ ರಾಜಶೇಖರ ಪಾಟೀಲ ಇವರ ನೃತ್ಯ ಸಾರ್ವಜನಿಕರ ಗಮನ ಸೆಳೆಯಿತು. ವಚನ ಪ್ರಾರ್ಥನೆಯನ್ನು ವೈಜಿನಾಥ ಸಜ್ಜನಶೆಟ್ಟಿ ನಡೆಸಿಕೊಟ್ಟರು.

































