
ಬೀದರ್: ಎಐಸಿಸಿ ಅಧ್ಯಕ್ಷರು ಹಾಗೂ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕರಾದ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗಾದ ಅವಮಾನ ಖಂಡಿಸಿ ಈ ತಿಂಗಳ 25ರಂದು ಬೀದರ್ ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಗತಿಪರ ನಾಗರಿಕರ ವೇದಿಕೆ ಆಧ್ಯಕ್ಷ ಶಂಕರ ದೊಡ್ಡಿ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಆಗಸ್ಟ್ 08 2026 ರಂದು ಡಾ.ಮಲ್ಲಿಕಾರ್ಜುನ ಖರ್ಗೆಯವರು ಉತ್ತರಾಖಂಡ್ ರಾಜ್ಯದ ಹಲ್ದ್ವಾನಿ ನಗರದ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ವಿಜಯ ಶಂಖನಾದ ( ರ್ಯಲಿ ) ಸಭೆ ಉದ್ದೇಶಿಸಿ ಮಾತನಾಡಿದರು. ಈ ಸಾರ್ವಜನಿಕ ಸಭೆಯೂ 2027 ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸನ ಚಟುವಟಿಕೆಯ ಭಾಗವಾಗಿತ್ತು. ಎರಡು ದಿನಗಳ ನಂತರ 10/08/2026 ರಂದು ಶ್ರೀರಾಮಸೇನಾ ಧರ್ಮಾರ್ಥ ಸೇವಾ ನ್ಯಾಸ ಎಂಬ ಸಂಘಟನೆಯವರು ಆ ಮೃದಾನದಲ್ಲಿ “ಶುದ್ದೀಕರಣ ಹವನ/ ಯಜ್ಞ ನಡೆಸಿದರು. ಹವನದ ಸಂದರ್ಭದಲ್ಲಿ ಮಂತ್ರೋಚ್ಛಾರ ಶಂಖನಾದ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿದರು ಗಂಗಾಜಲ ಸಿಂಪಡಿಸುವ ಮೂಲಕ ಜಾತಿಯ ವಿಷ ಬೀಜ ಬಿತ್ತುವ ಕಾರ್ಯ ನಡೆದಿದೆ ಎಂದು ಹರಿಹೈದರು.
ಮಲ್ಲಿಕಾರ್ಜುನ ಖರ್ಗೆಯವರು ತನ್ನ ಶಿಕ್ಷಣದ ನಂತರ ರಾಜಕೀಯ ಜೀವನಕ್ಕೆ ಸಮರ್ಪಿಸಿಕೊಂಡು ಐದು ದಶಕಗಳೆ ಕಳೆದಿವೆ. ಅವರು ರಾಷ್ಟ್ರೀಯ ರಾಜಕಾರಣದಲ್ಲಿ ಅಗ್ರಗಣ್ಯ ನಾಯಕರಲ್ಲಿ ಒಬ್ಬರು. ದೇಶದ ದೊಡ್ಡ ರಾಜಕೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು, ರಾಜ್ಯಸಭಾದ ವಿರೋಧ ಪಕ್ಷದ ನಾಯಕರು. ಒಂದು ಸಂವೈಧಾನಿಕ ಮಹತ್ವದ ಸ್ಥಾನದಲ್ಲಿ ಇರುವ ಧಿಮಂತ ವ್ಯಕ್ತಿತ್ವ ಖರ್ಗೆಯವರದ್ದು. ಅವರು ಭಾಷಣ ಮಾಡಿದ ವೇದಿಕೆ ಶುದ್ದೀಕರಣ ಘಟನೆಯು ಬರಿ ಜಾತಿ ತಾರತಮ್ಯ ಸೂಚಕ ಮಾತ್ರ ಅಲ್ಲ, ಅದು ಸಂವೈಧಾನಿಕ ಮಹತ್ವದ ಸ್ಥಾನದಲ್ಲಿ ಇರುವ ಧಿಮಂತ ನಾಯಕರ ಅವಮಾನ, ಒಂದು ರಾಷ್ಟ್ರೀಯ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅವಮಾನ, ಮಾನವೀಯ ಘನತೆಯ ಅವಮಾನ, ಸಂವಿಧಾನದ ಸಾಮಾಜಿಕ ಸಮತೆಯ ಆಶಯದ ಅವಮಾನವಾಗಿದ್ದು, ಇದೊಂದು ಅಕ್ಷಮ್ಯ ಅಪರಾಧ ಕೃತ್ಯವಾಗಿದೆ. ಇದು ಸಾರ್ವಜನಿಕವಾಗಿ ನಡೆದ ಘೋರ ಅಪರಾಧ ಆಗಿದ್ದರೂ ಉತ್ತರಾಖಂಡ ಸರ್ಕಾರ ಸೂಮೊ ಮೊಟೊ ( ಸ್ವಯಂಪ್ರೇರಿತ ಕೇಸ್ ) ಕೇಸ್ ದಾಖಲಿಸದೆ ಇರುವುದು ಘೋರ ದುರಂತವೇ ಸರಿ. ಖರ್ಗೆಯವರು ರಾಜ್ಯ ಸಭೆಯಲ್ಲಿ ಪ್ರಸ್ತಾಪಿಸಿದಾಗಿಯೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಶೋಚನೀಯ ಸಂಗತಿಯಾಗಿದೆ. ವಿಶ್ವದಲ್ಲಿ ಸಣ್ಣ ಪುಟ್ಟ ಘಟನೆಗಳು ಸಂಭವಿಸಿದಾಗ ಕೂಡಲೇ ಟ್ವೀಟ್ ಮಾಡುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಈ ವಿಚಾರವಾಗಿ ಮೌನವಹಿಸಿರುವುದು ಏಕೆ? ಎಂದು ಪ್ರಶ್ನೆ ಮಾಡಿರುವ ಅವರು, ದೇಶದ ರಾಷ್ಟ್ರಪತಿಗಳ ಗಮನಕ್ಕೆ ತರುವ ನಿಮಿತ್ಯ ಈ ತಿಂಗಳ 25 ರಂದು ಬೆಳಿಗ್ಗೆ 11 ಗಂಟೆಗೆ ಬೀದರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿದೆ ಎಂದು ದೊಡ್ಡಿ ತಿಳಿಸಿದರು.
