
ತಾಳಿಕೋಟೆ:ಫೆ.೧೧: ಗರ್ಭಿಣಿ ಮಹಿಳೆಯರು ನಿತ್ಯ ಸಮಯಕ್ಕೆ ಅನುಸಾರ ಆಹಾರವನ್ನು ಸೇವಿಸಬೇಕು ಆದಷ್ಟು ಪೌಷ್ಠಿಕಾಂಶ ಆಹಾರ ಸೇವಿಸುವ ಪದ್ದತಿಗಳನ್ನು ಅಳವಡಿಸಿಕೊಳ್ಳಬೇಕು ಇದರಿಂದ ಹುಟ್ಟುವ ಮಗುವಿಗೆ ಮತ್ತು ತಾಯಿಗೆ ಯಾವುದೇ ರೀತಿಯ ತೊಂದರೆಗಳು ಬರುವದಿಲ್ಲಾವೆಂದು ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಶ್ರೀಮತಿ ನೀಲಮ್ಮ ಪಾಟೀಲ ಅವರು ಹೇಳಿದರು.
ಪಟ್ಟಣದ ಭೋವಿ ಸಮಾಜ ಬಡಾವಣೆಯ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತು ಮಕ್ಕಳ ಅಭಿವೃದ್ದಿ ಇಲಾಖೆವತಿಯಿಂದ ಏರ್ಪಡಿಸಲಾದ ಗರ್ಭಿಣಿ ಬಾಣಂತಿಯರಿಗೆ ಮಾರ್ಗದರ್ಶನ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಗರ್ಭಿಣಿ ಮಹಿಳೆಯರು ಊಟಕ್ಕೆ ಹೆಚ್ಚಾಗಿ ತರಕಾರಿ ಬಳೆಸುವಂತಹ ಪದಾರ್ಥಗಳನ್ನು ಸೇವಿಸಬೇಕು ಅದರ ಜೊತೆಗೆ ಮೊಳಕೆ ಕಾಳುಗಳು ಸೇವಿಸಬೇಕು ವಿಟಾಮಿನ್ ಎ ಪದಾರ್ಥಗಳು ಸೇವನೆಯಿಂದ ದೇಹದಲ್ಲಿ ಸಮತೋಲನ ಕಾಪಾಡಿಕೊಳ್ಳಲಿದೆ ಗರ್ಭಿಣಿಯರಿಗೆ ರಕ್ತ ಕಡಿಮೆಯಾಗಿದ್ದರೂ ಹೆಚ್ಚಿಸುವಂತಹ ಕೆಲಸ ತರಕಾರಿ ಪದಾರ್ಥದ ಸೊಪ್ಪುಗಳು ಮಾಡಲಿವೆ ಎಂದ ಅವರು ಹುಟ್ಟುವ ಮಕ್ಕಳು ಸದೇಢವಾಗಿ ಇರುಬೇಕು ಎಂಬ ಉದ್ದೇಶದಿಂದ ಮಹಿಳಾ ಮತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಇಂತಹ ಕಾರ್ಯಕ್ರಮಗಳನ್ನು ಅಗ್ಗಾಗ್ಗೆ ಹಮ್ಮಿಕೊಳ್ಳಲಾಗುತ್ತಿದೆ ಹುಟ್ಟುವ ಮಕ್ಕಳು ನಮ್ಮ ದೇಶದ ಭವಿಷ್ಯ ಸೃಷ್ಠಿಸುವ ಮಕ್ಕಳು ಜನಿಸಬೆಕು ಸದೃಡ ದೇಹಹೊಂದಿದ್ದರೆ ಬೆಳವಣಿಗೆಯ ಜೊತೆಗೆ ಮಾನಸಿಕತೆಯಿಂದ ದೂರವಿರಲಿವೆ ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಗರ್ಭಿಣಿತಾಯಂದಿರರು ಪಡೆದುಕೊಳ್ಳಬೇಕು ಎಂದು ಸಲಹೆಗಳನ್ನು ನೀಡಿದರು.
ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಸರೋಜಿನಿ ಪೂಜಾರಿ ಮಾತನಾಡಿ ಬಾಣಂತಿಯರು ಎಣ್ಣೆಯ ಪದಾರ್ಥಗಳನ್ನು ಸೇವಿಸುವದನ್ನು ಕಡಿಮೆ ಮಾಡಬೇಕು ವಿಟಾಮಿನ್ ಎ ಮತ್ತು ಕ್ಯಾಲ್ಸಿಯಂ ಅಲ್ಲದೇ ತರಕಾರಿ ಅಂತಹ ಪೌಷ್ಠಿಕತೆ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಇದರಿಂದ ಹುಟ್ಟುವ ಮಗು ಅಲ್ಲದೇ ತಾಯಿಯೂ ಕೂಡಾ ಆರೋಗ್ಯವಂತಾಗಿರಲಿದ್ದಾರೆ ಇದನ್ನು ಪ್ರತಿಯೊಬ್ಬ ಬಾಣಂತಿಯರು ತಿಳಿದುಕೊಳ್ಳಬೇಕೆಂದು ಸಲಹೆಗಳನ್ನು ನೀಡಿದರು.
ಈ ಸಮಯದಲ್ಲಿ ಬಡಾವಣೆಯ ಮುಖಂಡರಾದ ಹುಸೇನಭಾಷಾ ಜಮಾದಾರ, ನಾಗಪ್ಪ ಬಳವಾಟ, ಹುಲಿಗೆಪ್ಪ ಕಟ್ಟಿಮನಿ, ಲಕ್ಷಿö್ಮÃಬಾಯಿ ಬಳವಾಟ, ಕಾಶಿಬಾಯಿ ಶರಣರ, ಮಂಜುಳಾ ಕಟ್ಟಿಮನಿ, ಗುರುಬಸಮ್ಮ ಮಠ, ಗಂಗು ಡವಳೇಶ್ವರ, ರೇಣುಕಾ ಕಭಾಡೆ, ವಿದ್ಯಾ ನಾಡಕರಣಿ, ಅನಸೂಯಾ ಪತ್ತಾರ, ದೇವಕ್ಕಿ ಬಡಿಗೇರ, ಹಾಗೂ ಬಡಾವಣೆಯ ಮಹಿಳೆಯರು ಉಪಸ್ಥಿತರಿದ್ದರು.
ಸದೃಢ ಸಮಾಜ ನಿರ್ಮಾಣದಲ್ಲಿ ತಾಯಂದಿರರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಹುಟ್ಟುವ ಮಗು ಆರೋಗ್ಯವಂತಾಗಿರಬೇಕು ಇದರಿಂದ ಆರೋಗ್ಯವಂತ ಸಮಾಜವನ್ನು ಕಟ್ಟಲು ಸಾದ್ಯವಾಗಲಿದೆ ದೇಶದ ಭವಿಷ್ಯ ರೂಪಿಸುವ ಮಕ್ಕಳು ಸದೃಢವಾಗಿ ಜನಿಸಲು ತಾಯಿಂದಿರರು ಪೌಷ್ಠಿಕಾಂಶ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಶ್ರೀಮತಿ ನೀಲಮ್ಮ ಪಾಟೀಲ
ನೌಕರರ ಸಂಘದ ರಾಜ್ಯಾದ್ಯಕ್ಷರು.






















