Home ಜಿಲ್ಲೆ “ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ” : ದತ್ತಾ ವಾಸ್ಟರ್

“ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ” : ದತ್ತಾ ವಾಸ್ಟರ್

ಅಥಣಿ : ಪಟ್ಟಣದ ಸಮಗ್ರ ಅಭಿವೃದ್ಧಿಯೇ ನಮ್ಮ ಪ್ರಮುಖ ಗುರಿಯಾಗಿದ್ದು, ಸಹಕಾರ ಸಚಿವ ಲಕ್ಷ್ಮಣ ಸವದಿ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿಯವರ ಸಹಕಾರದಿಂದ ಅಥಣಿಯಲ್ಲಿ ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಪಟ್ಟಣವನ್ನು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಸಲು ಬದ್ಧರಾಗಿದ್ದೇವೆ ಎಂದು ಪುರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ತಿಳಿಸಿದರು.
ಅವರು ಪುರಸಭೆ ವ್ಯಾಪ್ತಿಯ ವಾರ್ಡ ೯ ರಲ್ಲಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

ಅಥಣಿ ಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ಮಂಜೂರು ಮಾಡಿಸುವ ಪ್ರಕ್ರಿಯೆಯನ್ನು ಈಗಾಗಲೇ ಸಹಕಾರ ಸಚಿವ ಲಕ್ಷ್ಮಣ ಸವದಿ ಸರಕಾರದ ಮಟ್ಟದಲ್ಲಿ ಮಾಡುತ್ತಿದ್ದು, ಕೆಲವೇ ತಿಂಗಳುಗಳಲ್ಲಿ ವಿಶೇಷ ಅನುದಾನ ಮಂಜೂರಾಗಲಿದೆ ಎಂದ ಅವರು ವಿಶೇಷ ಅನುದಾನದಲ್ಲಿ ರಸ್ತೆ. ರಸ್ತೆ, ಚರಂಡಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಆದ್ಯತೆ | ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ಮುಖ್ಯ ಗುರಿ ಕುಡಿಯುವ ನೀರು ಸೇರಿದಂತೆ ಮೂಲ ಭೂತ ಸೌಲಭ್ಯಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಸಚಿವ ಲಕ್ಷ್ಮಣ ಸವದಿ ಅವರ ಮಾರ್ಗದರ್ಶನದಲ್ಲಿ ಅಥಣಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಪ್ರಯತ್ನಗಳು ಮುಂದುವರಿದಿವೆ. ಇದೇ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು, ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವುದು.
ಅಥಣಿಯನ್ನು ಅಭಿವೃದ್ಧಿ ಹೊಂದಿದ ಮಾದರಿ ಪಟ್ಟಣವನ್ನಾಗಿ ರೂಪಿಸುವುದು ನಮ್ಮ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಲಾಗುವುದು ಎಂದು ದತ್ತಾ ವಾಸ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ದತ್ತಾ ವಾಸ್ಟರ್ ಇವರ ಜನ್ಮದಿನದ ಅಂಗವಾಗಿ ಅಧ್ಯಕ್ಷರು, ಸರ್ವಸದಸ್ಯರು ಮತ್ತು ಮದ್ದಿನ ಮಡ್ಡಿ ಪ್ರಮುಖರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳಿ, ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಮಾಜಿ ಪುರಸಭೆ ಅಧ್ಯಕ್ಷ ದಿಲೀಪ ಲೋಣಾರೆ. ಪುರಸಭೆ ಸದಸ್ಯರಾದ ಲತಾ ತಿಪ್ಪಣ್ಣ ಭಜಂತ್ರಿ, ಮಲ್ಲೇಶ ಹುದ್ದಾರ. ರಾಜು ಗುಡೊಡಗಿ, ವಿಲೀನರಾಜ ಯಳಮಲ್ಲೆ,
ಸಯ್ಯದಅಮೀನ್ ಗದ್ಯಾಳ, ರಿಯಾಜ್ ಸನದಿ, ಕಲ್ಲೇಶ ಮಡ್ಡಿ, ರಮೇಶ ಪವಾರ, ರಾಜು ಬುಲಬಲೆ, ಬಸವರಾಜ ಹಳ್ಳದಮಳ, ರವಿ ಬಡಕಂಬಿ ಧುರೀಣರಾದ ರಂಜೀತ ವಾಘ್ಮೋಡೆ. ಶ್ರವಣ ವಾಸ್ಪರ್, ಲಾಲದಾಸ್ ವಾಘ್ಮೋಡೆ, ಸಿದ್ದು ಬಿಸೆ. ಭೀಮರಾವ್ ನನ್ನವರೆ, ಕಳ್ಳಪ್ಪ ನನ್ನವರೆ, ಸುನೀಲ ಇಂಗಳೆ, ಬಾಸು ವಾಘ್ಮೋಡೆ, ದೊಂಡಿಬಾ ಮಾನೆ, ಮಯೂರ ಸಿಂಗೆ. ವಿನೋದ ವಾಘ್ಮೋಡೆ, ಅರವಿಂದ ವಾಘ್ಮೋಡೆ, ತೇಜಸ್ ವಾಘ್ಮೋಡೆ, ಪುಂಡಲೀಕ ನನ್ನವರೆ, ಗುತ್ತಿಗೆದಾರ ತಿಪ್ಪಣ್ಣ ಭಜಂತಿ, ಸಂತೋಷ ಅವರಸಂಗ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.