ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ ಸಭೆ

ಕಾಳಗಿ:ಡಿ.೬:ತಾಲೂಕಿನ ಸಮಗ್ರ ಅಭಿವೃದ್ಧಿಯ ವಿಚಾರದಿಂದ ಪಟ್ಟಣದ ಶ್ರೀಜಗದ್ಗುರು ರೇವಣಸಿದ್ದೇಶ್ವರ ಶ್ರೀಮತಿ ನಾಗರತ್ನಮ್ಮ ಶಿವಶರಣಪ್ಪ ಕಮಲಾಪೂರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಶಾಸಕ ಡಾ.ಅವಿನಾಶ ಜಾಧವ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನೆ(ಕೆಡಿಪಿ) ಸಭೆ ಜರುಗಿತು.
ವಿವಿಧ ಇಲಾಖೆಗಳ ಪ್ರಗತಿ-ಪರಿಶೀಲನಾ ಸಭೆಯಲ್ಲಿ ಶಾಸಕ ಡಾ. ಅವಿನಾಶ್ ಜಾಧವ್ ಅಧಿಕಾರಿಗಳ ಕಾರ್ಯವೈಖರಿಯನ್ನು ತೀವ್ರವಾಗಿ ಪ್ರಶ್ನಿಸಿ, ಸಾರ್ವಜನಿಕ ಸೇವೆಯಲ್ಲಿ ನಿರ್ಲಕ್ಷ್ಯ ಕಂಡುಬAದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಪಂ. ವಸತಿ ಯೋಜನೆಗಳ ಪರಿಶೀಲನೆ ನಡೆಸಿಕಾಲ ಹರಣ ಬೇಡ. ಕಾರ್ಯ ವೈಖರಿ ಸುಧಾರಿಸಿಕೊಳ್ಳಿ. ನನ್ನ ಮತಕ್ಷೇತ್ರದಲ್ಲಿ ಜನತೆಗೆ ತೊಂದರೆ ಆಗಲು ಬಿಡೋದಿಲ್ಲ ಎಂದು ಎಚ್ಚರಿಸಿದರು.
ಆರೋಗ್ಯ ಇಲಾಖೆಯ ಅಧಿಕಾರಿಗಳನ್ನುದ್ದೇಶಿಸಿ ಆಸ್ಪತ್ರೆಯಲ್ಲಿ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳಿ, ಕೊಡ್ಲಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಅನಧಿಕೃತವಾಗಿ ಮನೆ ಕಟ್ಟಲಾಗುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ ಬೆಳೆ ಹಾನಿ ವಿವರ ಕೇಳಿದ ಶಾಸಕ:
ಕೃಷಿ ಇಲಾಖೆಯ ಸಹಾಯಕ ಅಧಿಕಾರಿ ಸಂಜೀವ್ ಕುಮಾರ್ ಸಲ್ಲಿಸಿದ ವರದಿ ಪ್ರಕಾರ ೨೪,೩೬೦ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ.ಬೆಳೆ ನಷ್ಟವಾಗಿರುವಇನ್ನೂ ಹಲವಾರು ರೈತರ ಖಾತೆಗಳಿಗೆ ಪರಿಹಾರ ಧನ ಜಮಾವಣೆ ಆಗಿಲ್ಲ ಕಾರಣ ತಿಳಿಸಿ ವರದಿ ಸಲ್ಲಿಸಲು ತಿಳಿಸಿದರು.ಜಿಲ್ಲಾ ಪಂಚಾಯಿತಿಯಿAದ ಕಾಳಗಿಗೆ ಅನುದಾನ ನೀಡದ ಬಗ್ಗೆ ಆಕ್ರೋಶ:
ಜಿಪಂ.ನಿAದ ಕಾಳಗಿಗೆ ನೀಡಿರುವ ಎರಡು ಕೋಟಿ ಮೂವತೈದು ಲಕ್ಷ ಸಂಪೂರ್ಣ ಅನುದಾನವನ್ನು ಚಿತ್ತಾಪೂರ ಮತ್ತು ಸೇಡಂಗೆ ಬಳಸಿಕೊಂಡು ಕಾಳಗಿ ಪ್ರದೇಶಕ್ಕೆ ಸೂನ್ಯ ಅನುದಾನವಿಟ್ಟು ತಾರತಮ್ಯ ವಹಿಸಿರುವ ಬಗ್ಗೆ ಶಾಸಕ ಜಾಧವ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.ಈ ಅನ್ಯಾಯ ಸಹಿಸಲ್ಲ. ಅನುದಾನ ತಕ್ಷಣ ಬಿಡುಗಡೆ ಮಾಡಬೇಕು ಎಂದು ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.
ಕಾಳಗಿ ತಹಶೀಲ್ದಾರರಿಂದ ಮಳೆಗೆ ಹಾನಿಯಾದ ವಿವರದ ಪ್ರಕಾರ ೭೯ ಮನೆಗಳಲ್ಲಿ ೬೦ ಮನೆಗಳಿಗೆ ಪರಿಹಾರ ವಿತರಿಸಲಾಗಿದೆ ಇನ್ನೂ ೧೯ಕಡತಗಳು ಬಾಕಿ ಇವೆ ಎಂದು ತಿಳಿಸಿದರು.
