ಅಮೇರಿಕಾ ಜತೆ ಕೃಷಿ ವ್ಯಾಪಾರದ ಒಪ್ಪಂದಕ್ಕೆ ಸಹಿ ಹಾಕದಿರಲು ಒತ್ತಾಯ

ಕೋಲಾರ,ಡಿ.೬- ಆಮೇರಿಕ ಜೊತೆ ಮುಕ್ತ ಕೃಷಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಬಾರದೆಂದು ರೈತ ಸಂಘದಿಂದ ರೈಲ್ವೇ ನಿಲ್ದಾಣದ ಮುಂದೆ ಹಾಲು ಉತ್ಪನ್ನಗಳು ಹಾಗೂ ಮೆಕ್ಕೆ ಜೋಳ ಸಮೇತ ಹೋರಾಟ ಮಾಡಿ ರೈಲ್ವೇ ಅಧಿಕಾರಿಗಳ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.


ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಕೃಷಿಯಿಂದ ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುತ್ತಿರುವ ಕೋಟ್ಯಾಂತರ ರೈತರ ಮೇಲೆ ಕೇಂದ್ರ ಸರ್ಕಾರ ನಡೆಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡು ಕೃಷಿ ಕ್ಷೇತ್ರವನ್ನು ಬಂಡವಾಳ ಶಾಹಿಗಳ ಕಪಿಮುಷ್ಠಿಗೆ ನೀಡುವುದನ್ನು ನಿಲ್ಲಿಸಬೇಕು ಇಲ್ಲವಾದರೆ ತುತ್ತು ಅನ್ನಕ್ಕಾಗಿ ದೇಶದಲ್ಲಿ ಆಹಾರ ಕ್ರಾಂತಿ ಸೃಷ್ಠಿ ಆಗುವ ಕಾಲ ದೂರವಿಲ್ಲ ಎಂದು ವಾಸ್ತವ ಅಂಶವನ್ನು ಸರ್ಕಾರಗಳು ಮನವರಿಕೆ ಮಾಡಿಕೊಳ್ಳಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಸರ್ಕಾರಗಳಿಗೆ ಸಲಹೆ ನೀಡಿದರು.


ದೇಶದಲ್ಲಿಯೇ ಉತ್ಪನ್ನ ಆಗುವ ಹೈನುಗಾರಿಕೆ ವಾಣಿಜ್ಯ ಬೆಳೆಗಳಿಗೆ ಮಾರುಕಟ್ಟೆಯನ್ನು ಅಭಿವೃದ್ದಿಪಡಿಸಿದರೆ ರೈತರಿಗೆ ಅನುಕೂಲವಲ್ಲವೇ ಎಂಬುದು ಸರ್ಕಾರಗಳು ದೇಶದ ರೈತರ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕೆಂದು ಅಗ್ರಹಿಸಿದರು.


ಜಿಲ್ಲಾಧಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಸರ್ಕಾರಗಳು ಸಹ ರೈತರನ್ನು ಮರೆತು ಉದ್ಯೋಗ ಹಾಗೂ ದೇಶದ ಅಭಿವೃದ್ದಿ ಹೆಸರಿನಲ್ಲಿ ಕೃಷಿ ಭೂಮಿಯನ್ನೇ ಬಲವಂತದ ಭೂಸ್ವಾಧೀನ ಮಾಡಿಕೊಂಡು ತಲಾ ತಲಾಂತರಗಳಿಂದ ಕೃಷಿಯೆ ದೇವರೆಂದು ನಂಬಿರುವ ರೈತರನ್ನು ಬೀದಿಗೆ ತಳ್ಳುವ ಹುನ್ನಾರ ನಡೆಯುತ್ತಿದೆಯೇ ಎಂದು ಅನುಮಾನ ವ್ಯಕ್ತಪಡಿಸಿದರು.


ಕೋಟಿ ಕೋಟಿ ಲೀಟರ್ ಹಾಲು ಹಾಗೂ ಮೆಟ್ರಿಕ್‌ಟನ್‌ಗಳಷ್ಟು ಮೆಕ್ಕೆ ಜೋಳ ಮತ್ತು ಸೋಯಾಬೀನ್‌ನ್ನು ಬೆಳೆಯುತ್ತಿರುವ ರೈತರ ಹಿತದೃಷ್ಠಿಯಿಂದ ಆಮೇರಿಕ ಜೊತೆ ಮುಕ್ತ ಕೃಷಿ ವ್ಯಾಪಾರಕ್ಕೆ ಸಹಿ ಹಾಕದಂತೆ ಒಪ್ಪಂದ ರದ್ದು ಮಾಡಿ ದೇಶಿಯ ಉತ್ಪನ್ನಗಳಿಗೆ ರೈತರಿಗೆ ಅನುಕೂಲ ಮಾಡಿಕೊಡುವ ಜೊತೆಗೆ ಕೃಷಿ ಕ್ಷೇತ್ರ ಉಳಿಸಬೇಕೆಂದು ಮನವಿ ಮೂಲಕ ಅಗ್ರಹಿಸಿದರು.


ಹೋರಾಟದಲ್ಲಿ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ.ರಾಮಕೃಷ್ಣಪ್ಪ. ಚನ್ನ ರಾಯಪ್ಪ. ಸುಪ್ರೀಂಚಲ, ಶೈಲಜ ರತ್ನಮ್ಮ ಭೈರಮ್ಮ. ಗೀರೀಶ ಪುತ್ತರೀ ರಾಜು. ವೆಂಕಟಮ್ಮ, ಚೌಡಮ್ಮ,ಮಂಜಮ್ಮ ಚೌಡಮ್ಮ ಗುಣಮ್ಮ ನಾಗರತ್ನಮ್ಮ ರಾಧ. ವೆಂಕಟ ಲಕ್ಷ್ಮಮ್ಮ. ಮುಂತಾದವರಿದ್ದರು.