
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.೧೧:ವಿದ್ಯೆ ಸಾಧಕನ ಸ್ವತ್ತು ಸೋಮಾರಿದಲ್ಲ, ವಿದ್ಯಾರ್ಥಿಗಳು ಜೀವನದಲ್ಲಿ ಒಳ್ಳೆಯ ಸಾಧಕರಾಗಬೇಕಾದರೆ ಸತತ ಅಧ್ಯಯನ ಮುಖ್ಯ, ವಿದ್ಯಾರ್ಥಿ ಜೀವನದಲ್ಲಿ ೨೫ ವರ್ಷಗಳ ಕಾಲ ತಪಸ್ವಿಯಾಗಿ ಅಧ್ಯಯನ ಮಾಡಿದ್ದೆ ಆದರೆ ಮುಂದೆ ೭೫ ವರ್ಷಗಳ ಕಾಲ ಯಾರ ಹಂಗಿಲ್ಲದೆ ರಾಜನಾಗಿ ಬದುಕಬಹುದು ನಿಮ್ಮ ಓದು ನಿಮ್ಮ ಬದುಕಿಗೆ ಅಷ್ಟೆ ಅಲ್ಲ ಇತರರಿಗೆ ಮಾದರಿಯಾಗಬೇಕು ಎಂದು ಶಿಕ್ಷಣ ತಜ್ಞ, ಸಾಹಿತಿ ಪ್ರೊ, ಎ. ಎಚ್. ಕೊಳಮಲಿ ಹೇಳಿದರು.
ಮಂಗಳವಾರ ನಗರದ ಟಕ್ಕೆ ರಸ್ತೆಯ ಟ್ರಜರಿ ಕಾಲೋನಿಯಲ್ಲಿರುವ ಕನಕ ಪಬ್ಲಿಕ್ ಶಾಲೆ ಹಾಗೂ ಕನಕ ನವೋದಯ ಕೋಚಿಂಗ್ ಕ್ಲಾಸಿನ ೨೦೨೫- ೨೬ನೇ ಶೈಕ್ಷಣಿಕ ವರ್ಷದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆಯ ಕನಕ ಪಬ್ಲಿಕ್ ಶಾಲೆ ಹಾಗೂ ಕನಕ ನವೋದಯ ಕೋಚಿಂಗ್ ಸೆಂಟರ್ ನಿರಂತರ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳಲ್ಲಿ ಸಂಸ್ಕಾರಯುತ ಮೌಲ್ಯವನ್ನು ತುಂಬುವ ಕೆಲಸವನ್ನು ನಿರಂತರವಾಗಿ ಮಾಡುತ್ತದೆ ಅದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು. ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಮಕ್ಕಳನ್ನ ಸಿದ್ಧಗೊಳಿಸುವಲ್ಲಿ ಕನಕ ನವೋದಯ ಕೋಚಿಂಗ್ ಕ್ಲಾಸ್ ಹೆಸರುವಾಸಿಯಾಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಜಯಪ್ರಭು ಕೊಳಮಲಿ ಮಾತನಾಡಿ, ಮಕ್ಕಳನ್ನು ಒಬ್ಬ ಉನ್ನತ ವ್ಯಕ್ತಿಯನ್ನು ಮಾಡುವಲ್ಲಿ ನಮ್ಮ ಕರ್ನಾಟಕ ಕನಕದಾಸ ಶಿಕ್ಷಣ ಸಂಸ್ಥೆ ಸದಾ ಶ್ರಮಿಸುತ್ತದೆ, ಪ್ರಥಮ ವರ್ಷದಲ್ಲಿ ವಿವಿಧ ವಸತಿ ಶಾಲೆಗೆ ಮಕ್ಕಳನ್ನು ಆಯ್ಕೆ ಮಾಡುವುದರ ಮೂಲಕ ಯಶಸ್ವಿಯ ಪಥದಲ್ಲಿ ನಮ್ಮ ಸಂಸ್ಥೆ ಸಾಗಿದೆ ಎಂದರು.
ಸAಸ್ಥೆಯ ನಿರ್ದೇಶಕ ರಾಮಸ್ವಾಮಿ ಕೊಳಮಲಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಅಲಿಯಾಬಾದ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ವಿಠ್ಠಲ ಮಾನೆ, ಬೀರಪ್ಪ ಪೂಜಾರಿ, ಜಟ್ಟೆಪ್ಪ ಪೂಜಾರಿ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.