Home ಜಿಲ್ಲೆ ಬೆಂಗಳೂರು ನೀರನ್ನು ಮಿತವಾಗಿ ಬಳಸಲು ಯೋಜನಾ ನಿರ್ದೇಶಕರ ಕರೆ

ನೀರನ್ನು ಮಿತವಾಗಿ ಬಳಸಲು ಯೋಜನಾ ನಿರ್ದೇಶಕರ ಕರೆ

ಕೆಜಿಎಫ್. ಮೇ೪:ನೀರನ್ನು ಅನಾವಶ್ಯಕವಾಗಿ ವ್ಯರ್ಥ ಮಾಡದೆ ಮುಂದಿನ ಪೀಳಿಗೆಗೂ ಸದ್ಬಳಕಿಯಾಗುವ ನಿಟ್ಟಿನಲ್ಲಿ ಮಿತವಾಗಿ ಬಳಸುವ ಮೂಲಕ ಜೀವನದ ಸಾರ್ಥಕತೆಯನ್ನು ಮೆರೆಯಬೇಕು ಎಂದು ಕೋಲಾರ ಯೋಜನಾ ನಿರ್ದೇಶಕಿ ಅಂಬಿಕಾ ಹೇಳಿದರು. ನಗರಸಭೆ ವ್ಯಾಪ್ತಿಯ ವಾರ್ಡ್ ೧೧,೧೨,೧೩,೧೪ ರಲ್ಲಿ ನೀರಿನ ಬಗ್ಗೆ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಯೋಜನಾ ನಿರ್ದೇಶಕರಾದ ಅಂಬಿಕಾ ಕುಡಿಯುವ ನೀರಿನ ಮಹತ್ವವನ್ನು ಎಲ್ಲರೂ ಅರಿಯಬೇಕು ನೀರಿಗಾಗಿ ೧೨೦೦ ದಿಂದ ೨೦೦೦ ಆಡಿಗಳಷ್ಟು ಕೊಳವೆಬಾವಿ ಕೊರಿಯ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಆದ್ದರಿಂದ ಜೀವ ಜಲವನ್ನು ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಮುಂದಾಗಬೇಕಿದೆ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ಶ್ರೀಧರ್ ಮಾತನಾಡಿ ನೀರು ಎಂಬುದು ಮನುಷ್ಯನಿಗೆ ಅತ್ಯವಶ್ಯಕತವಾದ ವಸ್ತು ಆದ್ದರಿಂದ ನೀರನ್ನು ಮಿತವಾಗಿ ಬಳಸಬೇಕು ಎಂದು ಹೇಳಿದರು ನಗರಸಭೆ ವ್ಯಾಪ್ತಿಯ ೩೫ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆ ಕಂಡು ಬಂದಿಲ್ಲ ನೀರಿನ ಸಮಸ್ಯೆ ಕಂಡು ಬಂದಲ್ಲಿ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದರು. ಈ ವೇಳೆ ಎಇಇ ಕಿರಣ್, ಹಿರಿಯ ಆರೋಗ್ಯ ನಿರೀಕ್ಷೆಗೆ ಮಂಗಳ ಗೌರಿ ಹಾಗೂ ವಾರ್ಡ್ ಮುಖಂಡ ಮಣಿಕಂಠನ್ ಇತರರು ಹಾಜರಿದ್ದರು