
ಕಲಬುರಗಿ,ನ.೩೦ – ಗಂಭೀರ ಹೊಟ್ಟೆ ನೋವು ಹಾಗೂ ಹೆಚ್ಚಿನ ಯೋನಿ ರಕ್ತಸ್ರಾವದೊಂದಿಗೆ ತೀವ್ರ ಅಸ್ವಸ್ಥತೆಯ ಸ್ಥಿತಿಯಲ್ಲಿದ್ದ ಗರ್ಭಿಣಿ ಮಹಿಳೆಯ ಮತ್ತು ಮಗುವಿನ ಜೀವವನ್ನು ಉಳಿಸುವಲ್ಲಿ ಉಸ್ತಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನುರಿತ ವೈದ್ಯರ ಮತ್ತು ವೈದ್ಯಕೀಯ ಸಿಬ್ಬಂದಿಗಳ ತಂಡ ಯಶಸ್ವಿಯಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿದೇರ್ಶಕರಾದ ಡಾ.ತನ್ವೀರ ಹುಸೇನ ಉಸ್ತಾದ ಅವರು ತಿಳಿಸಿದ್ದಾರೆ.
ಜಿಲ್ಲೆಯ ಚಿತ್ತಾಪೂರ ತಾಲೂಕಿನ ರಾವೂರ ಗ್ರಾಮದ ತುಂಬು ಗರ್ಭಿಣಿಯಲ್ಲಿ ಕಂಪ್ಲಿಟ್ ಪ್ಲಾಸೆಂಟಾ ಪ್ರೀವಿಯಾ ಜೊತೆಗೆ ಪ್ಲಾಸೆಂಟಾ ಅಕ್ರೆಟಾ ಎನ್ನುವ ಅತ್ಯಂತ ಅಪಾಯಕಾರಿ ಗರ್ಭಧಾರಣೆಯ ಸ್ಥಿತಿಯನ್ನು ಗುರುತಿಸಲಾಗಿತ್ತು. ಈ ಸ್ಥಿತಿಯಲ್ಲಿ ಪ್ಲಾಸೆಂಟಾ ಗರ್ಭಾಶಯಕ್ಕೆ ಅಸಮಾನ್ಯವಾಗಿ ಅಂಟಿಕೊAಡಿರುತ್ತದೆ ಮತ್ತು ನಿಯಂತ್ರಣಕ್ಕೆ ಬಾರದ ಭಾರೀ ರಕ್ತಸ್ರಾವವಾಗುತ್ತದೆ.
ಗಂಭೀರ ಸ್ಥಿತಿಯಲ್ಲಿದ್ದ ಗರ್ಭಿಣಿಯನ್ನು ತಕ್ಷಣವೇ ಅತ್ಯಾವಶ್ಯಕ ಸಿ-ಸೆಕ್ಷನ್ ಶಸ್ತ್ರಚಿಕಿತ್ಸೆಗೆ ಕರೆದೊಯ್ಯಲಾಯಿತು.
ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಭಾರೀ ಆಂತರಿಕ ರಕ್ತಸ್ರಾವ ಉಂಟಾಗಿ ರೋಗಿಯ ರಕ್ತದೊತ್ತಡ ತೀವ್ರವಾಗಿ ಕುಸಿದು ಜೀವಕ್ಕೆ ಅಪಾಯವಾಗಿತು. ಆಮ್ಲಜನಕ ಮಟ್ಟ ಕುಸಿಯಿತು, ಹೃದಯ ಬಡಿತ ಅಸ್ಥಿರವಾಯಿತು, ಮತ್ತು ರೋಗಿಗೆ ತೀವ್ರ ಹೃದಯ ವೈಫಲ್ಯ ಕಾಣಿಸಿಕೊಂಡಿತು.
