Home ಜಿಲ್ಲೆ ಜನಪದ ಕಲೆ ಉಳಿಸಿ ಬೆಳೆಸಿ: ನಮ್ಮ ಸಂಸ್ಕøತಿಯ ಜೀವಾಳ ಕಾಪಾಡೋಣ

ಜನಪದ ಕಲೆ ಉಳಿಸಿ ಬೆಳೆಸಿ: ನಮ್ಮ ಸಂಸ್ಕøತಿಯ ಜೀವಾಳ ಕಾಪಾಡೋಣ

ಹುಮನಾಬಾದ್ :ಮೇ.28:ಜನಪದ ಕಲೆಗಳು ನಮ್ಮ ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಜೀವನ ಶೈಲಿಯ ಪ್ರತಿಬಿಂಬವಾಗಿವೆ. ಗ್ರಾಮೀಣ ಬದುಕಿನ ಸೊಗಡು, ಜನರ ಭಾವನೆಗಳು, ಆಚರಣೆಗಳು ಹಾಗೂ ಇತಿಹಾಸವನ್ನು ಜನಪದ ಕಲೆಗಳು ಹೊತ್ತೊಯ್ಯುತ್ತವೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಜನಪದ ಕಲೆಗಳು ನಿಧಾನವಾಗಿ ಮಾಯವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಎಂದು ಸಂಚಾರಿ ಠಾಣೆಯ ಪಿಎಸ್ ಐ ಹುಲೇಪ್ಪಾ ಗೌಡಗೌವ ರವರು ತಿಳಿಸಿದರು.
ಶ್ರೀ ವೀರಭದ್ರೇಶ್ವರ ಚಿತ್ರಕಲಾ ಮಹಾ ವಿದ್ಯಾಲಯ ಮಾಣಿಕನಗರ ಶಿವಾ ಕಲಾವಿದರ ಸಂಘ ಚಿಂಚೂಳ್ಳಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆವತಿಯಿಂದ ಭಾನುವಾರ ಆಯೋಜಿಸಿದ ಜಾನಪದ ನ್ರತ್ಯ ಸಾಂಸ್ಕೃತಿಕ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಿದ್ದರು.

ಡೊಳ್ಳು ಕುಣಿತ, ವೀರಗಾಸೆ, ಯಕ್ಷಗಾನ, ಲಾವಣಿ, ಜಾನಪದ ಹಾಡುಗಳು, ಕೀಲುಗೊಂಬೆ ಆಟ ಸೇರಿದಂತೆ ಅನೇಕ ಕಲಾರೂಪಗಳು ಗ್ರಾಮೀಣ ಭಾಗಗಳಲ್ಲಿ ಮಾತ್ರ ಸೀಮಿತವಾಗುತ್ತಿವೆ. ಯುವಜನತೆ ಪಾಶ್ಚಾತ್ಯ ಸಂಸ್ಕೃತಿಯತ್ತ ಹೆಚ್ಚು ಆಕರ್ಷಿತರಾಗುತ್ತಿರುವ ಕಾರಣ ಜನಪದ ಕಲೆಯ ಮಹತ್ವ ಕಡಿಮೆಯಾಗುತ್ತಿದೆ. ಎಂದರು. ದಶರಥ ರಾಥೋಡ ಮಾತನಾಡಿ, ಸರ್ಕಾರ ಮತ್ತು ಸಮಾಜ ಎರಡೂ ಜನಪದ ಕಲಾವಿದರ ನೆರವಿಗೆ ಬರಬೇಕಾಗಿದೆ.

ಶಾಲಾ-ಕಾಲೇಜುಗಳಲ್ಲಿ ಜನಪದ ಕಲೆಗೆ ಪೆÇ್ರೀತ್ಸಾಹ ನೀಡಬೇಕು. ಗ್ರಾಮೀಣ ಭಾಗಗಳಲ್ಲಿ ಜನಪದ ಉತ್ಸವಗಳನ್ನು ಆಯೋಜಿಸಿ ಕಲಾವಿದರಿಗೆ ವೇದಿಕೆ ಕಲ್ಪಿಸಬೇಕು. ಕಲಾವಿದರಿಗೆ ಆರ್ಥಿಕ ನೆರವು, ಮಾಸಾಶನ ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು ಅಗತ್ಯವಾಗಿದೆ ಎಂದರು.

ಜನಪದ ಕಲೆ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ನಮ್ಮ ಮುಂದಿನ ಪೀಳಿಗೆಗೆ ನಾಡಿನ ಪರಂಪರೆಯನ್ನು ಪರಿಚಯಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ಆದ್ದರಿಂದ ಎಲ್ಲರೂ ಸೇರಿ “ಜನಪದ ಕಲೆ ಉಳಿಸಿ, ಬೆಳೆಸಿ” ಎಂಬ ಸಂದೇಶವನ್ನು ಕಾರ್ಯರೂಪಕ್ಕೆ ತರಬೇಕಾಗಿದೆ ಎಂದರು. ಈ ಸಂದರ್ಬದಲ್ಲಿ, ಗುಂಡಪ್ಪ ದೊಡ್ಡಮನಿ, ವಿರೇಶರಡ್ಡಿ, ಭಾಗ್ಯಶ್ರೀ, ದೇವಿಕಾ ರಡ್ಡಿ, ರುಕ್ಮಣಿ ಬಾಯಿ, ಕಲಬರುಗಿ ಡ್ಯಾನ್ಸ ಸಂಘ ಅಕ್ಷಯ ಎಂಕಪ್ಪಾ, ಶಿವರಾಥೋಡ, ಶಿವ ರಂಜನ, ದಿನೇಶ, ಸೇರಿದಂತೆ ಇತರರಿದ್ದರು.