ಪ್ರತಿಭಾ ಕಾರಂಜಿ: ವಿದ್ಯಾಸಿರಿ ಶಾಲೆಯ ೭ ಮಕ್ಕಳು ಜಿಲ್ಲಾಮಟ್ಟಕ್ಕೆ ಆಯ್ಕೆ

ಹುಳಿಯಾರು, ಡಿ. ೧೯- ಹೋಬಳಿಯ ಬೋರನಕಣಿವೆಯ ವಿದ್ಯಾಸಿರಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಶಾಲೆಯ ಮಕ್ಕಳು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿ ಅತಿ ಹೆಚ್ಚು ಬಹುಮಾನಗಳನ್ನು ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತರಾದವರಲ್ಲಿ ೭ ಮಂದಿ ಪ್ರಥಮ, ೪ ಮಂದಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಹಿರಿಯರ ವಿಭಾಗದಿಂದ ಆಶುಭಾಷಣ ಅಂಜನ್‌ಗೌಡ ಪ್ರಥಮ, ದೇಶಭಕ್ತಿ ಗೀತೆಯಲ್ಲಿ ಫೈಜಾ ನೆ ರುಕಯ್ಯ ಪ್ರಥಮ, ಕ್ಲೇ ಮಾಡ್ಲಿಂಗ್‌ನಲ್ಲಿ ಮೋಕ್ಷಿತ್ ಪ್ರಥಮ, ಕಥೆ ಹೇಳುವುದರಲ್ಲಿ ಅಂಜನ್‌ಗೌಡ ಪ್ರಥಮ, ಧಾರ್ಮಿಕ ಪಠಣ ಅರೇಬಿಕ್‌ನಲ್ಲಿ ಮೊಹಮ್ಮದ್ ಸೂಫಿಯಾನ್ ದ್ವಿತೀಯ, ಹಿಂದಿ ಕಂಠಪಾಠದಲ್ಲಿ ಪೈಜಾ ನೇ ರುಕಯ್ಯ ದ್ವಿತೀಯ, ಇಂಗ್ಲೀಷ್ ಕಂಠ ಪಾಠದಲ್ಲಿ ಪೂರ್ವಿಕ ದ್ವಿತೀಯ ಸ್ಥಾನ ಪಡೆದರು.


ಕಿರಿಯ ವಿಭಾಗದಲ್ಲಿ ಕಥೆ ಹೇಳುವುದರಲ್ಲಿ ಕಾರುಣ್ಯ.ಎಸ್.ಗೌಡ ಪ್ರಥಮ, ಅಭಿನಯ ಗೀತೆಯಲ್ಲಿ ದೇವಿಕ ಪ್ರಥಮ, ಧಾರ್ಮಿಕ ಪಠಣ ಅರೇಬಿಕ್‌ನಲ್ಲಿ ಮೊಹಮ್ಮದ್ ಅರ್ಪತ್ ಪ್ರಥಮ, ಆಶುಭಾಷಣದಲ್ಲಿ ಮೋನಿಷಾ ದ್ವಿತೀಯ ಸ್ಥಾನ ಪಡೆದಿದ್ದಾರೆ.


ಪ್ರಥಮ ಸ್ಥಾನ ಪಡೆದ ೭ ಮಕ್ಕಳು ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ. ವಿಜೇತರಾದ ಎಲ್ಲ ಮಕ್ಕಳನ್ನು ಶಾಲಾ ಆಡಳಿತ ಮಂಡಳಿ ಹಾಗೂ ಮುಖ್ಯೋಪಾಧ್ಯಾಯರು ಮತ್ತು ಎಲ್ಲ ಶಿಕ್ಷಕ ವೃಂದದವರು ಅಭಿನಂದಿಸಿ, ಹರ್ಷ ವ್ಯಕ್ತಪಡಿಸಿದ್ದಾರೆ.