ವಿರಕ್ತ ಅಜ್ಜನ ಮೂರ್ತಿ ಪ್ರತಿಷ್ಠಾಪನೆಗೆ ಸಜ್ಜು

ತಾಳಿಕೋಟೆ:ಜೂ.28: ರಾಜ್ಯದ ಪ್ರತಿಷ್ಠಿತ ಪ್ರಮುಖ ಮಠಗಳಲ್ಲೋಂದಾದ ತಾಳಿಕೋಟೆಯ ಶ್ರೀ ಖಾಸ್ಗತೇಶ್ವರ ಮಠದ ಭವ್ಯ ಪರಂಪರೆಗೆ ಸಾಕ್ಷೀಕರಿಸುತ್ತಾ ಸಾಗಿದಂತೆ ಸದ್ಯ ಶ್ರೀಮಠದ ಲಿಂಗೈಕ್ಯ ಶ್ರೀ ವಿರಕ್ತ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆಗೆ ಕೌಟಿಲ್ಯ ಅಕಾಡೆಮಿಯು ಕೈ ಜೋಡಿಸಿದ್ದು ರವಿವಾರರಂದು ಶ್ರೀಮಠದಲ್ಲಿ ಪ್ರತಿಷ್ಠಾಪನಾ ಕಾರ್ಯವು ಭಕ್ತಿ ಭಾವದಿಂದ ನೇರವೇರಲಿದೆ.
ಪಟ್ಟಣದ ಮಿಣಜಗಿ ಕ್ರಾಸ್‍ನಲ್ಲಿರುವ ಕೌಟಿಲ್ಯ ಅಕಾಡೆಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರಾಜಶೇಖರ ಸಜ್ಜನ ಅವರ ಕುಟುಂಭಸ್ಥರ ನೇತೃತ್ವದಲ್ಲಿ ಸಿದ್ದಗೊಂಡಿರುವ ಶ್ರೀ ವಿರಕ್ತ ಮಹಾಸ್ವಾಮಿಗಳ ಭವ್ಯ ಮೂರ್ತಿಯು ಮುದ್ದೇಬಿಹಾಳ ತಾಲೂಕಿನ ಸರಕೋಳೂರ ಗ್ರಾಮದ ಕಲಾವಿದರಾದ ಶಿಕ್ಷಕ ರಾಜು ಮ್ಯಾಗೇರಿ ಅವರು ಸಿಮೇಂಟ್ ಮತ್ತು ಸ್ಟಿಲ್‍ನಲ್ಲಿ ವಿರಕ್ತಶ್ರೀಗಳು ಲಿಂಗಪೂಜೆಯಲ್ಲಿ ತಲ್ಲಿನರಾದ ಸ್ಥಿತಿಯಲ್ಲಿನ ಮೂರ್ತಿಯನ್ನು ತಯಾರಿಸಿ ಹೊಸ ರೂಪಕವನ್ನು ನೀಡಿದ್ದಾರೆ.
ಕೌಟಿಲ್ಯ ಅಕಾಡೆಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಸಜ್ಜನ ಅವರ ಕುಟುಂಭಸ್ಥರು ಸುಮಾರು 4, 5 ತಲೆಮಾರುಗಳಿಂದಲೂ ಶ್ರೀ ಖಾಸ್ಗತೇಶ್ವರ ಮಠದ ಭಕ್ತರಾಗಿದ್ದು ವಿರಕ್ತಶ್ರೀಗಳೊಂದಿಗೆ ಅವರು ಹೊಂದಿದ್ದ ಒಡನಾಟ ಮತ್ತು ಅವರ ಮೇಲಿನ ಪ್ರೀತಿ ಈ ಮೂರ್ತಿ ಪ್ರತಿಷ್ಠಾಪನೆಗೆ ಹೆಜ್ಜೆಯನ್ನು ಹಾಕಿಸಿದೆ. ಸುಮಾರು 4 ಅಡಿ ಎತ್ತರ ಹೊಂದಿರುವ ಶ್ರೀ ವಿರಕ್ತಶ್ರೀಗಳ ಮೂರ್ತಿಯ ಪ್ರತಿಷ್ಠಾಪನೆ ಶ್ರೀಮಠದಲ್ಲಿ ಯಾದರೆ ಭಕ್ತರ ಮನ ತಣಿಯುವದರಲ್ಲಿ ಯಾವ ಸಂಶಯವಿಲ್ಲಾ.
ಶ್ರೀ ಖಾಸ್ಗತೇಶ್ವರ ಮಠದಲ್ಲಿ ಈ ಹಿಂದೆ ಭಕ್ತರ ದರ್ಶನಕ್ಕೆ ಶ್ರೀ ವಿರಕ್ತಶ್ರೀಗಳ ಮೂರ್ತಿಯನ್ನು ಶ್ರೀಮಠದ ವತಿಯಿಂದ ವ್ಯವಸ್ಥೆ ಮಾಡಲಾಗಿತ್ತು ಆದರೆ ಶ್ರೀ ಮಠದ ಶ್ರೀ ಖಾಸ್ಗತೇಶ್ವರ ಸಭಾ ಭವನ ಉದ್ಘಾಟನೆಯ ಸಮಯದಲ್ಲಿ ಮೂರ್ತಿ ಸ್ಥಳಾಂತರಿಸಿ ಸಭಾ ಭವನದಲ್ಲಿ ಪ್ರತಿಷ್ಠಾಪನೆ ಮಾಡಿದ್ದರಿಂದ ಶ್ರೀಮಠದಲ್ಲಿ ವಿರಕ್ತಶ್ರೀಗಳ ಮೂರ್ತಿಯ ಕೊರತೆ ಎದ್ದು ಕಾಣುತ್ತಿತ್ತು ಆದರೆ ಕೌಟಿಲ್ಯ ಅಕಾಡೆಮಿ ನೇತೃತ್ವದಲ್ಲಿ ಅಧ್ಯಕ್ಷರಾದ ರಾಜಶೇಖರ ಸಜ್ಜನ ಅವರ ಕುಟುಂಭಸ್ಥರು ಶ್ರೀಮಠದ ಜಾತ್ರೋತ್ಸವದ ಮುಂಚೆಯೇ ವಿರಕ್ತಶ್ರೀಗಳು ಲಿಂಗಪೂಜೆಯಲ್ಲಿ ತಲ್ಲಿನರಾದ ಮೂರ್ತಿಯನ್ನು ಪ್ರತಿಷ್ಠಾಪನೆಗೆ ಮುಂದಾಗಿರುವದು ಭಕ್ತರ ಸಂತಸಕ್ಕೆ ಕಾರಣವಾಗಿದೆ.

