ಸಂಜೆವಾಣಿ ವಾರ್ತೆ,
ವಿಜಯಪುರ, ಆ.೪: ನೆನಪುಗಳ ಬುತ್ತಿ ಅಜರಾಮರ. ನನ್ನ ಮೊದಲ ಗುರು ಕಲಿಸಿದ ಅಕ್ಷರ ಇಂದಿಗೂ ನನ್ನಲ್ಲಿ ಅಚ್ಚಾಗಿದೆ. ಅಂತಹ ಗುರುಗಳನ್ನು ಎಂದೆAದಿಗೂ ಮರೆಯಲಾಗದು ಎಂದು ನಿವೃತ್ತ ಪ್ರಾಚಾರ್ಯ ಪ್ರೊ.ವಿ.ಎಂ. ಸುರಪುರ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್. ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ಐಕ್ಯೂಎಸಿ ಮತ್ತು ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಶುಕ್ರವಾರ ಅಯೋಜಿಸಲಾದ ಹಳೆ ವಿದ್ಯಾರ್ಥಿಗಳ ಸಮ್ಮೇಳನ ಕರ‍್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ತಮ್ಮ ಬಾಲ್ಯದ ಸವಿನೆನಪುಗಳು ಮತ್ತು ಬಾಲ್ಯದ ಗುರುಗಳನ್ನು ಸ್ಮರಿಸಿದರು.
ಗುರುಗಳ ಸರಿಯಾದ ಮಾರ್ಗಗಳು ನಮ್ಮನ್ನು ಬಹು ಎತ್ತರ ಮಟ್ಟಕ್ಕೆ ತಲುಪಿಸುತ್ತಿದೆ. ನಾನು ಇದೇ ಮಹಾವಿದ್ಯಾಲಯದಲ್ಲಿ ಅಧ್ಯಯನ ಮಾಡಿ ಪ್ರಾಧ್ಯಾಪಕನಾಗಿ ಪ್ರಾಚಾರ್ಯನಾಗಿ ನಿವೃತ್ತಿ ಹೊಂದಿದ್ದೇನೆ. ಅದಕ್ಕೆ ಕಾರಣ ಈ ಕಾಲೇಜು ಇಲ್ಲಿ ನಮಗೆ ಕಲಿಸಿದ ಗುರುಗಳು ತೋರಿಸಿಕೊಟ್ಟ ಸನ್ಮಾರ್ಗ ಎಂದರು.
ನಮ್ಮ ಜೀವನದಲ್ಲಿ ನಿರ್ದಿಷ್ಟ ಗುರಿಯನ್ನು ಸಾಧಿಸಲು ಗುರುಗಳ ಪಾತ್ರ ಅನನ್ಯ. ಗುರುಗಳ ಮಾರ್ಗದರ್ಶನದಿಂದ ಇಂದು ಅತಿ ದೊಡ್ಡ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಯಿತು ಎಂದು ತಮ್ಮ ಶಾಯರಿಗಳ ಮೂಲಕ ಗುರು ಮತ್ತು ಶಿಷ್ಯರ ಅವಿನಾಭಾವ ಸಂಬAಧ ಸಾರವನ್ನು ಬಿಂಬಿಸಿದರು. ಅದೇ ರೀತಿಯಾಗಿ ಇಂದಿನ ಪ್ರಾಧ್ಯಾಪಕರು ನಿರಂತರವಾಗಿ ಓದುವ ಹವ್ಯಾಸವನ್ನು ತಮ್ಮ ದೈನಂದಿನ ಜೀವನದಲ್ಲಿ ರೂಢಿಸಿಕೊಳ್ಳಬೇಕು ಎಂದರು.
ನಾನು ಎಲ್ಲವನ್ನು ಬಲ್ಲೆ ಎಂಬುವುದು ಸಲ್ಲದು. ಎಲ್ಲವನ್ನು ಮೆಟ್ಟಿ ನಿಂತು ಮತ್ತೆ ಕಲಿಯುವಂತಹ ಹವ್ಯಾಸ ಬೆಳೆಸಿಕೊಳ್ಳಬೇಕು. ಹೊಸ ಹೊಸ ಪುಸ್ತಕದ ಪ್ರೇಮಿಯಾಗಿ ನೂತನ ವಿನೂತನವಾದ ಜ್ಞಾನವನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಹೇಳಿದರು.
ಈ ವೇಳೆಯಲ್ಲಿ ಆಡಳಿತಾಧಿಕಾರಿ ಪ್ರೊ. ವಿ.ಎಸ್. ಬಗಲಿ ಮಾತನಾಡಿ, ಈ ಸಂಸ್ಥೆಯ ಅತ್ಯಂತ ಹಳೆಯ ಮಹಾವಿದ್ಯಾಲಯ ಉತ್ತರ ಕರ್ನಾಟಕದ ಅತ್ಯಂತ ಹಳೆಯ ಜನಪ್ರಿಯ ಕಾಲೇಜು ಕನಾಳ ಚನಗೌಡ ಪಾಟೀಲ ಅವರ ಕೊಡುಗೆ ಅನನ್ಯವಾದದ್ದು ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಪ್ರಾಚರ‍್ಯ ಪ್ರೊ. ಬಿ.ಜಿ. ಮಠ ಮತ್ತು ಮಹಾವಿದ್ಯಾಲಯದ ಪ್ರಾಚಾರ್ಯರು ಇದ್ದರು























