Home ಜಿಲ್ಲೆ ಕಲಬುರಗಿ ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ: ಮಕ್ಕಳಲ್ಲಿ ಹರ್ಷದ ಸಂಭ್ರಮ

ಪ್ರಾಥಮಿಕ ಶಾಲೆಯ ಪ್ರಾರಂಭೋತ್ಸವ: ಮಕ್ಕಳಲ್ಲಿ ಹರ್ಷದ ಸಂಭ್ರಮ

ಕರಜಗಿ : ಜೂ.2:ಬೇಸಿಗೆ ರಜೆಯ ನಂತರ ರಾಜ್ಯಾದ್ಯಂತ ಶೈಕ್ಷಣಿಕ 2026-27 ನೇ ಸಾಲಿನ ಹೊಸ ಶೈಕ್ಷಣಿಕ ವರ್ಷದ ಅಂಗವಾಗಿ ಪುನರಾರಂಭಗೊಂಡ ಹಿನ್ನೆಲೆಯಲ್ಲಿ ಅಫಜಲಪುರ ತಾಲೂಕಿನ ಜೇವರ್ಗಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾರಂಭೋತ್ಸವ ಹಾಗೂ ದಾಖಲಾತಿ ಮತ್ತು ಪೆÇೀಷಕ ಪಾಲಕರು ಹಾಗೂ ಶಿಕ್ಷಕರ ಮಹಾಸಭೆಯ ಕಾರ್ಯಕ್ರಮವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಮೊದಲ ದಿನವೇ ಮಕ್ಕಳ ಮುಖದಲ್ಲಿ ಸಂತಸ ಮತ್ತು ಉತ್ಸಾಹ ಕಂಡುಬಂದಿತು. ಹೊಸ ತರಗತಿಗೆ ಕಾಲಿಟ್ಟ ವಿದ್ಯಾರ್ಥಿಗಳು ತಮ್ಮ ಸ್ನೇಹಿತರನ್ನು ಭೇಟಿಯಾಗಿ ಖುಷಿಪಟ್ಟರು.ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಕಾಂತ ಕಾಚಾಪುರ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರವು ಮಕ್ಕಳ ಶಿಕ್ಷಣ ಸೌಲಭ್ಯದಂತಹ ಉಚಿತವಾಗಿ ನೀಡುವ ಸಮವಸ್ತ್ರ, ಪಠ್ಯ ಪುಸ್ತಕ, ಶೂ ಜೊತೆ ಸಾಕ್ಸ್ ಹಾಗೂ ಕ್ಷೀರ ಭಾಗ್ಯ ಮಧ್ಯಹ್ನದ ಬಿಸಿಯೂಟದ ಜೊತೆ ಮಕ್ಕಳಿಗೆ ಮೊಟ್ಟೆ, ಬಾಳೆ ಹಣ್ಣುಗಳು ನೀಡುತ್ತಿದೆ. ಮಕ್ಕಳಿಗೆ
ಸರ್ಕಾರದಿಂದ ಸಿಗಲು ಸೌಲಭ್ಯಗಳು ಸದುಪಯೋಗವನ್ನು ಪಡೆದುಕೊಳ್ಳುವಂತೆ ಪಾಲಕರು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಲು ಮನವಿ ಮಾಡಿದರು ಅಲ್ಲದೆ ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ವರ್ಷದ ಶುಭಾಶಯಗಳನ್ನು ಕೋರಿದರು. ಶಿಕ್ಷಣದ ಮಹತ್ವವನ್ನು ತಿಳಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ನಿಯಮಿತವಾಗಿ ಶಾಲೆಗೆ ಹಾಜರಾಗಬೇಕು ಹಾಗೂ ಉತ್ತಮ ಸಾಧನೆ ಮಾಡಬೇಕು ಎಂದು ಸಲಹೆ ನೀಡಿದರು.
ನಂತರ ಶಾಲಾ ಸಿಬ್ಬಂದಿ ಹಾಗೂ ಶಿಕ್ಷಕರು ವಿದ್ಯಾರ್ಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿದರು. ಶಾಲೆಗೆ ಹೊಸದಾಗಿ ಸೇರ್ಪಡೆಯಾದ ಮಕ್ಕಳಿಗೆ ಹೂವು ನೀಡಿ ಬರಮಾಡಿಕೊಳ್ಳಲಾಯಿತು. ಕೆಲವು ಕಡೆಗಳಲ್ಲಿ ಮಕ್ಕಳಿಗೆ ಸಿಹಿ ಹಂಚಿ, ಪಠ್ಯಪುಸ್ತಕಗಳು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.
ಪೆÇೀಷಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಕ್ಕಳನ್ನು ಶಾಲೆಗೆ ಕರೆತಂದರು. ಮಕ್ಕಳ ಶಿಕ್ಷಣದಲ್ಲಿ ಪೆÇೀಷಕರ ಪಾತ್ರ ಮಹತ್ವದ್ದಾಗಿದೆ ಎಂದು ಶಿಕ್ಷಕರು ತಿಳಿಸಿದರು. ಶಾಲೆಯ ವಾತಾವರಣವನ್ನು ಸ್ವಚ್ಛ ಹಾಗೂ ಆಕರ್ಷಕವಾಗಿ ಅಲಂಕರಿಸಲಾಗಿತ್ತು.
ಹೊಸ ಶೈಕ್ಷಣಿಕ ವರ್ಷದ ಆರಂಭವು ವಿದ್ಯಾರ್ಥಿಗಳಲ್ಲಿ ಹೊಸ ಕನಸುಗಳು ಮತ್ತು ಗುರಿಗಳನ್ನು ಮೂಡಿಸಿದೆ. ಶಾಲೆಯ ಪ್ರಾರಂಭೋತ್ಸವವು ಮಕ್ಕಳಲ್ಲಿ ಕಲಿಕೆಯ ಬಗ್ಗೆ ಆಸಕ್ತಿ ಹೆಚ್ಚಿಸುವ ಜೊತೆಗೆ ಸಂತೋಷ ಉತ್ಸಾಹವನ್ನುಂಟು ಮಾಡಿತು. ಶಾಲಾ ಆವರಣದಲ್ಲಿ ದಿನವಿಡೀ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯಾರ್ಥಿಗಳು ಉಲ್ಲಾಸದಿಂದ ತಮ್ಮ ಶೈಕ್ಷಣಿಕ ಪಯಣವನ್ನು ಆರಂಭಿಸಿದರು. ಈ ಸಂದರ್ಭದಲ್ಲಿ
ಶಾಲೆಯ ಶಿಕ್ಷಕರಾದ ಶರಣು ಕಣ್ಣಿ, ರಮೇಶ ಚಲಗೇರಿ, ದೇವಲು ರಾಠೋಡ, ಶಮಶೋದ್ದಿನ ಚೌಧರಿ ಸೇರಿದಂತೆ ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.