
ಕಲಬುರಗಿ:ಡಿ.13: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಇತ್ತೀಚೆಗೆ ನಗರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವ ಬಾಲ ಪ್ರತಿಭೆ ವಿಭಾಗದ ಸುಗಮ ಸಂಗೀತ ಸ್ಪರ್ಧೆಯಲ್ಲಿ ಕು. ಪ್ರಿಯಂಕಾ ಷಣ್ಮುಖ ಪಾಟೀಲ ಪ್ರಥಮ ಸ್ಥಾನ ಪಡೆದು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇದೇ ತಿಂಗಳ 18 ಹಾಗೂ 19ರಂದು ಕಲಬುರಗಿಯಲ್ಲಿ ನಡೆಯಲಿರುವ ವಲಯ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿ ಕು. ಪ್ರಿಯಂಕಾ ಭಾಗವಹಿಸಲಿದ್ದಾರೆ. ಪ್ರಥಮ ಸ್ಥಾನ ಪಡೆದು ವಲಯ ಮಟ್ಟಕ್ಕೆ ಆಯ್ಕೆಯಾಗಿದ್ದರಿಂದ ತಂದೆ ತಾಯಿಯರಾದ, ಪ್ರೊ. ಷಣ್ಮುಖ ಪಾಟೀಲ ಹಾಗೂ ಪ್ರೊ. ಕವಿತಾ ಪಾಟೀಲ ಹರ್ಷವ್ಯಕ್ತಪಡಿಸಿದ್ದಾರೆ.

























