ಜನತೆಯ ಒಳಿತಿಗಾಗಿ ಶ್ರೀ ದತ್ತನಲ್ಲಿ ಪ್ರಾರ್ಥನೆ; ಅರುಣಕುಮಾರ ಪಾಟೀಲ

ಅಫಜಲಪುರ ;ಜ.4: ಸಮಸ್ತ ನಾಡಿನ ಜನತೆಗೆ ಮತ್ತು ವಿಶೇಷವಾಗಿ ಅಫಜಲಪುರ ತಾಲ್ಲೂಕಿನ ಜನರ ಒಳಿತಿಗಾಗಿ ಸುಕ್ಷೇತ್ರ ಶ್ರೀ ದತ್ತಾತ್ರೇಯ ದೇವರಲ್ಲಿ ಭಕ್ತಿ ಭಾವದಿಂದ ಪ್ರಾರ್ಥನೆ ಮಾಡಲಾಯಿತು ಎಂದು ಕೆಕೆಆರ್ಟಿಸಿ ಅದ್ಯಕ್ಷ ಅರುಣಕುಮಾರ ಎಂ.ವೈ.ಪಾಟೀಲ ತಿಳಿಸಿದರು.

ಬನದ ಹುಣ್ಣಿಮೆ ನಿಮಿತ್ತ ಶ್ರೀಕ್ಷೇತ್ರ ದೇ. ಗಾಣಗಾಪುರದ ಶ್ರೀ ದತ್ತಾತ್ರೇಯ ಮಹಾರಾಜರ ದರ್ಶನ ಪಡೆದು ಮಾತನಾಡಿದ ಅವರು, ಹುಣ್ಣಿಮೆ ಅಂಗವಾಗಿ ಬೆಳಿಗ್ಗೆ ನಸುಕಿನ ಜಾವ ಕಾಕಡ ಆರತಿ ಪೂಜೆ ಸಲ್ಲಿಸುವ ಮೂಲಕ ಸಮಸ್ತ ನಾಡಿನ ಜನತೆ ಹಾಗೂ ಮತಕ್ಷೇತ್ರದ ಜನರ ಮೇಲೆ ಶ್ರೀ ದತ್ತಾತ್ರೇಯ ಮಹಾರಾಜರ ಆಶೀರ್ವಾದ ಇಲರೆಂದು ಭಕ್ತಪೂರ್ವಕ ಪ್ರಾರ್ಥನೆ ಮಾಡಲಾಯಿತು ಎಂದು ಅರುಣಕುಮಾರ ಪಾಟೀಲ ಹೇಳಿದರು.

ಈ ಸಂದರ್ಭದಲ್ಲಿ ಸಿದ್ದು ಕಲಶೆಟ್ಟಿ, ವೇಣು ಅವಧಾನಿ, ಶ್ರೀಕಾಂತ್ ಇದ್ದರು.


ದಕ್ಷಿಣ ಕಾಶಿ ಎಂದು ಕರೆಯುವ ಗಾಣಗಾಪೂರ ಶ್ರೀ ದತ್ತಾತ್ರೇಯ ದೇವಸ್ಥಾನಕ್ಕೆ ಪ್ರತಿ ಅಮವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ಕೆಕೆಆರ್ಟಿಸಿ ಅದ್ಯಕ್ಷ ಅರುಣಕುಮಾರ ಪಾಟೀಲ ಅವರು ತಪ್ಪದೇ ಭೇಟಿ ನೀಡಿ ತಾಲ್ಲೂಕಿನ ಜನತೆ ಒಳಿತಿಗಾಗಿ ಪ್ರಾರ್ಥನೆ ಮಾಡುತ್ತಾರೆ. ರಾಜಕೀಯ ಕೆಲಸದ ಒತ್ತಡದಲ್ಲಿಯೂ ದತ್ತನ ಸನ್ನಿಧಿಗೆ ಭೇಟಿ ನೀಡಿ ಆಶೀರ್ವಾದ ಪಡೆದುಕೊಂಡು ಸಮಸ್ತ ನಾಡಿನ ಜನತೆ ಮತ್ತು ವಿಶೇಷವಾಗಿ ಅಫಜಲಪುರ ತಾಲ್ಲೂಕಿನ ಜನರಿಗಾಗಿ ವಿಶೇಷ ಪೂಜೆ ಸಲ್ಲಿಸುವ ಅವರಿಗೆ ಇನ್ನಷ್ಟು ಜನರ ಸೇವೆ ಮಾಡಲು ಶ್ರೀ ದತ್ತಾತ್ರೇಯ ಮಹಾರಾಜರು ಶಕ್ತಿ ನೀಡಲಿ.

  • ಉದಯ್ ಭಟ್ ಪೂಜಾರಿ
    ಹಿರಿಯ ಅರ್ಚಕರು, ಶ್ರೀ ದತ್ತಾತ್ರೇಯ ದೇವಸ್ಥಾನ, ದೇ.ಗಾಣಗಾಪೂರ.