ವಿಧವಾ ವೇತನ, ಅಂಗವಿಕಲರ ವೇತನ, ವೃದ್ಧಾಪ್ಯ ವೇತನ, ಸಮರ್ಪಕವಾಗಿ ನಿಜ ಫಲಾನುಭವಿಗಳ ಕೈಗೆಟಕುವಂತೆ ನೋಡಿಕೊಳ್ಳಿ ಎಂದು ಸೂಚಿಸಿದರು.ಜೆಸ್ಕಂ-ವಿದ್ಯುತ್ ಸಮಸ್ಯೆಗಳ ಪರಿಹಾರಕ್ಕೆ ನಿರ್ದೇಶನ:
ಜೆಸ್ಕಂ ಅಧಿಕಾರಿಗಳಿಗೆ ಮಾತನಾಡಿದ ಶಾಸಕರು, ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ರಾತ್ರಿ ವೇಳೆ ಸಿಂಗಲ್ ಫೇಸ್ ಸರಿಯಾಗಿ ನೀಡಬೇಕುಎಂದು ಸ್ಪಷ್ಟ ಸೂಚನೆ ನೀಡಿದರು.
ಸಭೆಯ ಕೊನೆಯಲ್ಲಿ ಶಾಸಕ ಜಾಧವ್,ಜನಸೇವೆಗೆ ಬದ್ಧರಾಗಬೇಕಾದ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ಮಾಡಬೇಕು.
ಬಾಬಾಸಾಹೇಬರ ಸಂವಿಧಾನ ಬರಿ ಮಾತಿನಲ್ಲಿ ಹೆಳಿದರೆ ಸಾಲದು. ಪಕ್ಷ -ಭೆದ ಮರೆತು ಅಭಿವೃದ್ಧಿಯ ಹಿತದೃಷ್ಟಿಯಿಂದ ಕೆಲಸ ಮಾಡಬೇಕು.ಬಂದಿರುವ ಅನುದಾನವನ್ನು ಸಮಾನತೆಯಿಂದ ಹಂಚಿ ಸರ್ವರ ಅಭಿವೃದ್ಧಿ ಕಾಣುವಂತಾಗಬೇಕು ಅಂದಾಗ ಸಂವಿಧಾನ ರಕ್ಷಣೆ ಆಗುತ್ತದೆ ಎಂದರು.ನನ್ನ ಕ್ಷೇತ್ರದಲ್ಲಿ ಜನರಿಗೆ ಕಿರಿಕಿರಿ ಆಗುವುದನ್ನು ಸಹಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು.ಅಸಮರ್ಪಕವಾದ ವರದಿಗಳೊಂದಿಗೆ ಸಭೆಗೆ ಆಗಮಿಸಿರುವ ಅಧಿಕಾರಿಗಳ ಚಳಿ ಬಿಡಿಸಿದರು.ಎಲ್ಲಾ ಓಕೆ ಪ್ರಜಾಸೌದಕ್ಕೆ ಅಡ್ಡಿ ಯಾಕೆ?
ಸಿಎಂ, ಡಿಸಿಎಂ, ಉಸ್ತುವಾರಿ ಸಚಿವರೂ ಸೇರಿ ಒಂದೇ ಸೂರಿನಡಿ ಎಲ್ಲಾ ಇಲಾಖೆಗಳ ಸೇವೆಗಳನ್ನು ಸಮರ್ಪಕವಾಗಿ ಕಾರ್ಯನಿರ್ವಹಿಸಬೆಕೆಂಬ ಉದ್ದೇಶದಿಂದ ಪ್ರಜಾಸೌಧ ನಿರ್ಮಾಣಕ್ಕೆ ಪಣತೊಟ್ಟಿದ್ದಾರೆ.
ಆದರೆ ಕಾಳಗಿ ತಾಲೂಕಿನಲ್ಲಿ ಮಂಜೂರಾತದ ಪ್ರಜಾಸೌದ ಪ್ರಾರಂಭದಲ್ಲಿ ತೀವ್ರ ಪ್ರಗತಿಕಂಡು, ಏಕಾಏಕಿ ಬ್ರೇಕ್ ಆಗಿದ್ದು ಯಾಕೆ? ಎಂದು ಕೆ.ಎಚ್.ಬಿ ಎಇಇ ಶಶಿಕಾಂತ ಅವರನ್ನು ಪ್ರಶ್ನಿಸಿದಾಗ ಗಪ್-ಚುಪ್ ಆದ ಅಧಿಕಾರಿಯ ವಿರುದ್ಧ, ಹರಿಹಾಯ್ದ ಶಾಸಕ ಜಾಧವ ತರಾಟೆಗೆ ತೆಗೆದುಕೊಂಡರು.
ಕಾಳಗಿ ಗ್ರೇಡ್-೧ತಹಸೀಲ್ದಾರ ಪೃಥ್ವಿರಾಜ ಪಾಟೀಲ, ಜಿಪಂ.ಕಾರ್ಯದರ್ಶಿ ಹಾಗೂ ಕಾಳಗಿ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ಲಕ್ಷ್ಮಣ ಶೃಂಗೇರಿ, ತಾಪಂ.ಇಓ ಬಸಲಿಂಗಪ್ಪ ಡಿಗ್ಗಿ, ಸಿಪಿಐ ಜಗದೇವಪ್ಪ ಪಾಳಾ, ಪಪಂ.ಮುಖ್ಯಾಧಿಕಾರಿ ಪಂಕಜಾ ಎ ಸೇರಿದಂತೆ ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.