
ತಾಳಿಕೋಟೆ:ಫೆ.೧೭: ಐತಿಹಾಸಿಕ ನಗರವಾಗಿ ಬೆಳೆಯುತ್ತಿರುವ ತಾಳಿಕೋಟೆ ಮಹಾ ನಗರವನ್ನು ಸುಂದರ ತಾಣವನ್ನಾಗಿ ನಿರ್ಮಿಸಲು ಹಾಗೂ ಪರಿಸರ ಪೂರ್ವಕವಾದ ವಾತಾವರಣ ನಿರ್ಮಾಣ ಮಾಡಲು ಎಲ್ಲ ನಾಗರಿಕರು ಪುರಸಭೆಯೊಂದಿಗೆ ಕೈಜೋಡಿಸುವಂತಹ ಕಾರ್ಯ ಮಾಡಿ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.
ಸೋಮವಾರರಂದು ಪಟ್ಟಣದಲ್ಲಿ ಪುರಸಭೆ ತಾಳಿಕೋಟೆ ನೇತೃತ್ವದಲ್ಲಿ ಎಸ್.ಬಿ.ಎಂ.೨.೦ ನಗರ ಯೋಜನೆಯಡಿ ಆಯ್‌ಇಸಿ ಕಾರ್ಯಕ್ರಮದ ಅಂಗವಾಗಿ ಪಟ್ಟಣದ ಸ್ವಚ್ಚತಾ ಆಸಕ್ತ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಶ್ರೀ ಖಾಸ್ಗತೇಶ್ವರ ಮಠದಿಂದ ಎಸ್.ಕೆ.ಗಾರ್ಡನ್ ವರೆಗೆ ಹಮ್ಮಿಕೊಂಡ ಸ್ವಚ್ಚತಾ ರ‍್ಯಾಲಿಗೆ ಚಾಲನೆ ನೀಡಿ ರ‍್ಯಾಲಿಯ ನೇತೃತ್ವ ವಹಿಸಿ ಮಾತನಾಡಿದ ಅವರು ಇಂದು ಪ್ಲಾಸ್ಟಿಕ್ ಬಳಕೆ ದಿನೇ ದಿನೇ ಹೆಚ್ಚುತ್ತಿದೆ ಈ ಪ್ಲಾಸ್ಟಿಕ್ ಬಳಕೆಯಿಂದ ಪರಿಸರವೆಂಬುದು ನಾಶವಾಗಲಿದೆ ಆದಷ್ಟು ಜನರು ಪ್ಲಾಸ್ಟಿಕ್ ಬಳಕೆಯಿಂದ ದೂರಬರಬೇಕು ಕಾಯಪಲ್ಲೆ ಸಂತಿಗೆ ಮತ್ತು ಇನ್ನಿತರ ಕಾರ್ಯಕೆಲಸಕ್ಕೆ ಹೋದಾಗ ಪ್ಲಾಸ್ಟಿಕ್ ಚೀಲದಲ್ಲಿಯೇ ಸಾಮಾನುಗಳನ್ನು ತರುವದು ರೂಡಿಯಾಗಿಸಿಕೊಂಡಿದ್ದು ಕಾಣುತ್ತೇವೆ ಇದನ್ನು ಆದಷ್ಟು ಜನರು ಪ್ಲಾಸ್ಟಿಕ್ ಚೀಲ ಬಳಕೆಯನ್ನು ತಪ್ಪಿಸಿಕೊಳ್ಳಬೇಕು ಮನೆಯಿಂದ ಹೋಗವಾಗಲೇ ಬಟ್ಟೆ ಚೀಲಗಳನ್ನು ತೆಗೆದುಕೊಂಡು ಹೋಗುವ ರೂಡಿ ಮಾಡಿಕೊಳ್ಳಬೇಕೆಂದು ತಿಳಿ ಹೇಳಿದ ಅವರು ಮನೆಯಲ್ಲಿಯ ಕಸವನ್ನು ನಿತ್ಯ ಮನೆಯ ಹತ್ತಿರ ಬರುವ ಪುರಸಭೆ ವಾಹನಕ್ಕೆ ಹಾಕುವಂತಹ ಕಾರ್ಯ ಮಾಡಿರಿ ಚರಂಡಿ ರಸ್ತೆ ಇನ್ನಿತರ ಕಡೆ ಎಸೆಯುವದನ್ನು ಮಾಡಬೇಡಿ ಒಣ ಕಸ ಮತ್ತು ಹಸಿ ಕಸಕ್ಕಾಗಿ ಪುರಸಭೆಯಿಂದ ಈಗಾಗಲೇ ಬುಟ್ಟಿಗಳನ್ನು ನೀಡಿದ್ದು ಆದಷ್ಟು ಕಸವನ್ನು ಬೇರ್ಪಡಿಸಿ ಕಸದ ಗಾಡಿಗೆ ಹಾಕುವಂತಹ ಕಾರ್ಯ ಮಾಡಿರಿ ಎಂದ ಸುಂದರ ತಾಳಿಕೋಟೆ ನಗರವನ್ನಾಗಿ ಬೆಳೆಸಲು ಕಿಡ ಮರಗಳನ್ನು ಹಚ್ಚುವಂತಹ ಕೆಲಸದಲ್ಲಿ ತೊಡಗಿಕೊಳ್ಳಿ ಅವುಗಳನ್ನು ಪೋಷಿಸುವಂತಹ ಜವಾಬ್ದಾರಿಯು ನಿಮ್ಮದಾಗಿದೆ ಎಂದ ಅವರು ಈಗಾಗಲೇ ಪಟ್ಟಣದ ಪ್ರಮುಖ ಎಲ್ಲ ರಸ್ತೆಗಳಲ್ಲಿ ಅರಣ್ಯ ಇಲಾಖೆಯಿಂದ ಗಿಡಗಳನ್ನು ನೆಡಲಾಗಿದ್ದು ಅವುಗಳ ಬೆಳವಣಿಗೆಯಿಂದ ಪಟ್ಟಣದ ಸೌಂದರ್ಯಕರಣಕ್ಕೆ ಪುಷ್ಠಿ ನೀಡಿದೆ ಇಂತಹ ಕಾರ್ಯಗಳಿಗೆ ಕೈಜೋಡಿಸುವಂತಹ ಕಾರ್ಯ ಮಾಡಿ ಐತಿಹಾಸಿಕ ತಾಳಿಕೋಟೆ ಪಟ್ಟಣವನ್ನು ಸುಂದರ ನಗರವನ್ನಾಗಿ ನಿರ್ಮಿಸುವಂತಹ ಜವಾಬ್ದಾರಿ ನಮ್ಮ ನಿಮ್ಮೇಲ್ಲರ ಮೇಲಿದ್ದು ಪುರಸಭೆಯ ಈ ಸ್ವಚ್ಚತಾ ಕಾರ್ಯಕ್ಕೆ ಸಹಕರಿಸಿರಿ ಎಂದರು.
ಶ್ರೀ ಖಾಸ್ಗತೇಶ್ವರ ಮಠದಿಂದ ಪ್ರಾರಂಭಗೊAಡ ಈ ಸ್ವಚ್ಚತಾ ರ‍್ಯಾಲಿಯು ಎಸ್.ಕೆ.ಕಾಲೇಜ್ ಮುಂಭಾಗದ ಗಾರ್ಡನ್‌ಗೆ ತೆರಳಿ ಅಲ್ಲಿ ಸ್ವಚ್ಚತಾ ಕಾರ್ಯವನ್ನು ಕೈಗೊಳ್ಳಲಾಯಿತು.
ಈ ಸಮಯದಲ್ಲಿ ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಆರೋಗ್ಯ ಅಧಿಕಾರಿ ಫೀರೋಜ ಮುಲ್ಲಾ, ಶಿವಾನಂದ ಜುಮನಾಳ, ರಂಗನಾಥ ಅಜಮನಿ, ಶ್ರೀಪಾದ ಜೋಶಿ, ಸಿದ್ದಲಿಂಗಯ್ಯ ಚೊಂಡಿಪಾಟೀಲ, ಸಿದ್ದಪ್ಪ ಕೊಳ್ಳಿ, ಪುರಸಭೆ ಮಾಜಿ ಸದಸ್ಯ ಜೈಸಿಂಗ್ ಮೂಲಿಮನಿ, ಎಸ್.ಐ,ಜಾಲವಾದಿ, ಪ್ರಶಾಂತ ಜನಾದ್ರಿ, ಶಫೀಕ್ ಇನಾಮದಾರ, ಒಳಗೊಂಡು ಪೌರಕಾರ್ಮಿಕರು ಪಾಲ್ಗೊಂಡಿದ್ದರು.



