ವೇದಿಕೆ ಗೌರವಾಧ್ಯಕ್ಷರು ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ 2014ರಿಂದ ಇಲ್ಲಿಯ ವರೆಗೆ ಇಂಥ ಅಮಾನವಿಯ ಘಟನೆಗಳು ನಿರಂತರವಾಗಿ ನಡೆಯುತ್ತಲ್ಲೆ ಇವೆ. ಇದು ಖರ್ಗೆಯವರಿಗಾದ ಅವಮಾನ ಅಲ್ಲ, ಇಡಿ ಸಂವಿದಸಾನಕ್ಕೆ ಮಾಡಿದ ಅಪಚಾರ. ಮೊದಲು ಬಿಜೆಪಿ ಆರ್.ಎಸ್.ಎಸ್ ಈ ದೇಶದಲ್ಲಿ ಶುದ್ದಿಯಾಗಲಿ. ಆಗ ದೇಶ ಪರಿಶುದ್ಧಗೊಳ್ಳುತ್ತದೆ. ಆಪರೆಷನ್ ಸಿಂಧೂರ್ ವಿಚಾರ ಪ್ರಸ್ತಾಪಿಸಿ ಸಿಂಧೂರ್ ಆಪರೇಷನ್ ನಲ್ಲಿ ನಮ್ಮ ಸೈನಿಕರ ಹುತಾತ್ಮವಾದುದನ್ನೆ ಮುಚ್ಚಿ ದೇಶಕ್ಕೆ ಸುಳ್ಳು ಹೇಳಿದ ಮೋದಿಯವರಿಂದ ಖರ್ಗೆಯವರಿಗಾದ ಅವಮಾನ ಸರಿಪಡಿಸಲು ಮುಂದಾಗುತ್ತಾರೆಯೆ? ಎಂದು ಪ್ರಶ್ನಿಸಿದರು.
ವೇದಿಕೆಯ ಹಿರಿಯ ಉಪಾಧ್ಯಕ್ಷ ಶ್ರೀಕಾಂತ ಸ್ವಾಮಿ ಹೆಡಗಾಪುರ ಮಾತನಾಡಿ, ರಾಮ ಮಂದಿರ ಉದ್ಘಾಟನೆ ಹಾಗೂ ನೂತನ ಸಂಸತ್ ಭವನ ಉದ್ಘಾಟನೆ ಸಮಯದಲ್ಲಿ ಸ್ವತಃ ರಾಷ್ಟ್ರಪತಿಗಳಾದ ದ್ರೌಪದಿ ಮುರ್ಮು ಅವರನ್ನೆ ಅವ್ಹಾನಿಸದ ಮೋದಿ ಸರ್ಕಾರ ಖರ್ಗೆಯವರ ವಿಚಾರದಲ್ಲಿ ನ್ಯಾಯ ಒದಗಿಸಲು ಸಾಧ್ಯವೇ ಇಲ್ಲ. ಹಿಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ತಮಿಳುನಾಡಿನ ಮಂದಿರವೊಂದರಲ್ಲಿ ಪ್ರವೇಶ ನೀಡಲು ನಿರಾಕರಿಸಲಾಯಿತು. ಇಂತಹ ಜಾತಿವಾದಿ ಕೇಂದ್ರ ಸರ್ಕಾರ ಕಲ್ಯಾಣ ನಾಡಿನ ಕುವರ ಖರ್ಗೆಯವರಿಗೆ ಆದ ಅವಮಾನ ಖಂಡಿಸದೆ ಇರುವ ಮೂಲಕ ತನ್ನ ಜಾತಿವಾದಿಯ ಮುಖವಾಡ ತೆರೆದಿಟ್ಡಿದೆ ಎಂದು ಗಂಭೀರ ಆರೋಪ ಮಾಡಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಧಾಮಿ ಹಾಗೂ ಅವರ ಸರ್ಕಾರವನ್ನು ರಾಷ್ಟ್ರಪತಿಗಳು ವಜಾಗೊಳಿಸಬೇಕು ಎಂದರು. ಕಾರ್ಯಾಧ್ಯಕ್ಷ ಡಾ.ಮಕ್ಸುದ್ ಚಂದಾ ಮಾತನಾಡಿದರು.
ವೇದಿಕೆಯ ಕಾರ್ಯದರ್ಶಿ ಪಂಡಿತ ಚಿದ್ರಿ, ಉಪಾಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ, ಮಾರೂತಿ ಶಾಖಾ, ಮಾಧ್ಯಮ ಪ್ರತಿನಿಧಿ ಜಗದೀಶ್ವರ ಬಿರಾದಾರ, ಸದಸ್ಯರಾದ ಶಿವಮೂರ್ತಿ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.






























