೫೦ ಕೋಟಿ ಮೌಲ್ಯದ ಆಸ್ತಿ ವಶ

ಬೆಂಗಳೂರು, ಡಿ.೨೦-ನಗರದ ಬಾಣಸವಾಡಿ ಗ್ರಾಮದಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಕಾರ್ಯಾಚರಣೆ ನಡೆಸಿ ಸುಮಾರು ೫೦ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.


ಒ.ಎಂ.ಬಿ.ಆರ್. ಬಡಾವಣೆಯ ಬಾಣಸವಾಡಿ ಗ್ರಾಮ ಸರ್ವೆ ನಂ. ೨೨೭/೨, ಮತ್ತು ೨೨೭ ರಲ್ಲಿ ಸುಮಾರು ೧ ಎಕರೆ ೨೪ ಗುಂಟೆ ಜಾಗದಲ್ಲಿದ್ದ ಅನಧಿಕೃತ ಒತ್ತುವರಿಯನ್ನು ಬಿಡಿಎ ಅಧಿಕಾರಿ ತೆರವುಗೊಳಿಸಿ ತಮ್ಮ ವಶಕ್ಕೆ ಪಡೆದು ಕೊಂಡಿದ್ದಾರೆ.


ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ಅಭಿಯಂತರ ಅಧಿಕಾರಿ, ಕಾರ್ಯಪಾಲಕ ಅಭಿಯಂತರರು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿದರು.