ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮ

ಬೀದರ್: ಜೂ. 21:ಗುರು ನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯದ ರಜತ (ಬೆಳ್ಳಿ) ಮಹೋತ್ಸವದ ಅಂಗವಾಗಿ ಆಯೋಜಿಸಿದ ಅಂತರ ಮಹಾವಿದ್ಯಾಲಯದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮವು ಶುಕ್ರವಾರ ನಗರದ ಗುರು ನಾನಕ್ ಭವನದಲ್ಲಿ ಜರುಗಿತು. ಬೆಳ್ಳಿ ಮಹೋತ್ಸವದ ಅಂಗವಾಗಿ ಗುರು ನಾನಕ್ ಪ್ರಥಮ ದರ್ಜೆ ಮಹಾವಿದ್ಯಾಲಯವು ಒಂದು ವಾರಗಳಕಾಲ ಕ್ರಿಕೆಟ್, ಥ್ರೂಬಾಲ್, ಖೋ ಖೋ, ಛಾಯಾ ಚಿತ್ರ, ರಂಗೋಲಿ, ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಿತು. ಸ್ಪರ್ಧೆಗಳಲ್ಲಿ ಸುಮಾರು 12 ಮಹಾವಿದ್ಯಾಲಯದ 450ಕ್ಕು ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪ್ರೂ. ಪರಮೇಶ್ವರ್ ನಾಯಕ್ ಟಿ. ಕುಲ ಸಚಿವರು (ಮೌಲ್ಯಮಾಪನ) ಹಾಗೂ ಸುರೇಖಾ ಎಸ್. ಕುಲ ಸಚಿವರು (ಆಡಳಿತ) ಕಾರ್ಯಕ್ರಮವನ್ನು ಉದ್ಘಾಟಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಗುರು ನಾನಕ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು ಡಾ. ರೇಷ್ಮಾ ಕೌರ ರವರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಶುಭಾಶಯ ಕೋರುವ ಮೂಲಕ ಪ್ರಮಾಣ ಪತ್ರಗಳು ಹಾಗೂ ಸ್ಮರಣಿಕೆಗಳನ್ನು ವಿತರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶ್ಯಾಮಲಾ ವಿ ದತ್ತ, ಗುರು ನಾನಕ್ ಪಿ. ಯು. ಕಾಲೇಜಿನ ಮುಖ್ಯಸ್ಥರಾದ ಡಾ. ಜಸ್ಮಿತ್ ಕೌರ್, Iಕಿಂಅ ಸಂಯೋಜಕರಾದ ಡಾ. ಸಂಜಯ ಮೈನಳ್ಳಿ ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.