ಇಲ್ಲಿನ ವೈದ್ಯರ ತಂಡ ತಕ್ಷಣ ಮತ್ತು ಸಮನ್ವಯದಿಂದ ಚಿಕಿತ್ಸೆಗಳಾದ ಪ್ಲಾಸೆಂಟಾ ಪ್ರೀವಿಯಾ ಮತ್ತು ಅಕ್ರೆಟಾ ಕಾರಣವಾದ ರಕ್ತಸ್ರಾವವನ್ನು ನಿಯಂತ್ರಿಸಲು ತುರ್ತು ಶಸ್ತ್ರಚಿಕಿತ್ಸೆ ಹಲವಾರು ಯುನಿಟ್ ರಕ್ತ ಮತ್ತು ಪ್ಲಾಸ್ಮಾ ಒಳಗೊಂಡ ಮ್ಯಾಸಿವ್ ಟ್ರಾನ್ಸ್ಫ್ಯೂಷನ್ ಪ್ರೋಟೋಕಾಲ್ ಜಾರಿಗೊಳಿಕೆ ಉಸಿರಾಟ ಸ್ಥಿರಗೊಳಿಸಲು ವೆಂಟಿಲೇಟರ್ ಸಹಾಯ ಹೃದಯ ಬಡಿತ ಅಪಾಯಕಾರಿಯಾದಾಗ ಜೀವ ರಕ್ಷಕ ವಿದ್ಯುತ್ ಕಾರ್ಡಿಯೋವರ್ಷನ್ ಹೃದಯ ಬಲಹೀನತೆ, ಕಡಿಮೆ ರಕ್ತದೊತ್ತಡ ಹಾಗೂ ಸೋಂಕನ್ನು ನಿಯಂತ್ರಿಸಲು ಸುಧಾರಿತ ಐಸಿಯು ಚಿಕಿತ್ಸೆ ಒಂದು ವಾರಕ್ಕೂ ಹೆಚ್ಚು ಕಾಲ ರೋಗಿಯನ್ನು ಐಸಿಯುನಲ್ಲಿ ನಿತ್ಯ ನಿಗಾದಲ್ಲಿ ಇರಿಸಲಾಗಿತ್ತು.
ರೋಗಿಯ ಹೃದಯ ಬಲಪಡಿಸಲು, ಸೋಂಕನ್ನು ನಿಯಂತ್ರಿಸಲು ಹಾಗೂ ಆಮ್ಲಜನಕ ಮಟ್ಟ ಕಾಪಾಡಲು ವಿಶಿಷ್ಟ ಚಿಕಿತ್ಸೆ ನೀಡಲಾಯಿತು. ನಿಧಾನವಾಗಿ ರೋಗಿಯ ಹೃದಯ ಕಾರ್ಯಕ್ಷಮತೆ ಉತ್ತಮಗೊಂಡಿತು, ರಕ್ತಸ್ರಾವ ನಿಲ್ಲಿತು ಹಾಗೂ ಜೀವಚಿಹ್ನೆಗಳು ಸ್ಥಿರಗೊಂಡ ನಂತರ ರೋಗಿಯನ್ನು ಐಸಿಯುದಿಂದ ಸಾಮಾನ್ಯ ವಾರ್ಡ್ಗೆ ಶಿಫ್ಟ್ ಮಾಡಲಾಯಿತು.
ಸದ್ಯಕ್ಕೆ ಚೇತರಿಸಿಕೊಂಡಿರುವ ಆಕೆ ಸ್ಥಿರ, ಎಚ್ಚರ, ಸುಲಭವಾಗಿ ಉಸಿರಾಡುತ್ತಿದ್ದು, ಉತ್ತಮ ಆರೋಗ್ಯದಲ್ಲಿದ್ದು, ತಾಯಿ ಮತ್ತು ಮಗುವನ್ನು ಅತಿ ಶಿಘ್ರವೇ ಅಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು, ಶಸ್ತ್ರಚಿಕಿತ್ಸೆಯ ಗಾಯಗಳು ಚೆನ್ನಾಗಿ ಗುಣ ಮುಖವಾಗುತ್ತಿದ್ದು, ಈಗ ಯಾವುದೇ ಅಪಾಯವಿಲ್ಲ.