ಶ್ರೀ ಖಾಸ್ಗತೇಶ್ವರ ಮಠದ ಪರಂಪರೆಯನ್ನು ಉಳಿಸಿ ಬೆಳೆಸುವದರೊಂದಿಗೆ ಭಕ್ತರ ಮನ ತಣಿಸುವಂತಹ ಕಾರ್ಯ ಮಾಡುತ್ತಾ ಬಂದಿದ್ದ ಲಿಂ.ಶ್ರೀ ವಿರಕ್ತ ಮಹಾಸ್ವಾಮಿಗಳು ಇಲ್ಲಾ ಎಂಬ ಕೊರಗನ್ನು ನೀಗಿಸುತ್ತಾ ಸಾಗಿರುವ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಕೌಟಲ್ಯ ಅಕಾಡೆಮಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಸಜ್ಜನ ಅವರ ಕುಟುಂಭಸ್ಥರು ಕೈಗೊಂಡಿರುವ ಈ ಕಾರ್ಯಕ್ಕೆ ಶ್ಲಾಘಿಸಿದ್ದಾರೆ.

ಬೈಕ್ ರ್ಯಾಲಿ :- ಶ್ರೀ ವಿರಕ್ತ ಅಜ್ಜನ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಮಿಣಜಗಿ ಕ್ರಾಸ್‍ನಲ್ಲಿರುವ ಕೌಟಿಲ್ಯ ಅಕಾಡೆಮಿ ಶಿಕ್ಷಣ ಸಂಸ್ಥೆಯ ಆವರಣದಿಂದ ರವಿವಾರರಂದು ಸಾಯಂಕಾಲ 4 ಗಂಟೆಗೆ ನಡೆಯಲಿರುವ ಮೇರವಣಿಗೆಗೆ ಮೇರಗು ಹೆಚ್ಚಿಸಲು ಶ್ರೀಮಠದ ಬಾಲಶಿವಯೋಗಿ ಶ್ರೀ ಸಿದ್ದಲಿಂಗ ದೇವರ ಕರೆಯ ಮೇರೆಗೆ ಯುವ ಸಮೂಹವು ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದೆ.

