ಸೆ. ೧೫ ರಂದು ಸರ್.ಎಂ.ವಿಶ್ವೇಶ್ವರಯ್ಯ ಜನ್ಮಶತಮಾನೋತ್ಸವ ಪ್ರಯುಕ್ತ ಇಂಜಿನಿಯರ್ಸ್ ಡೇಪಾಲ್ಗೊಳ್ಳಲು ಅಧ್ಯಕ್ಷ ವೀರಶೆಟ್ಟಿ ಮಣಗೆ ಕರೆ

ಬೀದರ:ಸೆ.೧೩: ಈ ತಿಂಗಳ ೧೫ ರಂದು ಸೋಮವಾರ ನಗರದ ಡಾ. ಚನ್ನಬಸವ ಪಟ್ಟದ್ದೇವರು ರಂಗಮAದಿರದಲ್ಲಿ ಮಧ್ಯಾಹ್ನ ೧೨-೪೫ಕ್ಕೆ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯನವರ ೧೬೫ನೇ ಜನ್ಮಶತಮಾನೋತ್ಸವ ನಿಮಿತ್ಯ ಇಂಜಿನಿಯರ್ಸ್ ಡೇ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ (ಇಂಡಿಯಾ) ಬೀದರ ಘಟಕದ ಅಧ್ಯಕ್ಷರಾದ ವೀರಶೆಟ್ಟಿ ಮಣಗೆ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ಅವರು ಈ ದಿನಾಚರಣೆ ನಿಮಿತ್ಯ ಬೆ. ೯-೩೦ ಕ್ಕೆ ನಗರದ ಬಸವೇಶ್ವರ ವೃತ್ತದಿಂದ ಸರ್.ಎಂ.ವಿಶ್ವೇಶ್ವರಯ್ಯನವರ ಭಾವಚಿತ್ರದ ಮೆರವಣಿಗೆ ಜರುಗಲಿದೆ. ಮೆರವಣಿಗೆಯನ್ನು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಶಂಕರ ಕಾಮಶೆಟ್ಟಿ ಉದ್ಘಾಟಿಸುವರು. ಈ ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಭಗತಸಿಂಗ್ ವೃತ್ತ, ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ, ಮೋಹನ್ ಮಾರ್ಕೆಟ್, ರೋಟರಿ ವೃತ್ತದ ಮಾರ್ಗವಾಗಿ ಸರಿಯಾಗಿ ಬೆ. ೧೧-೩೦ಕ್ಕೆ ಡಾ. ಚನ್ನಬಸವ ಪಟ್ಟದ್ದೇವರ ರಂಗಮAದಿರ ತಲುಪಲಿದೆ. ನಂತರ ಮಧ್ಯಾಹ್ನ ೧೨-೪೫ ಗಂಟೆಗೆ ವೇದಿಕೆ ಕಾರ್ಯಕ್ರಮ ಜರುಗಲಿದ್ದು, ಕಾರ್ಯಕ್ರಮದಲ್ಲಿ ಕರ್ನಾಟಕ ನೀರಾವರಿ ನಿಗಮದ ನಿ. ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಗುಂಗೆ ಮುಖ್ಯ ಅತಿಥಿಗಳಾಗಿ ಮಾತನಾಡುವರು. ಗೌರವ ಅತಿಥಿಗಳಾಗಿ ಮಹಾರಾಷ್ಟç ರಾಜ್ಯದ ಜಾಲನಾ ಜಿಲ್ಲೆಯ ಎಸ್‌ಆರ್‌ಜೆ ಪೀಟಿ ಸ್ಟೀಲ್ ಕಂಪನಿಯ ಪ್ರಾದೇಶಿಕ ವ್ಯವಸ್ಥಾಪಕ ವಲ್ಲಭ ಪಾತುರಕರ್ ಪಾಲ್ಗೊಳ್ಳುವರು. ಈ ಕಾರ್ಯಕ್ರಮವು ಸಂಪೂರ್ಣ ರಾಜಕೀಯ ರಹಿತವಾಗಿರಲಿದ್ದು, ಯಾವುದೇ ಜನಪ್ರತಿನಿಧಿಗಳಾಗಲೀ, ರಾಜಕೀಯ ವ್ಯಕ್ತಿಗಳಾಗಲೀ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಈ ಸಂದರ್ಭದಲ್ಲಿ ಕೃಷ್ಣ ಭಾಗ್ಯ ಜಲ ನಿಗಮದ ನಿ. ಸಹಾಯಕ ಅಭಿಯಂತರರಾದ ವಿಲಾಸಕುಮಾರ ಮಾಶೆಟ್ಟಿ ಹಾಗೂ ಖಾಸಗಿ ಇಂಜಿನಿಯರ್‌ರಾದ ಸುಧಾಕರ ಗರ್ಜೆ ಅವರನ್ನು ಸನ್ಮಾನಿಸಲಾಗುತ್ತಿದೆ. ಇದೇ ವೇಳೆ ಡಿಪ್ಲೋಮಾ ಸಿವಿಲ್ ಹಾಗೂ ಸಿವಿಲ್ ಇಂಜಿನಿಯರ್ ಅಧ್ಯಯನ ಮಾಡುತ್ತ ಹೆಚ್ಚು ಅಂಕ ಪಡೆದುಕೊಂಡ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಗುತ್ತಿದೆ ಎಂದು ಮಣಗೆ ತಿಳಿಸಿದರು.
೨೦೧೧ ರಿಂದ ಈ ಸಂಸ್ಥೆ ಪ್ರಾರಂಭವಾಗಿದ್ದು ಅಂದಿನಿAದ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಅಸೋಸಿಯೇಶನ್ ಆಫ್ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಶನ್ ಕೂಡಾ ಈ ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದೆ ಎಂದರು.
ಅಸೋಸಿಯೇಶನ್ ಕಾರ್ಯದರ್ಶಿ ಅಶೋಕ ಉಪ್ಪೆ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅಸೋಸಿಯೇಶನ್ ಖಜಾಂಚಿ ಓಂಕಾರ ಪಾಟೀಲ, ಆಡಳಿತ ಮಂಡಳಿ ಸದಸ್ಯ ಶಿವಕುಮಾರ ಪಾಟೀಲ, ಅಮೀತಕುಮಾರ ನಾಗೂರೆ ಸೇರಿದಂತೆ ಇತರರು ಉಪಸ್ಥಿತರಿದ್ದರು.