ಈ ಅದ್ಭುತ ಯಶಸ್ಸು ಶಸ್ತçಚಿಕಿತ್ಸೆಯಲ್ಲಿ ಹಗಲು ರಾತ್ರಿ ಕಾರ್ಯನಿರ್ವಹಿಸಿದ ಆಸ್ಪತ್ರೆಯ ನುರಿತ ವೈದ್ಯರಾದ ಡಾ. ಸೈದಾ ಸುಬಿಯಾ ತನ್ವೀರ್ ಉಸ್ತಾದ್, ಮತ್ತು, ಡಾ. ಫಾಸಿಹಾ ಹರಿಸ್, ಡಾ. ಇರ್ಫಾನ್ ವಾರಿಸ್ ಅನಸ್ತೇಷಿಯಾಲಜಿಸ್ಟ್, ಡಾ. ಅಬ್ದುಲ್ ರಝಾಕ್ ಮತ್ತು ಎಮರ್ಜೆನ್ಸಿ ಫಿಸಿಷಿಯನ್ ಹಾಗೂ ಇಂಟೆನ್ಸಿವಿಸ್ಟ್, ಡಾ. ಶೃತಿ ಕೊಳ್ಳಿ, ಕಾರಡಿಯಾಲಜಿಸ್ಟ್, ಡಾ. ಅಹ್ಮದ್ ಫಾರಾಜ್ ಪಟೇಲ್ ಜನರಲ್ & ಲ್ಯಾಪರೋಸ್ಕೋಪಿಕ್ ಸರ್ಜನ್, ಡಾ.ಮೋಯಿಜ್, ಹಾಗೂ ನರ್ಸಿಂಗ್ ಮತ್ತು ಸಹಾಯಕ ಸಿಬ್ಬಂದಿಗಳಿಗೆ ಈ ಯಸ್ಸಸ್ಸಿನ ಶ್ರೇಯಸ್ಸು ಸಿಗಲಿದೆ ಎಂದು ಡಾ.ತನ್ವೀರ ಹುಸೇನ ಉಸ್ತಾದ ಹೇಳಿದ್ದಾರೆ.
ಕಲಬುರಗಿ ನಗರದ ಉಸ್ತಾದ್ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹಲವಾರು ಬಗೆಯ ಅಪರೂಪದ, ಅತಿ ಅಪಾಯಕಾರಿ ಮತ್ತು ತುರ್ತು ಗರ್ಭಧಾರಣೆ ಸಂಬAಧಿತ ಪ್ರಕರಣಗಳನ್ನು ಯಶ್ವಿಯಾಗಿ ಎದುರಿಸಲು ನುರಿತ ವೈದ್ಯಕೀಯ ತಂಡ ಶ್ರಮಿಸಲಿದೆ ಅಲ್ಲದೇ ಈ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಅಳವಡಿಸಲಾಗಿದೆ ಎಂದು ಡಾ.ಉಸ್ತಾದ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ನನ್ನ ಪತ್ನಿ ಮತ್ತು ಮಗುವಿನ ಜೀವ ಉಳಿಸಿದ ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗಳಿಗೆ ಹೃದಯಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇನೆ, ಗಂಭೀರ ಸ್ಥಿತಿಯಲ್ಲಿ ಸಿಲುಕಿದ್ದ ಪತ್ನಿಯನ್ನು ಕಳೆದುಕೊಳ್ಳುವ ಭಯದಲ್ಲಿದ್ದ ನನಗೆ ಧೈರ್ಯತುಂಬಿ ಉತ್ತಮ ಚಿಕಿತ್ಸೆ ಮತ್ತು ಹಾರೈಕೆಯನ್ನು ಕೈಗೊಂಡು ತಾಯಿ ಮಗುವಿನೊಂದಿಗೆ ಮನೆಗೆ ತೆರಳುತ್ತಿದ್ದೇನೆ ಎಂದು ಭಾಹುಕತೆಯಿಂದ ತಮ್ಮ ಪ್ರತಿಕ್ರೀಯೆನ್ನು ನೀಡಿದ ರೋಗಿಯ ಪತಿ ಶೇಖ ಶಕೀಲ ರಾವೂರ.























