ಕನ್ನಡ ಭಾಷೆ ಮತ್ತು ಸಾಂಸ್ಕøತಿಕ ಗುರುತು ಸಂರಕ್ಷಿಸಿ:ಡಾ.ಹೆಬ್ಬಾಳೆ

ಬೀದರ್:ನ.3:ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಗುರುತನ್ನು ಸಂರಕ್ಷಿಸುವ ಮತ್ತು ಉತ್ತೇಜಿಸಲು ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ಪರಂಪರೆಯ ಗೌರವ ಮತ್ತು ಶೈಕ್ಷಣಿಕ ಶ್ರೇಷ್ಠತೆಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದು ಕರ್ನಾಟಕ ಸಾಹಿತ್ಯ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ನುಡಿದರು.

ಅವರು ಬೀದರ್‍ನ ಶ್ರೀ ಸತ್ಯಂ ಪದವಿ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹೊಸ ಬ್ಯಾಚ್‍ನ ವಿದ್ಯಾರ್ಥಿಗಳಿಗೆ ಆತ್ಮೀಯ ಸ್ವಾಗತ ನೀಡಿದರಲ್ಲದೆ ಕಾಲೇಜಿನ ಪರಂಪರೆಗೆ ಸಕಾರಾತ್ಮಕವಾಗಿ ಕೊಡುಗೆ ನೀಡಬೇಕೆಂದರು.

ಕೃಷ್ಣ ಟ್ರಸ್ಟನ ಅಧ್ಯಕ್ಷರಾದ ಶಿವಾಜಿ ಭೋಸ್ಲೆ ಮತ್ತು ಶ್ರೀ ಸತ್ಯಂ ಕಾಲೇಜಿನ ಪ್ರಾಂಶುಪಾಲರಾದ ಸುವರ್ಣ ಭೋಸ್ಲೆ ಅವರು ಕನ್ನಡಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಭಾಲ್ಕಿಯ ಸಿ.ಬಿ. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪೆÇ್ರ. ರಮೇಶ್ ಪಾಟೀಲ್, ಹುಮ್ನಾಬಾದ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪೆÇ್ರ. ವೆಂಕಟ್ ಖೈರತ್, ಬೀದರ್‍ನ ಕರ್ನಾಟಕ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಎಂ. ಎಸ್. ಚೆಲ್ವಾ, ಬೀದರ್‍ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪೆÇ್ರ. ಗಂಗಾಧರ ಕೋರೆ, ಕರ್ನಾಟಕ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರಾದ ಪೆÇ್ರ. ಅನಿಲ್ ಕುಮಾರ್ ಚಿಕ್ಮನೂರು, ಬಿ.ವಿ.ಬಿ. ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲರಾದ ಪೆÇ್ರ. ಅನಿಲ್ ಕುಮಾರ್ ಅಣದೂರೆ, ನಿವೃತ್ತ ಹಿರಿಯ ಉಪನ್ಯಾಸಕರಾದ ಪೆÇ್ರ. ಅಶೋಕ್ ಕುಮಾರ್ ಶೆಟಕಾರ, ಪೆÇ್ರ. ಸೋಮಶೆಟ್ಟಿ ಅಣ್ಣೆಪ್ಪ, ಡಾ. ಪಾಟೀಲ್ ಪಂಡಿತ್, ಪೆÇ್ರ. ಎ. ಅಶೋಕ್ ಕುಮಾರ್ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಇನ್ನಿತರರು ಇದ್ದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.