ಶ್ರೀ ಖಾಸ್ಗತೇಶ್ವರ ಮಠದ ಲಿಂಗೈಕ್ಯ ಶ್ರೀ ವಿರಕ್ತ ಮಹಾಸ್ವಾಮಿಗಳ ಮೂರ್ತಿ ಪ್ರತಿಷ್ಠಾಪನೆಗೆ ನಮ್ಮ ಕುಟುಂಭಕ್ಕೆ ಸಿಕ್ಕಿರುವ ಅವಕಾಶ ಸೌಭಾಗ್ಯವಾಗಿದೆ ವಿರಕ್ತಶ್ರೀಗಳಿಗೆ ಹೊರಗಣ್ಣುಗಳಿಲ್ಲದಿದ್ದರೆ ಒಳಗಣ್ಣಿನಿಂದ ಎಲ್ಲವನ್ನು ಬಲ್ಲವರಾಗಿದ್ದರು ಅವರ ಪ್ರೇರಣೆಯ ಶಕ್ತಿಯಿಂದ ನಮ್ಮ ಕುಟುಂಭಕ್ಕೆ ಸಾಕಷ್ಟು ಅನುಕೂಲವಾಗಿದೆ ಈಗೀನ ಸಿದ್ದಲಿಂಗಶ್ರೀಗಳ ಅನುಮತಿಯಂತೆ ನಮ್ಮ ಕೌಟಿಲ್ಯ ಅಕಾಡೆಮಿ ಶಿಕ್ಷಣ ಸಂಸ್ಥೆಯ ಸಹಯೋಗದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ನೇತೃತ್ವದಲ್ಲಿ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನೇರವೇರಲಿದೆ.
                                        ರಾಜಶೇಖರ ಸಜ್ಜನ

ಕೌಟಿಲ್ಯ ಅಕಾಡೆಮಿಯ ಅಧ್ಯಕ್ಷರು.

ಶ್ರೀ ಖಾಸ್ಗತೇಶ್ವರ ಮಠದ ಹೆಸರು ರಾಜ್ಯದ ಉದ್ದಗಲಕ್ಕೂ ಬೆಳೆಯಲು ಲಿಂ.ವಿರಕ್ತ ಅಜ್ಜನವರು ಮೂಲ ಕಾರೀಕರ್ತರಾಗಿದ್ದಾರೆ ಅವರ ಹೆಸರು ಅಜರಾಮರವಾಗಿ ಉಳಿಯಲಿದೆ ಅವರ ಮೇಲಿನ ಭಕ್ತರ ಪ್ರೀತಿಗೆ ಎಂದೂ ಕೊನೆ ಇಲ್ಲಾ ಕೌಟಿಲ್ಯ ಅಕಾಡೆಮಿಯ ಅಧ್ಯಕ್ಷ ರಾಜು ಸಜ್ಜನ ಅವರ ಕುಟುಂಭಸ್ಥರು ಶ್ರೀಮಠದಲ್ಲಿ ವಿರಕ್ತಶ್ರೀಗಳ ಮೂರ್ತಿಯ ಪ್ರತಿಷ್ಠಾಪನೆಗೆ ಮುಂದಾಗಿರುವದು ಶ್ಲಾಘನೀಯವಾಗಿದೆ. ಭಕ್ತರೇ ಶ್ರೀಮಠದ ಆಸ್ತಿ ಎಂಬಂತೆ ಭಕ್ತರ ಜೊತೆಗೆ ಶ್ರೀಮಠವು ಸದಾ ನಿಲ್ಲಲಿದೆ.
                                    ಬಾಲಶಿವಯೋಗಿ ಸಿದ್ದಲಿಂಗಶ್ರೀ

ಶ್ರೀ ಖಾಸ್ಗತೇಶ್ವರ ಮಠ ತಾಳಿಕೋಟೆ

ಶ್ರೀ ಖಾಸ್ಗತೇಶ್ವರ ಮಠದ ಎಲ್ಲ ಕಾರ್ಯಗಳಲ್ಲಿಯೂ ಕೌಟಿಲ್ಯ ಅಕಾಡೆಮಿಯು ಕೈಜೋಡಿಸುತ್ತಾ ಸಾಗಿಬಂದಿದೆ ಅದರಂತೆ ಶ್ರೀಮಠದಲ್ಲಿ ವಿರಕ್ತಶ್ರೀಗಳ ಮೂರ್ತಿ ಪ್ರತಿಷ್ಠಾಪನೆಗೆ ಕೌಟಿಲ್ಯ ಅಕಾಡೆಮಿಯು ಮುಂದಾಗಿದ್ದು ಈ ಭಕ್ತರ ಮನ ತಣಿಸುವ ಕಾರ್ಯಕ್ಕೆ ಶ್ರೀಮಠದ ಸಿದ್ದಲಿಂಗಶ್ರೀಗಳು ನಮ್ಮ ಅಕಾಡೆಮಿಯ ಜೊತೆಗೆ ನಿಂತಿರುವದು ನಮ್ಮ ಸೌಭಾಗ್ಯವಾಗಿದೆ.
                                        ರಾಮನಗೌಡ ಬಾಗೇವಾಡಿ
                                    ಕೌಟಿಲ್ಯ ಅಕಾಡೆಮಿಯ ಗೌರವಾಧ್ಯಕ್ಷರು.