Home ಜಿಲ್ಲೆ ಅಂಬೇಡ್ಕರ್ ವೃತ್ತದಲ್ಲಿ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನೋತ್ಸವ ಆಚರಣೆ

ಅಂಬೇಡ್ಕರ್ ವೃತ್ತದಲ್ಲಿ ಪ್ರೊ. ಬಿ. ಕೃಷ್ಣಪ್ಪ ಜನ್ಮದಿನೋತ್ಸವ ಆಚರಣೆ

ಬೀದರ, ಜೂ 10: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಜಿಲ್ಲಾ ಸಮಿತಿ ವತಿಯಿಂದ ದಸಂಸ ಸಂಸ್ಥಾಪಕರಾದ ಪೆÇ್ರ. ಬಿ. ಕೃಷ್ಣಪ್ಪ ಅವರ 39ನೇ ಜನ್ಮದಿನೋತ್ಸವವನ್ನು ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲಾ ಸಂಚಾಲಕ ಧನರಾಜ್ ಮುಸ್ತಾಪುರ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಸಂಸ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿ ಕೇಕ್ ಕತ್ತರಿಸುವ ಮೂಲಕ ಜನ್ಮದಿನವನ್ನು ಆಚರಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಪೆÇ್ರ. ಬಿ. ಕೃಷ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರ ಸಾಮಾಜಿಕ ಹೋರಾಟ, ದಲಿತ ಸಮುದಾಯದ ಹಕ್ಕುಗಳ ರಕ್ಷಣೆಗಾಗಿ ನಡೆಸಿದ ಸಂಘಟನಾ ಕಾರ್ಯ ಹಾಗೂ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ತತ್ವಗಳನ್ನು ಸ್ಮರಿಸಲಾಯಿತು. ಸಮಾಜದ ಶೋಷಿತ ಮತ್ತು ಹಿಂದುಳಿದ ವರ್ಗಗಳ ಸಬಲೀಕರಣಕ್ಕಾಗಿ ಅವರು ನೀಡಿದ ಕೊಡುಗೆಯನ್ನು ವಕ್ತಾರರು ನೆನಪಿಸಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮುಖಂಡ ಶಂಕರರಾವ ದೊಡ್ಡಿ, ಪೆÇ್ರ. ಬಿ. ಕೃಷ್ಣಪ್ಪ ಅವರು ದಲಿತ ಚಳವಳಿಗೆ ಹೊಸ ದಿಕ್ಕು ನೀಡಿದ ನಾಯಕರು ಎಂದು ಬಣ್ಣಿಸಿದರು. ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಮಾನವ ಹಕ್ಕುಗಳಿಗಾಗಿ ಜೀವನಪಯರ್ಂತ ಹೋರಾಡಿದ ಅವರ ಆದರ್ಶಗಳು ಇಂದಿನ ಯುವಜನತೆಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು. ಸಮಾಜದಲ್ಲಿ ಜಾಗೃತಿ ಮೂಡಿಸಲು ಶಿಕ್ಷಣ ಮತ್ತು ಸಂಘಟನೆಯ ಮಹತ್ವವನ್ನು ಅವರು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.

ಮಾದರ ಚೆನ್ನಯ್ಯ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರಮೇಶ್ ಕಟ್ಟಿತುಗಾಂವ ಮಾತನಾಡಿ, ಪೆÇ್ರ. ಬಿ. ಕೃಷ್ಣಪ್ಪ ಅವರ ಹೋರಾಟದ ಪರಂಪರೆಯನ್ನು ಮುಂದುವರಿಸುವ ಜವಾಬ್ದಾರಿ ಯುವಕರ ಮೇಲಿದೆ ಎಂದು ಹೇಳಿದರು. ಸಾಮಾಜಿಕ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಸಂಘಟಿತ ಹೋರಾಟ ನಡೆಸುವ ಮೂಲಕ ಅವರ ಕನಸಿನ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.

ರಾಜಕುಮಾರ ಮೂಲಭಾರತಿ ಅವರು ಮಾತನಾಡಿ, ಪೆÇ್ರ. ಬಿ. ಕೃಷ್ಣಪ್ಪ ಅವರು ಕೇವಲ ದಲಿತ ಸಮುದಾಯದ ನಾಯಕನಲ್ಲ, ಸಮಾನತೆ ಮತ್ತು ಸಾಮಾಜಿಕ ಬದಲಾವಣೆಯ ಸಂಕೇತವಾಗಿದ್ದರು ಎಂದು ಅಭಿಪ್ರಾಯಪಟ್ಟರು. ಅವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿದ್ದು, ಸಮಾಜದ ಎಲ್ಲ ವರ್ಗಗಳ ಜನರಿಗೆ ಪ್ರೇರಣೆಯಾಗಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ. ಸದಸ್ಯ ಮಾರುತಿರಾವ ಶಾಖಾ, ಶಿವಮೂರ್ತಿ ಸುಬಾನೆ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದು, ಪೆÇ್ರ. ಬಿ. ಕೃಷ್ಣಪ್ಪ ಅವರ ಜೀವನ ಮತ್ತು ಹೋರಾಟದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ವಿಜಯಕುಮಾರ ಐಹೊಳೆ, ವಿಶಾಲ ದೊಡ್ಡಿ, ಪ್ರಶಾಂತ ಭಾವಿಕಟ್ಟಿ, ಬಸವರಾಜ ಭಾವಿದೊಡ್ಡಿ, ಗೌತಮ ಮೇತ್ರೆ, ಗೌತಮ ಬಗದಲ್, ಅನೀಲ ಕಾಂಬಳೆ, ಜೈಪ್ರಕಾಶ ಕೇರೂರಕರ್, ಶಿವು ಗುನ್ನಳ್ಳಿ, ಉಮೇಶ ಮೂಗನೂರೆ, ಎವನ್‍ಕುಮಾರ ಲಾಧೇಕರ್, ಪಪ್ಪು ಯೆರನಳ್ಳಿ, ರಾಮಣ್ಣ ಗಡಿಕೂಸನೂರ, ಗುಂಡಪ್ಪ ದಂಡೆ, ದೇವೇಂದ್ರ ವರ್ಮಾ ಸೇರಿದಂತೆ ದಸಂಸ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.